-ವಿ.ಲತಾ-
ಪಬ್ಲಿಕ್ ಅಲರ್ಟ್
ಮೈಸೂರು: ಯುವ ಕಾಂಗ್ರೆಸ್ ಕಾರ್ಯಕರ್ತರು ‘ಸ್ಟಾಪ್ ವೋಟ್ ಚೋರಿ’ ಅಭಿಯಾನವನ್ನು ಮತಗಳ್ಳತನ ನಿಲ್ಲಿಸಿ ಎಂದು ಅಪಪ್ರಚಾರ ಮಾಡುವ ಮುಖಾಂತರ ಸ್ಟಿಕ್ಕರ್ ಗಳನ್ನು ಸಾರಿಗೆ ಬಸ್ಗಳಿಗೆ ಅಂಟಿಸಿ ಯಾವುದೇ ಅನುಮತಿ ಇಲ್ಲದೆ ಒಂದು ರಾಜಕೀಯ ಪಕ್ಷ ಸರ್ಕಾರದ ಬಸ್ಸುಗಳಿಗೆ ಸ್ಟಿಕರ್ಸ್ ಅಂಟಿಸಿ ಸಂವಿಧಾನಕ್ಕೆ ಧಕ್ಕೆ ತಂದಿರುತ್ತಾರೆ, ಮೈಸೂರು ನಗರ ಯುವ ಮೋರ್ಚಾ ಕಾರ್ಯಕರ್ತರು ಅಧಿಕಾರಿಗೆ ದೂರು ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾ ಮೈಸೂರು ನಗರ ಅಧ್ಯಕ್ಷ ಆರ್ ರಾಕೇಶ್ ಗೌಡ, ಸರ್ಕಾರಿ ಬಸ್ ಗಳು ಇರುವುದು ಸಾರ್ವಜನಿಕರ ಸೇವೆಗಾಗಿ ಜಾಹೀರಾತು ನೀಡಿದರೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದು ಸ್ಟಿಕರ್ಸ್ ಗಳನ್ನು ಅಂಟಿಸಿರುತ್ತಾರೆ, ಆದರೆ ಯಾವುದೇ ಅನುಮತಿಯನ್ನು ಪಡೆಯದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಅಪಪ್ರಚಾರ ಮಾಡಿಕೊಂಡು ಪ್ರಚಾರದ ತೆವಲಿಗಾಗಿ ಬಸ್ಗಳಿಗೆ ಸ್ಟಿಕರ್ಸ್ ಅಂಟಿಸಿರುತ್ತಾರೆ, ಅನುಮತಿ ನೀಡಿದವರು ಯಾರು, ಅಂಟಿಸಿದವರು ಯಾರು? ಇವರುಗಳ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ತಿಳಿಸಿದರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಸುಖ ಸುಮ್ಮನೆ ಯಾವುದೇ ಸಾಕ್ಷಿ ಆಧಾರಗಳು ಇಲ್ಲದೆ ಅಭಿವೃದ್ಧಿಗಳು ಮಾಡಲಿಕ್ಕೆ ಹಣವಿಲ್ಲದೆ ವಿಚಲಿತರಾಗಿ ಅಪಪ್ರಚಾರ ಮಾಡಿಕೊಂಡು ಓಡಾಡುವುದನ್ನು ಬಿಟ್ಟು ತಮ್ಮ ಸರ್ಕಾರದ ಸಾಧನೆ ಏನು ಇಲ್ಲದಿದ್ದರೂ ಇದೆ ಸಿಕ್ಕ ಅವಕಾಶ ಎಂದು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಹೀಗೆ ಮಾಡಿಕೊಂಡು ಮುಂದುವರಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಗ್ರಹ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ ಲೋಹಿತ್,ಆರ್ ಸಚಿನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು, ಉಪಾಧ್ಯಕ್ಷರಾದ ರುದ್ರಮೂರ್ತಿ, ಟಿ ರಮೇಶ್, ಚಾಮರಾಜ ಅಧ್ಯಕ್ಷರಾದ ದಿನೇಶ್ ಗೌಡ, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಯುವ ಮೋರ್ಚಾ ಕಾರ್ಯಕರ್ತರಾದ ನಿಶಾಂತ್, ನವೀನ್, ಉಮೇಶ್, ರವಿ , ಕೀರ್ತಿ, ಕಿರಣ್, ಮುಂತಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಬಿಜೆಪಿ ಯುವ ಮೋರ್ಚಾ ದೂರು

Leave a Comment
Leave a Comment