ಪ್ಯೂರಿಟಿ ಪತ್ರಿಕೆ ಸಂಪಾದಕ ಬ್ರಿಜ್ ಮೋಹನ್‌ಜೀ ಇನ್ನಿಲ್ಲ

Chethan
1 Min Read

ಮೈಸೂರು: ದೆಹಲಿಯ ಮೌಂಟ್ ಅಬೂ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಾಗೂ ಪ್ಯೂರಟಿ ಮಾಸ ಪತ್ರಿಕೆಯ ಸಂಪಾದಕ, ಸಂಸ್ಥೆಯ ಮಹಾ ಸಚಿವ, ಹಿರಿಯ ಮಾರ್ಗದರ್ಶಕ ರಾಜಯೋಗಿ ಬ್ರಹ್ಮಾಕುಮಾರ ಬ್ರಿಜ್ ಮೋಹನ್ವಿಯವರು(94) ನಿಧನಕ್ಕೆ ಅನೇಕರು ಸಂತಾಪ ವ್ಯಕ್ತಪಡಿಸಿದರು.

ಅ.9 ಬೆ.10.25ರ ಸಮಯದಲ್ಲಿ ತಮ್ಮ ದೇಹವನ್ನು ತ್ಯಾಗ ಮಾಡಿದರು ಎಂದು ಸಂಸ್ಥೆ ತಿಳಿಸಿದೆ. 1934 ರಲ್ಲಿ ಪಂಜಾಬ್ ಅಮೃತ ಸರೋವರದಲ್ಲಿ ಜನಿಸಿ 1950ರಲ್ಲಿ ಬ್ರಹ್ಮಾಕುಮಾರಿ ಸಂಘಟನೆಯಲ್ಲಿ ಸೇರಿಕೊಂಡರು. ಇವರು ಆಧ್ಯಾತ್ಮಿಕ ಪ್ರೇರಣಾದಾಯಕ ವಿಚಾರಗಳು ಇಂದಿಗೂ ಲಕ್ಷಾಂತರ ಜನರ ಜೀವನಕ್ಕೆ ಮಾರ್ಗದರ್ಶನ ಕೊಡುತ್ತಿದೆ ಅವರ ಯೋಗದಾನದ ಬಗ್ಗೆ ತಮ್ಮ ಜೀವನದಲ್ಲಿ ಪವಿತ್ರತೆ ನಿಶ್ಯಾಮ ಸೇವೆ ಮತ್ತು ರಾಜಯೋಗಿ ಜೀವನವನ್ನು ತಮ್ಮದನ್ನಾಗಿ ಮಾಡಿಕೊಂಡು ಈಶ್ವರೀಯ ಮೌಲ್ಯಗಳ ಶಿಕ್ಷಣವನ್ನು ಕೊಟ್ಟಿದ್ದಾರೆ ಸಂಸ್ಥೆಯ ಪ್ರಮುಖ ಪ್ರವಕ್ತರಾಗಿ ಮತ್ತು ಲೇಖಕ ವಿಭಾಗದ ಪ್ರಮುಖ ರೂಪದಲ್ಲಿ ಅವರು ಹಲವು ಮಹತ್ವಪೂರ್ಣ ಉತ್ತರದಾಯಿತ್ವವನ್ನು ನಿಬಾಯಿಸಿದ್ದಾರೆ ಇವರ ಪ್ರವಚನಗಳು ಮತ್ತು ಕಾರ್ಯಕ್ರಮಗಳು ಬ್ರಹ್ಮಾಕುಮಾರಿಯರ ಸಿದ್ದಾಂತಗಳು ಜನರಿಗೆ ತಲುಪಿಸುವುದರಲ್ಲಿ ಬಹಳ ದೊಡ್ಡ ಭೂಮಿಕೆಯನ್ನು ನಿಭಾಯಿಸಿದ್ದರು.

ಇವರ ನಿಧ‌ಕ್ಕೆ ದೇಶ ನಾನಾ ಬ್ರಹ್ಮಕುಮಾರಿ ಸಂಸ್ಥೆಯಿಂದ ಸಂತಾಪ ಸೂಚಿಸಿದ್ದರು. ಅದರಲ್ಲೂ ಶ್ರೀಯುತರ ನಿಧನದಿಂದ ಬ್ರಹ್ಮಕುಮಾರಿ ಸಮಾಜಕ್ಕೆ ಅಪಾರ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.

Share This Article
Leave a Comment