ಧಮ್ಮ ಬೆಳೆಯಲು ಅವಕಾಶ ಕೊಡದ ಮನುವಾದಿಗಳು: ಸತೀಶ್ ಜಾರಕಿಹೊಳಿ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಪುರಾತನವಾದ ಬೌದ್ಧ ಧಮ್ಮ ಬೆಳೆಯಲು ಮನುವಾದಿಗಳು ಅವಕಾಶ ಕೊಡಲಿಲ್ಲ. ಮತ್ತೆ ದೇಶ ಮನುವಾದಿಗಳ ಕೈಗೆ ಹೋಗುತ್ತಿದ್ದು ಎಚ್ಚರ ವಹಿಸಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಳಂದ ವಿವಿಯಲ್ಲಿ ಯಾಕೇ ಪುಸ್ತಕಗಳನ್ನು ಸುಡಲಾಯಿತು? ವಚನಗಳನ್ನು ಸುಡಲು ಯಾಕೇ ಪ್ರಯತ್ನಿಸಿದರು. ಸಂವಿಧಾನ ಬದಲಿಸುವ ಹೇಳಿಕೆಗಳನ್ನು ಯಾಕೇ ಪ್ರಯತ್ನ ಮಾಡುತ್ತಿದ್ದಾರೆ? ಇದರ ಬಗ್ಗೆ ಆಲೋಚನೆ ಮಾಡಬೇಕು ಎಂದರು.
ಅಂಬೇಡ್ಕರ್ ಅನುಯಾಯಿಗಳಿಗೆ ರಾಜಕೀಯ ಸ್ಥಾನಮಾನ ಬರಬೇಕು. ಆ ನಿಟ್ಟಿನಲ್ಲಿ ಗಟ್ಟಿಯಾಗಿ ಪ್ರಯತ್ನ ಮಾಡಬೇಕು. ಅಂಬೇಡ್ಕರ್, ಗೌತಮ ಬುದ್ಧರ ದಾರಿಯಲ್ಲಿ ದಲಿತರು ಮಾತ್ರವಲ್ಲದೇ ಎಲ್ಲ ಜನರನ್ನು ಸೇರಿಸಿಕೊಳ್ಳಬೇಕು. ಸಂವಿಧಾನ ಎಸ್‌ಸಿ, ಎಸ್‌ಟಿ ಜನರಿಗೆ ಮಾತ್ರವಲ್ಲ ಎಲ್ಲರಿಗೂ ಸೇರಿದ್ದು ಎಂಬ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಬೌದ್ಧ ಸಮ್ಮೇಳನಕ್ಕೆ ಮಕ್ಕಳನ್ನು ಕರೆದುಕೊಂಡು ಬರಬೇಕು. ಮಹಿಳೆಯರು ಹೆಚ್ಚು ಪಾಲ್ಗೊಳ್ಳಬೇಕು. ಆ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ಇತಿಹಾಸವನ್ನು ತಿಳಿಸಬೇಕು. ಸಮ್ಮೇಳನ ಮೈಸೂರು-ಚಾಮರಾಜನಗರ ಜಿಲ್ಲೆಗಳಿಗೆ ಸೀಮಿತ ಮಾಡದೇ ಮಧ್ಯ ಕರ್ನಾಟಕದಲ್ಲಿ ಆಯೋಜನೆ ಮಾಡಬೇಕು ಎಂದು ಹೇಳಿದರು.

Share This Article
Leave a Comment