ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರಿನ ಜೆಕೆ ಗ್ರೌಂಡ್ ನಲ್ಲಿ ಕೃಷಿ ಸಚಿವರಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಒತ್ತಾಯ ಪತ್ರ ಸಲ್ಲಿಸಿದರು.
ರೈತ ದಸರಾ ಆಚರಣೆಗೆ ಜಿಲ್ಲೆಯ ರಾಷ್ಟ್ರ ಮಟ್ಟದ ರೈತ ಮುಖಂಡ ಹಾಗೂ ರಾಜ್ಯ ರೈತ ಮುಖಂಡರಿಂದ ಉದ್ಘಾಟನೆ ಮಾಡಿಸುವಂತೆ ಒತ್ತಾಯಿಸಿದರು. ರೈತ ದಸರಾ ಆಚರಣೆ ಮಾಡಿ ಮೈಸೂರು ಜಿಲ್ಲೆಯ ರೈತ ಮುಖಂಡರನ್ನು ಕಡೆಗಣಿಸಿ ರೈತ ದಸರಾ ಆಚರಣೆ ಮಾಡುತ್ತಿರುವುದು ರೈತರಿಗೆ ಮಾಡಿದ ಅಪಮಾನವಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಖಂಡಿಸುತ್ತಿದ್ದೇವೆಂದರು.
ಜಿಲ್ಲೆಯಲ್ಲಿ ಕೃಷಿ ಇಲಾಖೆ ನಿಷ್ಕ್ರಿಯವಾಗಿದ್ದು ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ, ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ರೈತ ಮುಖಂಡ ಹಾಗೂ ರಾಜ್ಯ ಮುಖಂಡರು ಮೈಸೂರು ಜಿಲ್ಲೆಯಲ್ಲಿ ಇರುವುದು ಯಾರಿಗೂ ಕಾಣುತ್ತಿಲ್ಲವೆಂದರು. ಮುಂಬರುವ ವರ್ಷಗಳಲ್ಲಿ ರೈತ ದಸರಾ ಆಚರಣೆಗೆ ರೈತ ಮುಖಂಡರಿಂದ ಉದ್ಘಾಟನೆ ಮಾಡಿಸಬೇಕು, ಕಡೆಗಣಿಸಿ ರೈತ ದಸರಾ ಆಚರಣೆ ಮಾಡಲು ಮುಂದಾದರೆ, ಜಿಲ್ಲಾ ಉಸ್ತುವಾರಿ ಸಚಿವ, ಕೃಷಿ ಸಚಿವ, ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ರೈತರು ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಕೃಷಿ ಸಚಿವ ಚೆಲುವರಾಯಸ್ವಾಮಿ ರವರು ನಿಮ್ಮ ಮನವಿಯನ್ನು ಉಸ್ತುವಾರಿ ಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಜಂಟಿ ಕಾರ್ಯದರ್ಶಿ ಬಿಪಿ ಪರಶಿವ ಮೂರ್ತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವರಕೊಡು ನಾಗೇಶ್, ತಾಲೂಕು ಅಧ್ಯಕ್ಷರುಗಳಾದ ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್,ಕಿರಗಸೂರು ಪ್ರಸಾದ್ ನಾಯಕ, ಬನ್ನೂರು ಸೂರಿ, ಕಾಟೂರು ಮಹದೇವಸ್ವಾಮಿ, ವಾಜಮಂಗಲ ಮಹದೇವು, ಅಂಬಳೆ ಮಂಜುನಾಥ್, ರಂಗರಾಜು, ರಾಮಚಂದ್ರ, ಪುಟ್ಟೇಗೌಡನಹುಂಡಿ ರಾಜು, B.P.ಪರಶಿವಮೂರ್ತಿ, ಗಿರೀಶ್, ರವಿಕುಮಾರ್, ಪುಟ್ಟಸ್ವಾಮಿ ಮುಂತಾದವರು ಇದ್ದರು.
