ರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮೀನುಗಾರರ ವಿಭಾಗದ ವತಿಯಿಂದ  ಕಾರ್ಯಕಾರಣಿ ಹಾಗೂ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕಾರಣಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಮೈಸೂರು ಜಿಲ್ಲೆಯಾದ್ಯಂತ ಸುಮಾರು 10.000 ಮೀನುಗಾರರಿದ್ದಾರೆ. ಆದರೆ, ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ನಂತರದಲ್ಲಿ ಮೀನುಗಾರರ ಕುಟುಂಬಗಳು  ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುಸ್ಥಿತಿಯಲ್ಲಿದ್ದಾರೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳು ಫಲಪ್ರದವಾಗಿಲ್ಲ, ಅಧಿಕಾರಿ ವರ್ಗದ ಬದ್ಧತೆ ಮತ್ತು ಪ್ರಾಮಾಣಿಕತೆ ಕೊರತೆ. ರಾಜಕೀಯ ಪಕ್ಷಗಳು ಕೇವಲ ಚುನಾವಣೆಗೆ ಸೀಮಿತವಾಗಬಾರದು, ಜನಕಲ್ಯಾಣದ ಪರ್ಯಾಯ ಶಕ್ತಿಯಾಗಿ ಕೆಲಸ ಮಾಡಬೇಕು. ಆಡಳಿತ ಪಕ್ಷದ ರಾಜಕೀಯ ಪಕ್ಷಗಳು ಸರ್ಕಾರದೊಂದಿಗೆ ಪೂರಕವಾಗಿ ಬದ್ಧತೆ ತೋರಿಸಿದಾಗ ಮಾತ್ರ  ಸಂವಿಧಾನದ ಆಶಯಗಳು  ಗಟ್ಟಿಯಾಗುತ್ತವೆ ಎಂದರು.
ಮುಂಬರುವ ದಿನಗಳಲ್ಲಿ ಮೀನುಗಾರರ ಆರ್ಥಿಕ ಹಾಗೂ ಸಾಮಾಜಿಕ ಬಲವರ್ಧನೆಗಾಗಿ  ಮೀನುಗಾರರ ಜಿಲ್ಲಾ ಸಹಕಾರ ಸಂಘ  ಸ್ಥಾಪನೆ ಮಾಡಲು ಕಟ್ಟುನಿಟ್ಟಿನ ನಿರ್ದೇಶನವನ್ನು ನೀಡಲಾಯಿತು ಅದಕ್ಕಾಗಿ 10 ಮಂದಿಯ ಉಸ್ತುವಾರಿ ಸಮಿತಿ ನೇಮಕ ಮಾಡಲಾಯಿತು. ಮೀನುಗಾರರಿಗೆ ಸಂಬಂಧಪಟ್ಟ ಸಲಕರಣೆಗಳನ್ನು ಮತ್ತು ಅದರ ಗುಣಮಟ್ಟವನ್ನು ಅಧಿಕಾರಿಗಳಿಗೆ ತಿಳುಹಿಸಿ ಉತ್ತಮ ಗುಣಮಟ್ಟದ ಸಲಕರಣೆಗಳನ್ನು ಕೊಡಿಸುವ ಭರವಸೆಯನ್ನು ನೀಡಲಾಯಿತು. ಮೀನುಗಾರರು ತಮ್ಮ ವೃತ್ತಿಯ ಸಮಯದಲ್ಲಿ ಅಥಾಚಾರ್ಯವಾಗಿ ನಿಧನರಾದರೆ ಅಂತಹವರಿಗೆ 5 ಲಕ್ಷದವರೆಗೆ ವಿಮೆ ನೀಡಬೇಕೆಂದು ಸರ್ಕಾರಕ್ಕೆ ಹಾಕ್ಕೋತಾಯ ಮಾಡಿ ಮೀನುಗಾರರಿಗೆ ಮನೆಯನ್ನು ಕಟ್ಟಿಸಿಕೊಡಲು ಸಲಹೆಗಳನ್ನು ನೀಡಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ 250 ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ ಮಾಡಿ ಪ್ರಮಾಣವಚನವನ್ನು ಬೋಧಿಸಿ ಪಕ್ಷದ ಸಂಘಟನೆ ಮತ್ತು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು ಎಂಬ ಸೂಚನೆಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಮೀನುಗಾರರ ಘಟಕದ ಅಧ್ಯಕ್ಷ ಎಸ್.ಸಿದ್ದಯ್ಯ, ಡಿಸಿಸಿ ಉಪಾಧ್ಯಕ್ಷ ಹಡತಲೆ ಮಂಜುನಾಥ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್, ಹಿರಿಯ ಕಾರ್ಯದರ್ಶಿ ಎನ್.ಆರ್.ಎಂ.ಮಂಜು, ಸೇವಾದಳದ ಅಧ್ಯಕ್ಷ ಸಾ.ಮ.ಯೋಗೇಶ್, ಮಾಧ್ಯಮ ವಕ್ತಾರ ರಾಹುಲ್ ಕುಂಬರಹಳ್ಳಿ ಇನ್ನಿತರರು ಹಾಜರಿದ್ದರು.

Share This Article
Leave a Comment