ಆರ್.ಜಿ.ಎಂ ಕನ್‌ಸ್ಟ್ರಕ್ಷನ್ ನೇತೃತ್ವದಲ್ಲಿಸಿಕಾ ಮಳಿಗೆ ಉದ್ಘಾಟಿಸಿದ ಸಾರಾ ಮಹೇಶ್

Chethan
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಅಡಿಪಾಯದಿಂದ ಛಾವಣಿಯವರೆಗೆ ಕಟ್ಟಡವು ಸಂಪೂರ್ಣ ಜಲನಿರೋಧ ಆಗಿರುವಂತೆ ನೋಡಿಕೊಳ್ಳುವ ಉತ್ಪನ್ನಗಳಿಗೆ ಸಂಬಂಧಿಸಿದ ಸಿಕಾ ಮಳಿಗೆಯನ್ನು ಗುರುವಾರ ಮಾಜಿ ಸಚಿವರಾದ ಸಾರಾ ಮಹೇಶ್  ಉದ್ಘಾಟಿಸಿದರು.
ನಗರದ ಚಾಮರಾಜ ಮೊಹಲ್ಲಾ ಡಿ.ಸುಬ್ಬಯ್ಯ ರಸ್ತೆಯ ೨೯೮ನೇ ಸಂಖ್ಯೆಯ ಕಟ್ಟಡದಲ್ಲಿ ಈ ಮಳಿಗೆ ಉದ್ಘಾಟನೆಯಾಗಿದ್ದು, ಆರ್.ಜಿ.ಎಂ ಕನ್‌ಸ್ಟ್ರಕ್ಷನ್ ಸಂಸ್ಥಾಪಕರಾದ ಮಯೂರ ಗೌಡ ಮತ್ತಿತರರ ಮಾಲೀಕತ್ವದಲ್ಲಿ ಈ ಮಳಿಗೆ ಕಾರ್ಯನಿರ್ವಹಿಸಲಿದೆ.
ಸಿಕಾ ಕಂಪನಿಯು ಸುಮಾರು ೧೦೦ ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ಸ್ವಿಟ್ಜರ್ಲೆಂಡ್ ಮೂಲದ ರಾಸಾಯನಿಕ ಕಂಪನಿಯಾಗಿದೆ. ಇದರ ಉತ್ಪನ್ನಗಳನ್ನು ತಾವು ಈಗಾಗಲೇ ಬಹುದೊಡ್ಡ ಕಂಪನಿಗಳಿಗೆ ಪೂರೈಸುತ್ತಿದ್ದೇವೆ. ನಗರದ ಜನಸಾಮಾನ್ಯರೂ ಇದರ ಪ್ರಯೋಜನ
ಪಡೆಯಲಿ ಎಂದು ಮೈಸೂರಿನಲ್ಲಿ ಈ ಮಳಿಗೆ ಆರಂಭಿಸಲಾ ಗುತ್ತಿದೆ ಎಂದು ಮಯೂರ್‌ಗೌಡ ಹೇಳಿದರು.


ಈ ಸಂದರ್ಭದಲ್ಲಿ ಆರ್‌ಜಿಎಂ ಕನ್‌ಸ್ಟ್ರಕ್ಷನ್ ಸಹ ಸಂಸ್ಥಾಪಕರಾದ ಕುಮುದಾ ಮಯೂರ್, ಎಸ್.ಆರ್. ಬಾಹುಬಲಿ, ವಿಷ್ಣುಶ್ರೀ ಪ್ರಸಾದ್ ಮತ್ತಿತರರು ಇದ್ದರು.

TAGGED:
Share This Article
Leave a Comment