ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ-೨೦೨೫ ಅನ್ನು ಕನ್ನಡ ಸಾಹಿತ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಬೂಕರ್ ಪ್ರಶಸ್ತಿ ದೊರಕಿರುವುದು ಇದೇ ಮೊದಲು. ಈ ಸಾಧನೆಗೆ ಕಾರಣವಾದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನೇ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಈ ಸಂಬಂಧ ಬೆಂಗಳೂರಿನಲ್ಲಿ ಈ ಬಗ್ಗೆ ಘೋಷಿಸಿದ ಅವರು ಅಧಿಕೃತವಾಗಿ ಘೋಷಣೆ ಮಾಡಿದರು. ಭಾನು ಮುಸ್ತಾಕ್ ಅವರಿಗೆ ಬಳ್ಳಾರಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಬಾನು ಮುಷ್ತಾಕ್ ಅವರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ೨೦೧೭ರಲ್ಲಿ ನಿಸಾರ್ ಅಹಮದ್ ಹೊರತುಪಡಿಸಿ ಮುಸ್ಲಿಂ ಸಮುದಾಯದ ಬೇರಾರಿಗೂ ಇಂತಹ ಅವಕಾಶ ಸಿಕ್ಕಿಲ್ಲ. ಮುಸ್ಲಿಂ ಮಹಿಳೆ ಇದುವರೆಗೂ ದಸರಾ ಉದ್ಘಾಟನೆ ಮಾಡಿಲ್ಲ ಎನ್ನುವ ವಿಚಾರಗಳನ್ನೂ ಸರ್ಕಾರ ಪರಿಗಣಿಸಿಯೂ ಉದ್ಘಾಟಕರಾಗಿ ಅಂತಿಮಗೊಳಿಸಿದೆ.
ಇದುವರೆವಿಗೂ ಯಾರೆಲ್ಲಾ ದಸರಾ ಉದ್ಘಾಟಿಸಿದ್ದಾರೆ ಗೊತ್ತಾ:
೧೯೯೯ ಗಂಗೂಬಾಯಿ ಹಾನಗಲ್, ಸಂಗೀತ
೨೦೦೦ ಎಂ.ಎನ್.ಜೋಯಿಷ್, ಸ್ವಾತಂತ್ರ‍್ಯ ಹೋರಾಟ
೨೦೦೧ ಬಿ.ಸರೋಜಾದೇವಿ, ಅಭಿನಯ
೨೦೦೨ ದಸರಾ ನಡೆದಿಲ್ಲ
೨೦೦೩ ಡಾ.ಸಿ.ಎನ್.ಆರ್.ರಾವ್, ವಿಜ್ಞಾನ
೨೦೦೪ ಡಾ.ಎಚ್.ಎನ್.ನರಸಿಂಹಯ್ಯ, ಶಿಕ್ಷಣ
೨೦೦೫ ಬರಗೂರು ರಾಮಚಂದ್ರಪ್ಪ, ಸಾಹಿತ್ಯ
೨೦೦೬ ಜಿ.ನಾರಾಯಣ, ಗಾಂಧಿವಾದಿ
೨೦೦೭ ಬಾಲಗಂಗಾಧರನಾಥ ಸ್ವಾಮೀಜಿ, ಧಾರ್ಮಿಕ
೨೦೦೮ ಡಾ.ಶಿವಕುಮಾರ ಸ್ವಾಮೀಜಿ, ಧಾರ್ಮಿಕ
೨೦೦೯ ರವಿಶಂಕರ ಗುರೂಜಿ, ಧಾರ್ಮಿಕ
೨೦೧೦ ಡಾ.ವೀರೇಂದ್ರ ಹೆಗಡೆ, ಧಾರ್ಮಿಕ
೨೦೧೧ ವಿಶ್ವೇಶ್ವರ ತೀರ್ಥ ಶ್ರೀಪಾದರು, ಧಾರ್ಮಿಕ
೨೦೧೨ ಸಿದ್ದೇಶ್ವರ ಸ್ವಾಮೀಜಿ, ಧಾರ್ಮಿಕ
೨೦೧೩ ಡಾ.ಚಂದ್ರಶೇಖರ ಕಂಬಾರ, ಸಾಹಿತ್ಯ
೨೦೧೪ ಗಿರೀಶ್ ಕಾರ್ನಾಡ್, ಸಾಹಿತ್ಯ
೨೦೧೫ ಪುಟ್ಟಯ್ಯ, ಕೃಷಿ
೨೦೧೬ ಡಾ.ಚನ್ನವೀರ ಕಣವಿ, ಸಾಹಿತ್ಯ
೨೦೧೭ ಡಾ.ನಿಸಾರ್ ಅಹಮದ್, ಸಾಹಿತ್ಯ
೨೦೧೮ ಸುಧಾ ಮೂರ್ತಿ, ಸಾಹಿತ್ಯ
೨೦೧೯ ಡಾ.ಎಸ್.ಎಲ್.ಭೈರಪ್ಪ, ಸಾಹಿತ್ಯ
೨೦೨೦ ಡಾ.ಸಿ.ಎನ್.ಮಂಜುನಾಥ್, ವೈದ್ಯಕೀಯ
೨೦೨೧ ಎಸ್.ಎಂ.ಕೃಷ್ಣ, ರಾಜಕೀಯ
೨೦೨೨ ದ್ರೌಪದಿ ಮುರ್ಮು, ರಾಷ್ಟçಪತಿ
೨೦೨೩ ಹಂಸಲೇಖ, ಸಂಗೀತ
೨೦೨೪ ಡಾ.ಹಂಪಾ ನಾಗರಾಜಯ್ಯ, ಸಾಹಿತ್ಯ
- ಸೆ.೨೨ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ
- ಅ.೨ರಂದು ವಿಜಯದಶಮಿ, ಜಂಬೂ ಸವಾರಿ
- ಸ್ತಬ್ಧಚಿತ್ರಗಳಲ್ಲಿ ಗ್ಯಾರಂಟಿ, ಗಾಂಧೀಜಿ ವಿಚಾರಧಾರೆಗಳಿಗೆ ಆದ್ಯತೆ
ಇನ್ನೂ ದಸರಾ ಉದ್ಘಾಟಕರ ಆಯ್ಕೆ ಕುರಿತು ಮೈಸೂರು ಭೇಟಿ ವೇಳೆ ಪ್ರತಿಕ್ರಿಯಿಸಿದ ಭಾನುಮುಸ್ತಾಕ್ ಅವರು,
ಕೂಸು ಹುಟ್ಟುವ ಮುನ್ನ ಕುಲಾವಿ ಒಲೆಸುವುದು ಬೇಡ. ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದರು. ಈಗ ಅಂತಿಮವಾಗಿ ನಿರೀಕ್ಷೆಯಂತೆ ಅವರನ್ನೇ ಅಂತಿಮಗೊಳಿಸಲಾಗಿದೆ.
