ಇಂದಿರಾರಿMದಲೇ ಮಹಿಳಾ ರಾಜಕಾರಣದ ಅಧಿಪತ್ಯ: ಸಚಿವ ಬೋಸರಾಜ್

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂ ಧಿಯವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮ ದಿನವನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಣ್ಣ ನೀರಾವರಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್.ಬೋಸರಾಜು ಭಾರತದ ಹೆಗ್ಗುರುತು ಇಂದಿರಾ ಗಾಂಧಿಯವರನ್ನು ಭದ್ರತೆಯಲ್ಲಿದ್ದ ಪೊಲೀಸ್ ಅಧಿಕಾರಿಗಳೇ ಹತ್ತೆಗೈದ ದಿನ. ಆದರೆ, ಭಾರತದ ಮಹಿಳಾ ರಾಜಕಾರಣದ  ಅಧಿಪತ್ಯಕ್ಕೆ ಅಡಿಗಲಿಟ್ಟಿದ್ದು, ಇಂದಿರಾಗಾAಧಿ ಎಂಬುದನ್ನು ಈ ಜಗತ್ತು ಮರೆಯಲು ಸಾಧ್ಯವಿಲ್ಲ. ಅಂದು ಮಹಿಳಾ ಸ್ವಾತಂತ್ರ‍್ಯ ಮತ್ತು  ಸಾಮಾಜಿಕ ಭದ್ರತೆಗೆ  ದೊಡ್ಡ ಸವಾಲುಗಳು ಇದ್ದ ಸಂದರ್ಭದಲ್ಲಿ  ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿಯಾಗಿ  ಕಾಂಗ್ರೆಸ್ ಪಕ್ಷ ಹಾಗು ಈ ದೇಶವನ್ನು ಮುನ್ನಡೆಸಿದ ರೀತಿ ಒಂದು ದೊಡ್ಡ ಮೈಲಿಗಲ್ಲು. ಈ ದೇಶದ ಮಟ್ಟಿಗೆ ಇದೊಂದು ಕರಾಳ ದಿನ ಎಂದು ಹೇಳಿದರು. ಮೈಸೂರಿಗೆ ಬಂದು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿರುವುದು ಸಂತೋಷ ತಂದಿದೆ ಹಾಗೂ ನನ್ನಂತಹ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸಿ ಪಕ್ಷ ಉನ್ನತವಾದ ಜವಾಬ್ದಾರಿಯನ್ನು ಕೊಟ್ಟಿದೆ ಎಂದು ಹೇಳಿದರು. ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಪಕ್ಷನನ್ನು ಆಯ್ಕೆ ಮಾಡಿ ಸಚಿವ ಸ್ಥಾನ ನೀಡಿರುವುದು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದವರ ಪರವಾಗಿ ಪಕ್ಷ ಇದೆ ಎಂಬ ಸ್ಪಷ್ಟ ಸಂದೇಶ ಕೊಡುತ್ತದೆ ಎಂದರು.

ತುಳಸಿ ದಾಸಪ್ಪನವರ ಪತ್ನಿ ಸರೋಜ ತುಳಸಿದಾಸಪ್ಪ ಮಾತನಾಡಿ ಇಂದಿರಾ ಗಾಂಧಿಯವರು ಮೈಸೂರಿಗೆ ಭೇಟಿ ಕೊಟ್ಟಾಗ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಆಗ ನಾನು ಇಂದಿರಾಗಾAಧಿಯವರ ಜೊತೆ ಒಡನಾಟವನ್ನು ಹೊಂದಿದ್ದೆ ಎಂಬ ಐತಿಹಾಸಿಕ ಘಟನೆಗಳನ್ನು ನೆನೆದುಕೊಂಡರು. ತುಳಸಿ ದಾಸಪ್ಪನವರನ್ನು ಇಂದಿರಾ ಗಾಂಧಿಯವರು ಪ್ರೀತಿಯಿಂದ ತುಳಸಿ ಎಂದು ಕರೆಯುತ್ತಿದ್ದರು, ಎಂದು ಹೇಳಿ ನೆಹರು ಅವರು ತೀರಿಹೋದಾಗ ನಾನು ಮತ್ತು ಯಶೋಧರ ದಾಸಪ್ಪ ಅವರ ಅಂತಿಮ ದರ್ಶನಕ್ಕೆ ಹೋಗಿದ್ದೆವು ಎಂದರು.
ಕಾAಗ್ರೆಸ್ ಎರಡು ಭಾಗ ಆದಾಗ ಇಂದಿರಾ ಗಾಂಧಿಯನ್ನು ಕರೆಸಿ ಯಶೋಧರ ದಾಸಪ್ಪ ಸಭೆ ಮಾಡಿಸಿದರು. ಆ ಸಭೆಯಲ್ಲಿ ಒಮ್ಮತ ಮೂಡದೆ ಎರಡು ಭಾಗವಾಯಿತು ಎಂದರು. ಈಗ ಸಮಾಜದಲ್ಲಿ ಆರ್.ಎಸ್.ಎಸ್ ಒಡೆಯುವ ಮನೋಭಾವ ಸೃಷ್ಟಿ ಮಾಡುತ್ತಿದೆ. ಆದರೆ ನಾವು ಸಿದ್ದರಾಮಯ್ಯ ಮತ್ತು ಖರ್ಗೆಯವರಿಗೆ ನಿಜವಾಗಲೂ ಕೃತಜ್ಞರಾಗಬೇಕು. ದೇಶದಲ್ಲಿ ಅಶಾಂತಿಯನ್ನು ಉತ್ಪಾದಿಸುತ್ತಿರುವ ಆರ್.ಎಸ್.ಎಸ್ ಅನ್ನು ನಿಷೇಧ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಇದಕ್ಕೆ ಎಲ್ಲರೂ ಒತ್ತಾಸೆಯಾಗಿ ಇಲ್ಲಬೇಕು ಎಂದರು. ಅರಸೀಕೆರೆಯ ಕಸ್ತೂರಬಾ ಮತ್ತು ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿಯ ಚಿತಾ ಭಸ್ಮವನ್ನುನ್ನು ಇಟ್ಟಿದ್ದೇವೆ ಎಂದು ಹೇಳಿ ಮೈಸೂರಿನಲ್ಲಿ ಎಚ್ ಸಿ ದಾಸಪ್ಪನವರ ಸ್ಮರಣಾರ್ಥ ಒಂದು ಸಂಸ್ಥೆಯನ್ನು ಸ್ಥಾಪನೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂಬ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್  ಸಮಿತಿಯ  ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎಚ್.ಡಿ.ಗಣೇಶ್, ಮಾಜಿ ಮೇಯರ್ ಗಳಾದ ಮೋದಮಣಿ ಪ್ರಕಾಶ್, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ತಲಕಾಡು ಮಂಜುನಾಥ್,ಈಶ್ವರ್ ಚಕಡಿ, ಶಿವಪ್ರಸಾದ್, ಸುನಂದ್ ಕುಮಾರ್, ಭಾಸ್ಕರ್ ಗೌಡ, ಮಂಚೇಗೌಡನ ಕೊಪ್ಪಲು ರವಿ, ಎಸ್.ಸಿದ್ದಯ್ಯ, ಶಾಮ, ರಾಹುಲ್ ಕುಂಬರಹಳ್ಳಿ, ಮಹೇಶ್, ಯೋಗೇಶ್, ಗಿರೀಶ್, ಭವ್ಯ, ಪುಷ್ಪವಲ್ಲಿ, ಎನ್.ಡಿ.ತಿವಾರಿ, ಸುಶೀಲ ನಂಜಪ್ಪ, ದಾಸನೂರು ಪುಟ್ಟಸ್ವಾಮಿ, ಗುರು ಇತರ ಪ್ರಮುಖರು ಭಾಗವಹಿಸಿದ್ದರು.

Share This Article
Leave a Comment