ಬೆಂಗಳೂರು/ಮೈಸೂರು: ಈ ಬಾರಿಯ ದಸರಾ ಮಹೋತ್ಸವವನ್ನು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾಂಧಿಯವರು ಉದ್ಘಾಟಿಸಲಿದ್ದಾರೆ ಎಂಬ ಕಾಲ್ಪನಿಕ ಸುದ್ದಿಯನ್ನು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಇದು ಸತ್ಯಕ್ಕೆ ದೂರವಾದದ್ದು. ಆ ರೀತಿಯ ಉದ್ದೇಶವಾಗಲೀ, ಪ್ರಸ್ತಾವನೆಯಾಗಲಿ ಸರ್ಕಾರದ ಮುಂದೆ ಇಲ್ಲ. ಹೀಗಾಗಿ ಇಂತಹ ಯಾವುದೇ ವಿಚಾರದ ಬಗ್ಗೆ ಗಮನ ಹರಿಸಬೇಡಿ ಎಂದು ಸ್ವತಃ ಸಿಎಂ ಮಾದ್ಯಮ ಪ್ರಕಟಣೆ ಸ್ಪಷ್ಟಪಡಿಸಿದೆ.
ಆ ಮೂಲಕ ಕಳೆದ ಎರಡು ದಿನಗಳಿಂದ ಸೋನಿಯಾಗಾಂಧಿಯವರಿಂದ ದಸರಾ ಉದ್ಘಾಟನೆ ಆಗಲಿದೆ ಎಂಬ ಸುದ್ದಿಗೆ ತೆರೆ ಬಿದ್ದಿದೆ. ಆದರೆ, ಉದ್ಘಾಟಕರನ್ನು ಅಂತಿಮಗೊಳಿಸುವ ಹೊಣೆ ಸಿಎಂ ಅವರ ತೀರ್ಮಾನಕ್ಕೆ ಬಿಡಲಾಗಿದೆ. ಬಹುತೇಕ ಸಾಹಿತಿ ಬಾನುಮುಸ್ತಾಕ್, ಗಾಂಧಿವಾದಿ ಪ್ರಸನ್ನ, ಧಾರ್ಮಿಕ ಕ್ಷೇತ್ರದಿಂದ ಸುತ್ತೂರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜಕೀಯ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿ ಅನೇಕರ ಹೆಸರು ಮುನ್ನಲೆಯಲ್ಲಿದೆ. ಆದರೆ ಸಿಎಂ ಯಾರನ್ನು ಅಂತಿಮ ಮಾಡಲಿದ್ದಾರೆಂಬುದು ಅಧಿವೇಶನದ ಬಳಿಕ ಬಹಿರಂಗ ಆಗಲಿದೆ.