ಪಬ್ಲಿಕ್ ಅಲರ್ಟ್
ಮೈಸೂರು: ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ಅಗರಬತ್ತಿ ತಯಾರಕ ಕಂಪನಿ ಆಗಿರುವ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ದಸರಾ ಹಬ್ಬದ ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಎಲೆಕ್ನಿಕ್ ಬಗ್ಗೆಯನ್ನು ದೇಣಿಗೆ ನೀಡಿದೆ.
ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರಿಗೆ ವಾಹನದ ಕೀಲಿಗಳನ್ನು ಹಸ್ತಾಂತರಿಸಿದರು. ಇದೇ ವೇಳೆ ಸಂಸ್ಥೆಯು ದುರ್ಗೇಶ್ವರಿ ನವರಾತ್ರಿ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಈ ಪರಿಸರ ಸ್ನೇಹಿ ವಾಹನವು ಹಿರಿಯ ನಾಗರಿಕರು ಮತ್ತು ವಿಕಲಚೇತನ ಭಕ್ತರಿಗೆ ಸೇವೆ ಸಲ್ಲಿಸಲಿದ್ದು, ದೇವಸ್ಥಾನದ ಆವರಣದಲ್ಲಿ ಸುಲಭವಾಗಿ ಅತ್ತಿತ್ತ ಓಡಾಡಲು ನೆರವಾಗುತ್ತದೆ. ಸಮಾಜಕ್ಕೆ ಒಳಿತು ಮಾಡುವ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಪ್ರಯತ್ನದ ಭಾಗವಾಗಿ ಈ ದೇಣಿಗೆ ನೀಡಲಾಗಿದೆ.
ಈ ವಿಶೇಷ ಪ್ಯಾಕ್ ನಲ್ಲಿ ಸೂಕ್ಷ್ಮವಾಗಿ ಕೆತ್ತಲಾದ ದೇವಿಯ ಒಂಬತ್ತು ಪ್ರತಿಕೃತಿಗಳನ್ನು ನೀಡಲಾಗಿದ್ದು. ಪ್ರತಿಯೊಂದಕ್ಕೂ ಕಲರ್-ಕೋಡ್ ಕೋಲಂ ಸ್ಟ್ಯಾಂಡ್ (ಕುಶಲಕರ್ಮಿಗಳಿಂದ ರಚಿತ ಮರದ ಬಣ್ಣದ ಸ್ಟಾಂಡ್) ಒದಗಿಸಲಾಗಿದೆ. ನವರಾತ್ರಿಯ ಪ್ರತಿ ದಿನದ ಬಣ್ಣಕ್ಕೆ ಹೊಂದಿಕೊಳ್ಳುವ ಆಗರಬತ್ತಿ ಪ್ಯಾಕ್ ಗಳನ್ನೂ ನೀಡಲಾಗಿದೆ. ಈ ಸೆಟ್ ನೊಂದಿಗೆ ಗ್ರಾಫಿಕ್ ಪುಸ್ತಕ ಲಭ್ಯವಿದ್ದು, ಈ ಕೃತಿಯು ಪವಿತ್ರ ಶ್ಲೋಕಗಳನ್ನು ಒಳಗೊಂಡಿದೆ ಮತ್ತು ಜೊತೆಗೆ ಭಕ್ತಿಗೀತೆಗಳ ಯೂಟ್ಯೂಬ್ ಕ್ಯೂಆರ್ ಕೋಡ್ ಒದಗಿಸಲಾಗಿದೆ.
ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮಾತನಾಡಿ, “ಚಾಮುಂಡಿ ಬೆಟ್ಟ ಮೈಸೂರಿನ ಆಧ್ಯಾತ್ಮಿಕ ಹೃದಯ ಕೇಂದ್ರವಾಗಿದೆ. ದಸರಾ ಮತ್ತು ನವರಾತ್ರಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಮತ್ತು ಶಾಂತಿ ಬಯಸಿ ಇಲ್ಲಿಗೆ ಬರುವ ಭಕ್ತರಿಗೆ ಸೇವೆ ಸಲ್ಲಿಸುವುದು ನಮಗೆ ದೊರೆತಿರುವ ಗೌರವ ಎಂದು ಭಾವಿಸುತ್ತೇವೆ. ಭಕ್ತಿ ಸಾರುವುದಕ್ಕೆ ವಯಸ್ಸು ಅಥವಾ ದೈಹಿಕ ಸಾಮರ್ಥ್ಯ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನ ನೀಡಲಾಗಿದೆ” ಎಂದು ಹೇಳಿದರು.
