ನನ್ನ ಮಾತಿನಿಂದ ನೋವಗಾಗಿದ್ದರೆ ಕ್ಷಮೆಯಾಚಿಸುವೆ: ಜ್ಞಾನ ಪ್ರಕಾಶ್ ಸ್ವಾಮೀಜಿ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳತ್ತ ವಕೀಲರೊಬ್ಬರು ಶೂ ಎಸೆದ ಘಟನೆ ಖಂಡಿಸಿ ಯಾದಗಿರಿಯಲಿ ನಡೆದ ಪ್ರತಿಭಟನಾ ರ‍್ಯಾಲಿ ವೇಳೆ ತಾವು ಆಡಿದ ಮಾತನ್ನು ಕತ್ತರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ನ್ಯಾಯಪೀಠಕ್ಕೆ ಅಪಮಾನ ಮಾಡಿದ ಘಟನೆ ಬಗ್ಗೆ ತಮಗೆ ನೋವಿದೆ. ಹೀಗಾಗಿ ಅಂತಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಒಂದು ವೇಳೆ ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸಿ, ಕ್ಷಮೆ ಕೇಳುವೆ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸಂವಿಧಾನಕ್ಕಿAತ ಸನಾತನವೇ ದೊಡ್ಡದು ಎಂದು ಶೂ ಎಸೆದವರು ಸಮರ್ಥಿಸಿಕೊಂಡು ಇನ್ನೂ ಕ್ಷಮೆ ಯಾಚಿಸಿಲ್ಲ. ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ. ಹೀಗಿದ್ದರೂ ನ್ಯಾಯಪೀಠಕ್ಕೆ ಅಪಮಾನ ಮಾಡಿದವರು ಇನ್ನೂ ಕ್ಷಮೆ ಯಾಚಿಸದಿರುವುದು ಬೇಸರದ ಸಂಗತಿಯಾಗಿದೆ. ಈ ನೋವಿನಲ್ಲಿ ತಾವು ಮಾತನಾಡಿದ್ದು, ಅದರ ಪೂರ್ಣ ಭಾಗದ ಬದಲು ಕತ್ತರಿಸಿ ವೈರಲ್ ಮಾಡಲಾಗಿದೆ ಎಂದು ದೂರಿದರು.
ನ್ಯಾಯಾಧೀಶರು, ವಕೀಲರನ್ನು ಅಪಮಾನಿಸುವ ಮನಸ್ಥಿತಿ ತಮ್ಮದಲ್ಲ. ಸಂವಿಧಾನಕ್ಕೆ, ನ್ಯಾಯಾಧೀಶರು, ವಕೀಲರಿಗೆ ಅಪಮಾನವಾಗುವ ಘಟನೆ ನಡೆದಾಗ ಮೊದಲು ವಿರೋಧಿಸುವವರೇ ತಾವು ಎಂದು ಸ್ಪಷ್ಟ ಪಡಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸ್ವಾಮೀಜಿಯವರು ತಪ್ಪು ಮಾಡಿದವರ ವಿರುದ್ಧ ಮಾತ್ರ ಮಾತನಾಡಿದ್ದಾರೆ. ಅವರು ಯಾರನ್ನೂ ನಿಂದಿಸಿಲ್ಲ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ, ಆರ್‌ಎಸ್‌ಎಸ್ ನೋಂದಣಿ ಆಗಿರದಿದ್ದರೂ ಅದಕ್ಕೆ ೧೦೦ ವರ್ಷ ತುಂಬಿದ ಸಂದರ್ಭದಲ್ಲಿ ಪಥ ಸಂಚಲನಕ್ಕೆ ಅವಕಾಶ ಕೇಳುತ್ತಿದ್ದಾರೆ. ತಮ್ಮ ನೋಂದಣಿ ಆಗಿರುವ ಸಂಸ್ಥೆ ಮಹಿಷನಿಗೆ ಪುಷ್ಪಾರ್ಚನೆ ಮಾಡಬೇಕೆಂದರೂ ಅವಕಾಶ ನೀಡುತ್ತಿಲ್ಲ ಎಂದು ಬೇಸರಿಸಿದರು.
ಅಲ್ಲದೆ, ಸಮರ್ಥ, ಹಿರಿತನ, ಪರಿಸ್ಥಿತಿ ನಿಭಾಯಿಸುವವ ದಲಿತ ನಾಯಕರೊಬ್ಬರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ತಮ್ಮ ನಿರೀಕ್ಷೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸೋಮಯ್ಯ ಮಲೆಯೂರು, ಸಿದ್ದಸ್ವಾಮಿ, ಮಣಿಯಯ್ಯ ಭುಗತಗಳ್ಳಿ ಇದ್ದರು.

Share This Article
Leave a Comment