ದಸರಾ ಉದ್ಘಾಟಕರ ಪರ ಪ್ರತಿಭಟನೆ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಸ್ತಾಕ್ ಅವರೇ ನಿಮ್ಮೊಂದಿಗೆ ನಾವಿದ್ದೇವೆಂಬ ನಾಮಫಲಕ ಹಿಡಿದು ಘೋಷಣೆ ಕೂಗುವ ಮೂಲಕ ದಸರಾ ಉದ್ಘಾಟಕರಾಗಿ ಅವರ ಆಯ್ಕೆಯನ್ನು ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.
ಮೈಸೂರು ನಗರ(ಜಿಲ್ಲಾ) ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ನಗರದ ಕೋಟೆ ಆಂಜನೇಯ ಮುಂಭಾಗದಲ್ಲಿ ಜಮಾವಣೆಗೊಂಡು ಭಾನುಮುಸ್ತಾಕ್ ಅವರನ್ನು ದಸರಾ ಉದ್ಘಾಟಕರನ್ನಾಗಿ ಮಾಡಿರುವುದನ್ನು ಬೆಂಬಲಿಸಿ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ನಗರ ಕಾಂಗ್ರೆಸ್ ಸಮಿತಿ ವಕ್ತಾರ ಎಸ್.ರಾಜೇಶ್ ಮಾತನಾಡಿ, ಕನ್ನಡದ ಸುಗಂಧವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಬಾನು ಮುಸ್ತಾಕ್ ಕಾರಣರಾಗಿದ್ದಾರೆ. ಇಂತವರಿಂದ ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆ ಮಾಡಿರುವುದು ಅತ್ಯಂತ ಸಮರ್ತನೀಯವಾಗಿದೆ ಎಂದರು.
ಎದೆಯ ಹಣತೆ (ಹಾರ್ಟ್ ಲ್ಯಾಂಪ್) ಕಥಾ ಸಂಕಲನವು ಮಹಿಳೆಯ ಪರ, ಮಹಿಳೆಯ ಕಾಳಜಿ, ಶೋಶಿತ ಪರ ಹೋರಾಟವು ಮಹಿಳೆಯ ಸಬಲೀಕರಣ ಹೋರಾಟವು ಪ್ರಪಂಚದಾದ್ಯಂತ ತಲುಪಲು ಕಾರಣವಾಗಿ ಕರ್ನಾಟಕದ ಹೆಸರು ಜಾಗತೀಕ ಮಟ್ಟದಲ್ಲಿ ಕರ್ನಾಟಕ ಸಾಹಿತ್ಯದ ಮತ್ತು ಬರಹಗಳ ಬಗ್ಗೆ ಪ್ರಕ್ಯಾತಿಯಾಗಲು ಕಾರಣವಾಗಿದ್ದಾರೆಂದರು. ಈ ಬಗ್ಗೆ ಬಿಜೆಪಿ ನಾಯಕರ ವಿರೋಧ ಕನ್ನಡ ನಾಡಿಗೆ ಕೀರ್ತಿತಂದ ಮಹಿಳೆಗೆ ಅಗೌರವವಾಗಿದೆ. ಮಾಜಿ ಸಂಸದ ಪ್ರತಾಪಸಿಂಹ ನಡೆ ಮಹಿಳಾ ವಿರೋಧಿಯಾಗಿದೆ. ಮಹಿಳೆಯರ ಸಮಾನತೆ, ಶಿಕ್ಷಣ ವ್ಯವಸ್ಥೆಗೆ, ಮಹಿಳಾ ಸಬಲೀಕರಣ ಉನ್ನತಿಗೆ ಮಾರಕವಾದ ಹೇಳಿಕೆಯಾಗಿದೆ ಎಂದರು.
ಮಹಿಷಾ ದಸರಾ ವಿಚಾರ ಮುಂದಿಟ್ಟು ಮೈಸೂರಿನಲ್ಲಿ  ಜನಾಂಗೀಯ ಕೋಮು ಗಲಭೆಗೆ ಪ್ರಯತ್ನ ಪಟ್ಟು ವಿಫಲರಾಗಿದ್ದಾರೆ. ಈಗ ಬಾನು ಮುಸ್ತಾಕ್ ಮುಸ್ಲಿಂಮ್ ಮಹಿಳೆ ಎಂಬ ಕಾರಣಕ್ಕೆ ವಿರೋದ ಮಾಡುತ್ತಿರುವುದು ಜನಾಂಗೀಯ ಘರ್ಷಣೆಗೆ ಪ್ರೇರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಜನತೆ ಶಾಂತಿಯುತದಿಂದ ಆಚರಿಸಲು ಸಹಕರಿಸುತ್ತಾರೆ, ಬಾನು ಮುಸ್ತಾಕ್ ರವರೇ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುನೀಲ್ ಕುಮಾರ್, ಕೇಶವ, ಬಿ.ಜೆ.ಸೈಯದ್ ಫಾರುಕ್, ರಾಜಶೇಖರ್, ಎಸ್.ಎ.ರಹೀಮ್, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಲೋಕೇಶ್ ಮಾದಾಪುರ. ರವಿನಂದನ್, ರವಿನಾಯಕ್, ಕುರುಬಾರಳ್ಳಿ ಪ್ರಕಾಶ್, ಗಂಟಯ್ಯ ಕೃಷ್ಣಪ್ಪ, ಯೋಗೇಶ್ ಉಪ್ಪಾರ್, ಮೋಹನ್ ಕುಮಾರ್, ಶಿವಶಂಕರ ಮೂರ್ತಿ, ರವಿನಾಯಕ್, ವನಜಾಕ್ಷಿ ರವಿ. ಸಿದ್ದರಾಜು, ಕಮ್ರಾನ್ ಫಾಷ, ರದೀವುಲ್ಲ ಖಾನ್, ಸುಲೇಮಾನ್ ಇನ್ನಿತರರು ಭಾಗವಹಿಸಿದ್ದರು.

Share This Article
Leave a Comment