ಕಮ್ಮಾರ ಎಂದೇ ಬರೆಸುವಂತೆ ಸಮುದಾಯದವರ ಮನವಿ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು:  ರಾಜ್ಯ ಸರ್ಕಾರ ನಡೆಸಲಿರುವ ಜಾತಿ ಗಣತಿ ವೇಲೆ ಕಮ್ಮಾರ ಹಾಗೂ ಇತರೆ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯದವರು ಕಮ್ಮಾರ ಎಂದೇ ಬರೆಯಿಸಬೇಕೆಂದು ರಾಜ್ಯ ಕಮ್ಮಾರರ ಸಂಘದ ರಾಜ್ಯ ಖಜಾಂಚಿ ಟಿ.ಆರ್. ರಾಜು ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಹಲವಾರು ಕಡೆ ಗೊಂದಲಕ್ಕೊಳಗಾಗಿ ವಿಶ್ವಕರ್ಮ ಎಂದು ಬರೆಯಿಸಲು ಹಲವರು ಮುಂದಾಗುತ್ತಾರೆ. ಇದು ತಪ್ಪು. ಏಕೆಂದರೆ ಕಮ್ಮಾರರೇ ಪ್ರತ್ಯೇಕ ಸಮುದಾಯದವರಾಗಿದ್ದಾರೆ. ಇದೇ ಕಾರಣದಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮನದಿಂದ ಸೌಲಭ್ಯವೂ ದೊರೆಯುತ್ತಿಲ್ಲ ಎಂದು ವಿವರಿಸಿದರು.
ಕನ್ನಾರ, ಕಂಬಾರ, ಲೋಹಾರ, ಬೈಲು ಕಮ್ಮಾರ ಮೊದಲಾದ ಹೆಸರುಗಳಿಂದ ಕರೆಯಲ್ಪಡುವವರು ಕಮ್ಮಾರ ಎಂದೇ ಬರೆಯಿಸಬೇಕು. ೯ ನೇ ಕಾಲಂನಲ್ಲಿ ಕಮ್ಮಾರ ಎಂದು ಬರೆಯಿಸಿದರೆ ಮುಂದೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಿ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಧರ್ಮ ಹಿಂದೂ ಎಂದು ನಮೂದಿಸಿ, ಉಪ ಜಾತಿಯ ಕಾಲಂನಲ್ಲಿ ಪ್ರದೇಶವಾರು ಕರೆಯುವ ಉಪನಾಮ ನಮೂದಿಸಬೇಕೆಂದರು.
ಅಧ್ಯಕ್ಷ ಜಿ.ಟಿ. ರಂಗಸ್ವಾಮಿ,  ಎಂ. ರಮೇಶ್, ಮಂಜುನಾಥ್, ಸಿದ್ದರಾಜು, ಶೇಖರ್, ಗೋಪಾಲ್ ಇದ್ದರು.

Share This Article
Leave a Comment