ಪಬ್ಲಿಕ್ ಅಲರ್ಟ್
ಮೈಸೂರು: ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದ್ದರೂ ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ನ.1ರೊಳಗೆ ಪ್ರತಿಮೆ ಅನಾವರಣ ಮಾಡದಿದ್ದರೆ, ನಾವೇ ಅನಾವರಣ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ತಿಳಿಸಿದರು.
ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಮೈಸೂರಿನಲ್ಲಿ ದೇವರಾಜ ಅರಸು ಪ್ರತಿಮೆ ಸ್ಥಾಪನೆಗಾಗಿ 92 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದರು. ಪ್ರತಿಮೆ ಸಿದ್ದವಾಗಿದ್ದರೂ ಇದುವರೆಗೂ ಅನಾವರಣ ಮಾಡಿಲ್ಲ. ಯಾಕೋ ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡುತ್ತಿಲ್ಲ. ನವೆಂಬರ್ 1 ರೊಳಗೆ ಪ್ರತಿಮೆ ಅನಾವರಣ ಮಾಡಬೇಕು. ಇಲ್ಲದಿದ್ದರೇ ನಾವೇ ಅನಾವರಣ ಮಾಡುತ್ತೇವೆಂದರು.
ರಾಜ್ಯದಲ್ಲಿ
ಇನ್ನೂ ಅಧಿಕಾರ ಹಂಚಿಕೆ ಆಗಬೇಕು. ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸಿಗಬೇಕಿದೆ. ಮಾಜಿ ಸಂಸದ ಪ್ರತಾಪಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ವೈಯಕ್ತಿಕ ನಿಂದನೆ ಸರಿಯಲ್ಲ. ಅವರಿಬ್ಬರನ್ನೂ ಈ ಕೂಡಲೇ ಬಂಧಿಸಲಿ. ಜನಪ್ರತಿನಿಧಿಗಳು ಇಂತಹ ಮಟ್ಟಕ್ಕೆ ಹೋಗಬಾರದು ಎಂದು ಹೇಳಿದರು.
ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಪಾರಂಪರಿಕ ಕಟ್ಟಡವಾಗಿದೆ. ಅದನ್ನು ಈಗ ನಿರ್ಲಕ್ಷ್ಯ ಮಾಡಲಾಗಿದೆ. ಸಚಿವ ಮಹದೇವಪ್ಪ ತನ್ನ ಅನುಕೂಲಕ್ಕೋಸ್ಕರ ಸಿದ್ದಾರ್ಥನಗರದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಿಕೊಂಡರು. ಟಿ ನರಸೀಪುರಕ್ಕೆ ಹತ್ತಿರವಾಗಲಿ ಎಂದು ಆ ರೀತಿ ಮಾಡಿದರು. ಇನ್ನು ಮುಂದಾದರೂ ಹಳೆ ಜಿಲ್ಲಾಧಿಕಾರಿ ಕಚೇರಿಯ ರಕ್ಷಣೆಗೆ ಮುಂದಾಗಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಉಪಸ್ಥಿತರಿದ್ದರು.
