ಪಬ್ಲಿಕ್ ಅಲರ್ಟ್
ಮೈಸೂರು:ಡಿನಿ ಸಿನಿ ಕ್ರಿಯೇಷನ್ಸ್ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಸೆ. ೨೩ ರಿಂದ ಅಕ್ಟೋಬರ್ ೭ ರವರೆಗೆ ಚಾಮರಾಜಪುರಂ ಕೆ.ಆರ್. ಬುಲೇವಾರ್ಡ್ ರಸ್ತೆಯ ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ನಲಗಲಿ ದಸರಾ ಕೇಕ್ ಶೋ ಆಯೋಜಿಸಲಾಗಿದೆ. ನಾಲ್ವಡಿ ಅವರ ಕೊಡುಗೆ ಈ ಬಾರಿಯ ವಸ್ತುವಾಗಿದೆ ಎಂದು ಒನ್ ಪಾಯಿಂಟ್ ಸಲ್ಯುಷನ್ಸ್ ಮುಖ್ಯಸ್ಥ ಎಸ್. ಶ್ರೀಕಾಂತ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ,, ಸೆ. ೨೩ ರಂದು ಬೆಳಗ್ಗೆ ೧೦ಕ್ಕೆ ಖ್ಯಾತ ನಟಿ ರಚಿತಾ ರಾಮ್ ಉದ್ಘಾಟಿಸುವರು, ನಿತ್ಯ ಬೆಳಗ್ಗೆ ೧೦ ರಿಂದ ರಾತ್ರಿ ೯ ರವರೆಗೆ ಪ್ರವೇಶವಿದೆ. ಟಿಕೆಟ್ ದರ ೬೦ ರೂ.,ಗಳಾಗಿವೆ. ಜೀವಂತ ಗಾತ್ರದ ಕೇಕ್ ಶಿಲ್ಪಗಳು, ಕಲ್ಪನಾ ಲೋಕದ ಥೀಮ್‌ಗಳು, ರುಚಿಕರ ಕೇಕ್ ಕೆಲಗಳು ಪ್ರಮುಖ ಆಕರ್ಷಣೆ ಆಗಿವೆ. ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಕೃತಿಯ ಕೇಕ್ ರಚಿಸಿ ಅವರಿಗೆ ಗೌರವ ಸಲ್ಲಿಸಲಾಗುವುದು. ಕುತೂಹಕಾರಿ ಆಟಗಳು, ಕೇಕ್ ಸವಿಯಬೇಕೆಂದವರಿಗೆ ಸ್ಟಾಲ್‌ಗಳು ಇಲ್ಲಿರಲಿವೆ.
ಮೈಸೂರಿನ ಶ್ರೀಮಂತಿಕೆ, ಸಾಂಸ್ಕೃತಿಕತೆ ಪ್ರದರ್ಶಿಸುವ ಉದ್ದೇಶವಿದೆ. ಪ್ರಸಿದ್ಧ ಸ್ಮಾರಕ, ಪೌರಾಣಿಕ ವ್ಯಕ್ತಿತ್ವ, ಸಾಮಾಜಿಕ ವಿಷಯ, ಜನಪ್ರಿಯ ಸಂಸ್ಕೃತಿ ಬಿಂಬಿಸುವ ಕೇಕ್‌ಗಳು ಇರಲಿವೆ ಎಂದು ಮಾಹಿತಿ ನೀಡಿದರು. ಆಯೋಜಕರಾದ ದಿನೇಶ್, ಪ್ರಶಾಂತ್ ಇದ್ದರು.
