ಪಬ್ಲಿಕ್ ಅಲರ್ಟ್ ನ್ಯೂಸ್:-ಶ್ರೀ ಶೃಂಗೇರಿ ಶಾರದಾ ಪೀಠದ 36ನೇ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ 76ನೇ ವರ್ಧಂತಿ ಮಹೋತ್ಸವ
ಮೈಸೂರು ಚಾಮುಂಡಿಪುರಂ ವೃತ್ತದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಭಕ್ತವೃಂದ ವತಿಯಿಂದ ಗಿಡ ನೆಟ್ಟಿ ನಂತರ ಸಿಹಿ ವಿತರಿಸಿ
ಶ್ರೀ ಶೃಂಗೇರಿ ಶಾರದಾ ಪೀಠದ 36ನೇ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ 76ನೇ ವರ್ಧಂತಿ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ ರಾಜ್ಯಾಧ್ಯಕ್ಷರಾದ ಎನ್ ಎಂ ನವೀನ್ ಕುಮಾರ್
ಶೃಂಗೇರಿ ಶಂಕರ ಮಠ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ನಾಡಿನ ಶ್ರೇಷ್ಠ ಮಹಾನ್ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ. ಭಾರತೀಯ ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಶ್ರೇಷ್ಠ ಕಾರ್ಯವನ್ನು ನಿತ್ಯ ನಿರಂತರವಾಗಿ 1200ಕ್ಕೂ ಹೆಚ್ಚು ವರ್ಷಗಳಿಂದ ನೆರವೇರಿಸಿಕೊಂಡು ಬಂದಿದೆ. ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶೃಂಗೇರಿ ಎಂದು ವಿಶ್ವದ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದ್ದು ಕೋಟ್ಯಾಂತರ ಭಕ್ತರಿಗೆ ಸನ್ಮಾರ್ಗದಲ್ಲಿ ನಡೆಯಲು ಮಹಾನ್ ಸ್ಪೂರ್ತಿ ಮತ್ತು ಶಕ್ತಿಯನ್ನು ನೀಡುತ್ತಿದೆ ಎಂದು ಹೇಳಿದರು
ಗುರು ಪರಂಪರೆಯನ್ನು ಸದಾಕಾಲ ಪ್ರಾರ್ಥಿಸಿ ಸ್ಮರಣೆಯ ಮೂಲಕ ಮಾನವ ಜನ್ಮದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮನುಷ್ಯ ಸನ್ಮಾರ್ಗದಲ್ಲಿ ಬೆಳೆಯಲು ಗುರು ಪರಂಪರೆಯೊಂದೇ ಮುಖ್ಯವಾಗಿದೆ. ಗುರು ಭಕ್ತಿ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಗುರುವಿನ ಆಶೀರ್ವಾದದಿಂದ ಈ ಮಾನವ ಜನ್ಮವನ್ನು ಶಕ್ತಿಶಾಲಿಯಾಗಿ ಹಾಗೂ ಪ್ರೇರಣದಾಯಕವಾಗಿ ಬದುಕಿ ಬಾಳಲು ಸಹಕಾರಿಯಾಗುವುದು. ಪ್ರತಿಯೊಬ್ಬರೂ ಪ್ರತಿನಿತ್ಯ ಗುರು ಸ್ಮರಣೆಯನ್ನು ಮಾಡಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆಯ ಗುರು ಶ್ರೇಷ್ಠತೆಯನ್ನು ನಾವೆಲ್ಲರೂ ಮುನ್ನಡೆಸಿಕೊಂಡು ಮಾನವ ಜನ್ಮವನ್ನು ಪಾವನಗೊಳಿಸಿಕೊಳ್ಳಬೇಕೆಂದು ತಿಳಿಸಿದರು.
ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಎನ್ ಎಮ್ ನವೀನ್ ಕುಮಾರ್,
ಎಂ ಆರ್ ಬಾಲಕೃಷ್ಣ, ಪಂಚಮುಖಿ ಆಂಜನೇಯ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ,ಅಪೂರ್ವ ಸುರೇಶ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಕಡಕೊಳ ಜಗದೀಶ್, ಸಂದೇಪ್, ಜೀವಧಾರ ಗಿರೀಶ್, ಬಸವರಾಜು, ಜಯಸಿಂಹ, ಕೆಎಂ ನಿಶಾಂತ್, ಲಕ್ಷ್ಮಿದೇವಿ, ರೇಣುಕಾ ರಾಜ್, ವಿಜಯ್ ಕುಮಾರ್, ಟಿಎಸ್ ಅರುಣ್, ಸುಚೀಂದ್ರ, ಶಿವು ಪಟೇಲ್, ಮಹೇಶ್ ನಾಯಕ್, ಮನೋಜ್ ಇನ್ನಿತರರು ಇದ್ದರು
