ದಸರೆಗೆ ಶೇ.5ರಷ್ಟು ರಿಯಾಯಿತಿ ಕೊಟ್ಟ ನಂದಿನಿ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ನಾಡಹಬ್ಬ ದಸರೆಯಲ್ಲಿ ನಂದಿನಿ ಗ್ರಾಹಕರಿಗೆ ಶೇ.5ರಷ್ಟು ರಿಯಾಯಿತಿ  ಘೋಷಣೆ ಮಾಡಿದೆ.
ಸೋಮವಾರ ಸಂಜೆ ನಗರದ ವಸ್ತು ಪ್ರದರ್ಶನದ ಆವರಣದಲ್ಲಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ನಂದಿನಿ ಕುಟೀರವನ್ನು ಉದ್ಘಾಟಿಸಲಾಯಿತು. ಈ ವೇಳೆ ಮಾತನಾಡಿದ ಮೈಮುಲ್ ಮಾಜಿ ಅಧ್ಯಕ್ಷ‌ ಆರ್‌.ಚೆಲುವರಾಜು, ನವರಾತ್ರಿ ಅಂಗವಾಗಿ ನಂದಿನಿ ಉತ್ಪನ್ನಗಳ ಮೇಲೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸಾರ್ವಜನಿಕರು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಬಾರಿ ನಂದಿನಿ ಕುಟೀರದಲ್ಲಿ ನಂದಿನಿ ಸರಬರಾಜು ಸೇರಿದಂತೆ ಗ್ರಾಹಕರ ಕೈ ಸೇರುವವರೆಗಿನ ಸಂಪೂರ್ಣ ಮಾಹಿತಿ ಚಿತ್ರಣ ಸಿಗಲಿದೆ. ಜತೆಗೆ ವಿಶೇಷವಾಗಿ ಸ್ಥಳದಲ್ಲೇ ಮೈಸೂರು ಪಾಕ ತಯಾರಿಸುವ ಚಿತ್ರಣ ಸಹ ಜನತೆ ನೋಡಬಹುದಾಗಿದೆ. ಅಮೆರಿಕಾದಲ್ಲಿಯೂ ನಂದಿನಿ ಉತ್ಪನ್ನ ಮಾರಾಟಗೊಳ್ಳುತ್ತಿರುವುದು ಸಂತಸದ ಸಂಗತಿ. ಜತೆಗೆ ನಂದಿನಿ ಮೇಲಿನ ಜಿಎಸ್ ಟಿ ಕಡಿತ ಮಾಡಿರುವುದು ಸ್ವಾಗತಾರ್ಹ ಎಂದರು.
ಮೈಮುಲ್ ಮಾಜಿ ಅಧ್ಯಕ್ ಕೆ.ಊಮಾಶಂಕರ್ ಮಾತನಾಡಿ, ನಂದಿನಿ ಉತ್ಪನ್ನಗಳನ್ನು ಪ್ರತಿಯೊಬ್ಬರೂ ಬಳಸುವ ಮೂಲಕ ರೈತರ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ. ಆ ಮೂಲಕ ಸಮಗ್ರ ರೈತ ಕುಲವನ್ನು ಪ್ರೋತ್ಸಾಹಿಸಲು ಶ್ರಮಿಸುತ್ತಿರುವ ಒಕ್ಕೂಟ ಇದಾಗಿದ್ದು, ಇಂದು ಈ ಬಗ್ಗೆ ಜನರಿಗೆ ಜಾಗೃತಿಯನ್ನು ಕುಟೀರದಲ್ಲಿ ಮಾಹಿತಿ ಸಿಗಲಿದೆ ಎಂದು ಹೇಳಿದರು.
ಮೈಮುಲ್ ನಿರ್ದೇಶಕಿ ಲೀಲಾ ಬಿ.ಕೆ.ನಾಗರಾಜ್ ಮಾತನಾಡಿ, ನಾಡಿನ ಸಮಸ್ತರಿಗೆ ನವರಾತ್ರಿ  ದಸರಾ ಹಬ್ಬದ ಶುಭಾಶಯಗಳು. ಈ ಬಾರಿ ದಸರಾ ಅಂಗವಾಗಿ ಮಳಿಗೆ ಮಾತ್ರವಲ್ಲದೆ ದೊಡ್ಟ ಸ್ತಬ್ಧಚಿತ್ರದ ಮೂಲಕ ಹೈನೋದ್ಯಮದಲ್ಲಿ ಸರ್ಕಾರದ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ಮಂದಿ ಆಗಮಿಸಿ ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ನಿರ್ದೆಶಕರಾದ ಎ ಟಿ ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ  ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್ ಹಾಗೂ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಸದಸ್ಯರುಗಳು ಹಾಜರಿದ್ದರು.

Share This Article
Leave a Comment