ಪಬ್ಲಿಕ್ ಅಲರ್ಟ್
ಮೈಸೂರು: ಪ್ರಚಾರ ಸಮಿತಿ ಎನ್ನುವುದು ಬರಿ ಚುನಾವಣಾ ಸಮಯದಲ್ಲಿ ಉಪಯೋಗಿಸಿಕೊಳ್ಳುವ ಘಟಕವಲ್ಲ ಸದಾಕಾಲ ಪಕ್ಷದ ಮತ್ತು ಸರ್ಕಾರದ ಚಟುವಟಿಕೆಗಳನ್ನು ನೇರವಾಗಿ ಜನರಿಗೆ ತಲುಪಿಸಿ ಪಕ್ಷ ಸಂಘಟನೆ ಮಾಡುವಂತಹ ಒಂದು ವ್ಯಾಪಕವಾದ ವಿಭಾಗ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಮಂತ್ರಿ ವಿನಯ್ ಕುಮಾರ್ ಸೊರಕೆ ನುಡಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರಚಾರ ಕಾಂಗ್ರೆಸ್ ಸಮಿತಿ ವತಿಯ ಪದಾಧಿಕಾರಿಗಳ ವಿಶೇಷ ಸಭೆ ಹಾಗೂ ಪದಗ್ರಹಣ ಸಮಾರಂಭ ನಗರದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾಗಿತ್ತು.ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಸಿದ್ದಂತಗಳನ್ನು ತನ್ನ ವ್ಯಕ್ತಿತ್ವದಲ್ಲಿ ರೂಪಿಸಿಕೊಂಡಿದ್ದಾರೆ. ಹಾಗಾಗಿ ಅವರು ಜಾರಿಗೆ ತರುವ ಎಲ್ಲ ಯೋಜನೆಗಳು ಬಡವರ ಮತ್ತು ಜನಪರವಾದ ಯೋಜನೆಗಳಾಗಿ ಪ್ರಸಿದ್ಧಿ ಪಡೆದಿವೆ ಎಂದರು.
ಮೈಸೂರಿಗೆ ಕಾಂಗ್ರೆಸ್ ನಲ್ಲಿ ತನ್ನದೇ ಆದ ಮಹತ್ವ ಇದೆ. ಈ ಜಿಲ್ಲೆಯಿಂದ ಹಲವಾರು ಮಹಾ ನಾಯಕರು ಹೊರಹೊಮ್ಮಿದ್ದಾರೆ ಎಂದು ಹೇಳಿ ಚುನಾವಣೆ ಎನ್ನುವುದು ಯುದ್ಧ ಇದಕ್ಕೆ ಸೈನ್ಯ ಬೇಕು ಎಂದು ಹೇಳಿ ನಮಗೆ ನಮ್ಮ ಕಾರ್ಯಕರ್ತರೇ ಸೈನಿಕರು ಎಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಸಾತ್ ಕೊಡುವ ಯುವಕರರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳಿ ಕರ್ನಾಟಕದಲ್ಲಿ ಒಟ್ಟು 58000 ಬೂತ್ ಗಳು ಇವೆ. ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಗಳು ಸಂಪೂರ್ಣವಾಗಿ ಸಹಕಾರ ಕೊಟ್ಟರೆ ಬೂತ್ ಮಠದ ಕಾರ್ಯಕರ್ತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು. ಪಕ್ಷ ಸಂಘಟನೆ ಮಾಡುವ ಕೆಲಸಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಮತ್ತು ಗಾಂಧಿಗೂ ಅಂತರವಿತ್ತು ಎಂಬ ಬೇಧವನ್ನು ಬಿಜೆಪಿ ಪ್ರಚಾರ ಮಾಡುತ್ತಿದೆ. ಇಂತಹ ಸುಳ್ಳು ಪ್ರಚಾರಗಳಿಗೆ ತೆರೆಯೋ ಎಳೆಯುವ ಕೆಲಸವನ್ನು ಪ್ರಚಾರ ಸಮಿತಿಯೇ ಮಾಡಬೇಕು ಎಂಬ ಸಲಹೆಯನ್ನು ನೀಡಿದರು.
ಅಂಬೇಡ್ಕರ್ ಮತ್ತು ಗಾಂಧಿಯವರ ಚಿಂತನೆ ನಮಗೆ ಶಕ್ತಿ ಎಂದು ಹೇಳಿ ಚುನಾವಣಾ ಆಯೋಗ ಒಂದು ಪಕ್ಷದ ಕೈಪಿಡಿಯಾಗಿ ಕೆಲಸ ಮಾಡುತ್ತಿದೆ. ಚುನಾವಣೆಗಳಲ್ಲಿ ಮತದಾನವನ್ನು ಕದಿಯುವ ಕೆಲಸವನ್ನು ಬಿಜೆಪಿ ಸಲೀಸಾಗಿ ಮಾಡುತ್ತಿದೆ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸತ್ಯ ಶೋಧನ ಸಮಿತಿ ಮಾಡಿ ಅದನ್ನು ಬಯಲು ಮಾಡಿದೆವು. ಪ್ರತಿ ಕ್ಷೇತ್ರದಲ್ಲಿ 20 ರಿಂದ 30 ಸಾವಿರ ಹೆಚ್ಚುವರಿ ವೋಟ್ ಇದೆ ಎಂದ ಸತ್ಯ ನಮಗೆ ತಿಳಿಯಿತು. ಬರಿ ಮಹದೇವ ಪುರದಲ್ಲೇ 1 ಲಕ್ಷ ಮತಗಳನ್ನು ಬಿಜೆಪಿ ಕಳವು ಮಾಡಿದೆ ಎಂಬ ಆಘಾತಕಾರಿ ವಿಚಾರವನ್ನು ಬಯಲಿಗೆ ತಂದು ಸತ್ಯವನ್ನು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದರು. ಇದರ ವಿರುದ್ಧವಾಗಿ ರಾಹುಲ್ ಗಾಂಧಿಯವರು ಬಿಹಾರ್ ನಲಿ 1800 ಕಿ.ಲೋ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಅವರ ಮೇಲೆ ಮುಗಿಬೀಳುತ್ತಿದೆ ಎಂದರು. ಸಿದ್ದರಾಮಯ್ಯ ನವರ ಸರ್ಕಾರ ಬರಿ 6 ತಿಂಗಳಲ್ಲಿ ಎಲ್ಲ ಗ್ಯಾರೆಂಟಿಗಳನ್ನು ಜಾರಿಗೆ ತಂದು ಬಿಜೆಪಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ ಎಂದರು. 58 ಸಾವಿರ ಕೋಟಿ ರೂ ಗಳನ್ನು ಗ್ಯಾರೆಂಟಿಗೆ ಮೀಸಲಿಟ್ಟು ಇದರ ಜೊತೆಯಲ್ಲಿ 18 ಸಾವಿರ ಕೋಟಿರೂ ಗಳನ್ನು ರೈತರಿಗೆ ಕಾಡುತ್ತಿದ್ದಾರೆ ಮತ್ತು 20 ಸಾವಿರ ಕೋಟಿ ರೂ ಗಳನ್ನು ಮಾಶಾಸನವಾಗಿ ನೀಡಿ ನಮ್ಮ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿ ಹಣವನ್ನು ಜನಗಳಿಗೆ ನೇರವಾಗಿ ಕೊಡುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಬಹಳ ಗಟ್ಟಿಯಾಗಿ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣಾಗಳಲ್ಲಿ ಸ್ಪಷ್ಟ ಬಹುಮತ ಬರುವುದು ಖಚಿತ ಎಂದರು. ನಮ್ಮ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಜನ ಪದಾಧಿಕಾರಿಗಳು ಇದ್ದು ಇದು ನಮ್ಮ ಪಕ್ಷದ ದೊಡ್ಡ ಸಾಧನೆ ಎಂದರು. ವಿದ್ಯಾರ್ಥಿ ಕಾಂಗ್ರೆಸ್ ಇಂದ ಬಂದ ವಿನಯ್ ಕುಮಾರ್ ಸೊರಕೆ ಅವರು ಶಾಸಕರಾಗಿ ಸಂಸದರಾಗಿ ಸಚಿವರಾಗಿ ಅಪಾರವಾದ ಸೇವೆಯನ್ನು ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಂತಹ ಕಠಿಣ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಯಶಸ್ವಿಯಾಗಿ ಕಟ್ಟಿದ್ದಾರೆ ಎಂದು ಹೇಳಿದರು.
ಮಾಜಿ ಮಂತ್ರಿಗಳಾದ ಕೋಟೆ ಎಂ. ಶಿವಣ್ಣ ಮಾತನಾಡಿದರು. ಕೌಶಲ್ಯಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.


ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಮಾಜಿ ಶಾಸಕ ಎಚ್.ಪಿ ಮಂಜುನಾಥ್, ಮೂಡ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ ಬಸವರಾಜು, ಕೆಪಿಸಿಸಿ ಕಾರ್ಯದರ್ಶಿ ನರೇಂದ್ರ, ಕೆಪಿಸಿಸಿ ಪ್ರಚಾರ ಸಮಿತಿ ಮುನೀರ್, ಜಾವಿದ್, ಡಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ರವಿ.ಸಿ ಮಾವಿನಹಳ್ಳಿ, ಡಿಸಿಸಿ ನಗರ ಪ್ರಚಾರ ಸಮಿತಿ ಅಧ್ಯಕ್ಷರು ರಘು ರಾಜೇ ಅರಸ್, ಸೇವಾದಳದ ಅಧ್ಯಕ್ಷರಾದ ಸಾ.ಮ ಯೋಗೇಶ್, ಕಾಂಗ್ರೆಸ್ ಪದಾಧಿಕಾರಿಗಳಾದ ಹುಣಸೂರು ಬಸವಣ್ಣ, ಮೋಹನ್, ಲತಾ ರಂಗನಾಥ್, ಮಾಜಿ ಮೇಯರ್ ಗಳಾದ ಚಿಕ್ಕಣ್ಣ ಮತ್ತು ಪುಷ್ಪಲತಾ ಚಿಕ್ಕಣ್ಣ, ಹೆಡತಲೆ ಮಂಜುನಾಥ್, ನಾಗೇಶ್, ತಲಕಾಡು ಮಂಜುನಾಥ್, ರಮೇಶ್, ಗಿರೀಶ್, ಮಂಜು, ಲಕ್ಷ್ಮಣ್ ಇತರರು ಹಾಜರಿದ್ದರು.