ವಚನಗಳ ಇತಿಹಾಸ ತಿಳಿದುಕೊಂಡು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕೆ ಹರೀಶ್ ಗೌಡ

latha prabhukumar
4 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ವಚನಗಳ ಇತಿಹಾಸ ತಿಳಿದುಕೊಂಡು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕೆ ಹರೀಶ್ ಗೌಡ

ಮೈಸೂರು,ಫೆ.10 (ಕರ್ನಾಟಕ ವಾರ್ತೆ):- ಸಮಾಜದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶಿವ ಶರಣರು ತಮ್ಮ ತಮ್ಮ ವಚನಗಳ ಮೂಲಕ ಪ್ರಯತ್ನಿಸಿದರು. ಸಮಾಜದಲ್ಲಿ ಮುಂದಿನ ಪೀಳಿಗೆಗೆ ಇವರ ವಿಚಾರಧಾರೆ ಮತ್ತು ಸಮಾಜದ ಅಸಮಾನತೆ ಬಗ್ಗೆ ತಿಳಿದುಕೊಳ್ಳಬೇಕು. ವಚನ ಇತಿಹಾಸವು ಮರೆಯಾಗುತ್ತಿದ್ದು. ಪ್ರವಚನ ಪ್ರಶ್ನೋತ್ತರ ಮತ್ತು ವಚನಗಳು ಪುಸ್ತಕಗಳನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಚನ ಇತಿಹಾಸವನ್ನು ಬೋಧನೆ ಮಾಡಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ವಚನಕಾರರ ಸಂದೇಶವನ್ನು ಇಟ್ಟುಕೊಂಡು ಇಂದು ಜೀವನ ನಡೆಸಬೇಕು. ಸಮಾಜ ಉತ್ತಮವಾದ ರೀತಿಯಲ್ಲಿ ಇರಬೇಕಾದರೆ ಹಿಂದಿನ ಶಿವಶರಣ ವಚನಗಳ ಸಂದೇಶ ಮಹತ್ವವನ್ನು ತಿಳಿದು ಬದುಕಿನಲ್ಲಿ ಮಾನಸಿಕವಾಗಿ ಸದೃಢವಾಗಿ ತಮ್ಮ ಕಾಯಕವನ್ನು ನಡೆಸಬೇಕು ಎಂದು ಹೇಳಿದರು

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಇತಿಹಾಸವನ್ನು ತಿದ್ದುಪಡಿ ಮಾಡಲು ಯಾರಿಗೂ ಶಕ್ತಿ ಇಲ್ಲ ಅದನ್ನು ಅರ್ಥಮಾಡಿಕೊಳ್ಳಬೇಕು. ಭಾಷೆ, ಧರ್ಮ ಜಾತಿ ಇವುಗಳನ್ನು ಸಮಾಜದಲ್ಲಿ ಸಮಸ್ಯೆಗಳನ್ನಾಗಿ ನಾವೇ ಸೃಷ್ಟಿಸಿಕೊಂಡಿದ್ದೇವೆ. ಸಮಾಜದಲ್ಲಿ ಏಳುಬೀಳುಗಳನ್ನು ತಿಳಿದು ಜೀವನ ನಡೆಸಬೇಕು ಇದು ಅತ್ಯಗತ್ಯ. ಇಂದು ನಾವು ಸಮಾಜದಲ್ಲಿ ಬೇರೆಯವರ ಪೈಪೋಟಿಗೆ ಜೀವನ ಮಾಡುತ್ತಿದ್ದೇವೆ ಇಂದು ಮಾನವ ಅತಿಯಾದ ದುರಾಸೆಗಳಿಂದ ತುಂಬಿದ್ದಾನೆ ಎಂದರು.

ಜನರು ಅವರ ಅವಶ್ಯಕತೆಗೆ ತಕ್ಕಂತೆ ಅನುಗುಣವಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಸಂವಿಧಾನದ ಅಂಶಗಳನ್ನು ಇಟ್ಟುಕೊಂಡು ಎಲ್ಲರೂ ಜೀವನದಲ್ಲಿ ಮುಂದೆ ಬರಬೇಕು ಹುಟ್ಟು ದೇವರ ಸೃಷ್ಟಿ. ಹುಟ್ಟಿದ ಮೇಲೆ ಜೀವನ ಹೇಗೆ ನಡೆಸಿಕೊಂಡು ಹೋಗುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.
ತಮ್ಮ ಕೆಲಸ ಯಾವುದೇ ಇರಲಿ ಬೇದ ಭಾವವಿಲ್ಲದೆ ಕೀಳರಿಮೆ ಇಲ್ಲದೆ ಬದುಕನ್ನು ಸಾಗಿಸಬೇಕು ಸಮಾಜದಲ್ಲಿ ಸೌಲಭ್ಯಗಳಿಂದ ವಂಚಿತರಾದವರು ಶಿಕ್ಷಣದಿಂದ ಮೇಲೆ ಬರಲಿಕ್ಕೆ ಸಾಧ್ಯ ಆದ್ದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಅಗತ್ಯ. ನಮ್ಮ ಜೀವನ ಬೇರೆಯವರಿಗೆ ಪ್ರೇರಣೆಯಾಗಿರಬೇಕು ಎಂದು ಹೇಳಿದರು.

ವಿಧಾನ ಪರಿಷತ್ತಿನ ಶಾಸಕರಾದ ಡಿ ತಿಮ್ಮಯ್ಯ ಅವರು ಮಾತನಾಡಿ ಕಾಯಕ ಎಂದರೆ ಜೀವನದಲ್ಲಿ ಸುಳ್ಳು ಮೋಸ ವಂಚನೆ ಇವುಗಳನ್ನು ಬದಿಗಿಟ್ಟು ಜೀವನದಲ್ಲಿ ದುಡಿದು ತಿನ್ನುವ ಕೆಲಸದವರು. ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಹಲವಾರು ಶರಣ ವಚಣಕಾರರು ತಮ್ಮ ಹೋರಾಟವನ್ನು ಕೈಗೊಂಡಿದ್ದರು ಎಂದರು.
ಸರಿಸಮಾಜ ಅಂದರೆ ಆರೋಗ್ಯವಂತ ಜನ ದೈಹಿಕವಾಗಿ ಮಾನಸಿಕವಾಗಿ ಸಾಮಾಜಿಕವಾಗಿ ಸದೃಢವಾಗಿರಬೇಕು. ಆಗ ಸಮಾಜ ಸುಧಾರಣೆಯಾಗಲು ಸಾಧ್ಯ. ಜಾತಿಯನ್ನು ನಾಶ ಮಾಡಲು ಯಾವುದೇ ಔಷಧಿ ಇಲ್ಲ ಮನುಷ್ಯನ ಮನಸ್ಥಿತಿಯಿಂದ ಹೋಗಲಾಡಿಸಲು ಮಾತ್ರ ಸಾಧ್ಯ. ಇಂದಿನ ಸ್ವಾಮೀಜಿಗಳು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು. ಜೀವನದಲ್ಲಿ ಪ್ರತಿಯೊಬ್ಬರು ಅವಕಾಶ ಬಂದಾಗ ಅದನ್ನು ಉಪಯೋಗಿಸಿಕೊಳ್ಳಬೇಕು. ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರಾಗಿ ಮಾಡಿ ಎಂದು ಹೇಳಿದರು

ನಿವೃತ್ತ ಅಧಿಕಾರಿಗಳು ಮತ್ತು ಲೇಖಕರು ಕೆಪಿ ರಾಜಯ್ಯನವರು ಉಪನ್ಯಾಸ ಮಾತುಗಳನ್ನಾಡಿ ನಮ್ಮ ಸಂವಿಧಾನದಲ್ಲಿ ಸಮ ಸಮಾಜ ನಿರ್ಮಾಣ ಜಾತ್ಯಾತೀತ ಭಾವೈಕ್ಯತೆ ಇವುಗಳನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದರು. ಶಿವಶರಣ ಮಾದಾರ ಚೆನ್ನಯ್ಯನವರು 11ನೇ ಶತಮಾನದ ಅಂತ್ಯದಲ್ಲಿ ಶಿವಮೊಗ್ಗ ಜಿಲ್ಲೆ ಹುಡುತೊಡಿಯಲ್ಲಿ ಜನ್ಮ ತಾಳಿದರು. ಇವರ ಕಾಯಕ ಚರ್ಮದ ಚಪ್ಪಲಿಯನ್ನು ಸಿದ್ಧಪಡಿಸುವುದು ಇವರು ಅಷ್ಟಲಿಂಗ ಪೂಜೆ ಮಾಡುವುದರ ಜೊತೆಗೆ 11 ವಚನಗಳನ್ನು ಬರೆದಿದ್ದಾರೆ ಎಂದರು.

ಮಾದರ ಚೆನ್ನಯ್ಯನ ಮತ್ತು ಕರಿಕಾಳಚೋಳ ಇಬ್ಬರು ಶಿವನ ಅಪಾರಭಕ್ತರಾಗಿದ್ದರು ಹಾಗೂ ಚೆನ್ನಯ್ಯನವರು ಅಪಾರ ಶಕ್ತಿಯನ್ನು ಹೊಂದಿದರು. ಕರಿಕಾಳ ಚೋಳನು ಇವರ ಭಕ್ತಿಯನ್ನು ನೋಡಿ ತನ್ನ ಆಸ್ಥಾನಕ್ಕೆ ಬರ ಮಾಡಿಕೊಂಡಿದ್ದನು ಮತ್ತು ಮೊದಲು ವಚನವನ್ನು ಬರೆದವರು ಮಾದಾರ ಚೆನ್ನಯ್ಯ ಆದ್ದರಿಂದ ಬಸವಣ್ಣನವರು ಇವರಿಗೆ ಆದ್ಯಾ ವಚನಕಾರ ಎಂದು ಕರೆದರು.ಮಾದರ ಚೆನ್ನಯ್ಯನವರು ಅಂದು ತಮಿಳುನಾಡಿಗೆ ಹೋಗಿ ಕಂಚಿಪುರAನಲ್ಲಿ ಇದ್ದ ವಚನಗಳನ್ನು ಕರ್ನಾಟಕ್ಕೆ ತಂದರು.

ಅಂದು ಬಸವಣ್ಣನವರು ಎಲ್ಲರನ್ನು ಕೂಡಿಸಿ 1,96,000 ಜನರಿಗೆ ಲಿಂಗಧಾರಣೆ ಮಾಡಿದರು ಬಸವಣ್ಣ ನವರನ್ನು ಪರೀಕ್ಷೆ ಮಾಡಲು ಶಿವನು ವೃದ್ಧನ ವೇಷದಲ್ಲಿ ಬಂದಿದ್ದನು. ಈ ಸಮಾಜದಲ್ಲಿ ಮುಂದೊoದು ದಿನ ಮೇಲು-ಕೀಳು ಎಂಬ ಭೇದ ಭಾವ ಹೊಂದಿರುವ ಕಾಲ ಬರುತ್ತದೆ. ಸರ್ವರನ್ನು ಸಮಾನವಾಗಿ ಕಾಣುವೆ ಎಂದು ಶಿವ ನುಡಿದಂತೆ ಬಸವಣ್ಣನವರು ಹರಳಯ್ಯನವರ ಹತ್ತಿರ ಬಂದು ಶರಣು ಶರಣಾರ್ಥಿ ಹರಳಿಯ್ಯ ನವರೆ ಎಂದು ಹೇಳಿದರು. ಬಸವಣ್ಣನವರು ಹೇಳಿದ ಮಾತುಗಳಿಂದ ಹರಳಿಯ್ಯ ಭಾರ ಕಡಿಮೆ ಮಾಡಿಕೊಳ್ಳಲು ತನ್ನ ತೊಡೆಯಿಂದ ಚಪ್ಪಲಿಯನ್ನು ಸಿದ್ಧಪಡಿಸಿ ಬಸವಣ್ಣನವರಿಗೆ ನೀಡಲು ಮುಂದಾಗಿದ್ದರು ಎಂದರು.

ಮಧುವಸ್ಯ ಮಂತ್ರಿಗಳು ಹರಳಯ್ಯನವರನ್ನು ಅವಮಾನಿಸುವುದರಿಂದ ಅನಾರೋಗ್ಯ ಕೀಡಾಗುತ್ತಾರೆ ಈ ವಿಷಯ ತಿಳಿದ ಮಧುವಸ್ಯ ಮಂತ್ರಿಗಳು ಅಂದು ಹರಳಯ್ಯನವರಿಗೆ ಕ್ಷಮೆಯಾಚಿಸಿ ಅನಾರೋಗ್ಯದಿಂದ ಮುಕ್ತಿ ಹೊಂದಿದರು ನಂತರ ತನ್ನ ಮಗಳನ್ನು ಹರಳಯ್ಯನವರ ಮಗನಿಗೆ ಮದುವೆ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಾರೆ ಸಮಾಜದಲ್ಲಿ ಮೇಲು ಕೀಳು ಯಾವುದು ಇಲ್ಲ ಎಂದು ವಧುವಸ್ಯ ರಾಜನು ಹರಳಯ್ಯನವರಿಗೆ ಹೇಳಿ ಅವರ ಮಗನಿಗೆ ಅವರ ಮಗಳನ್ನು ನೀಡಿ ಮದುವೆ ಮಾಡಿಕೊಂಡರು ಅಂತಹ ಅದ್ಭುತ ಶಕ್ತಿಯನ್ನು ಹೊಂದಿದoತಹವರು ಶಿವಶರಣರು 12ನೇ ಶತಮಾನದಲ್ಲಿ ಸಮಾಜದ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಇಂದು ಶಿವ ಶರಣರು ಹಾಕಿಕೊಟ್ಟಂತಹ ದಾರಿಯಲ್ಲಿ ನಮ್ಮ ಜೀವನವನ್ನು ನಡೆಸಬೇಕು ಎಂದು ಹೇಳಿದರು

ಗಾಂಧಿ ಅಧ್ಯಯನ ಉಪನ್ಯಾಸಕಾರದ ಡಾ. ಮಂಜು ಟಿ ಅವರು ಮಾತನಾಡಿ 12 ಶತಮಾನದ ಅವಧಿಯು ತಳಸಮುದಾಯದ ಜನರಿಗೆ ಭದ್ರ ಬುನಾದಿ ಹಾಕಿಕೊಟ್ಟಂತಹ ಯುಗ. ಅಂದಿನ ಕಾಲದಲ್ಲಿ ಕೆಳ ವರ್ಗದವರನ್ನು ಕ್ರೂರ ಹೀನಾಯವಾಗಿ ನಡೆಸಿಕೊಟ್ಟಂತಹ ಕಾಲದಲ್ಲಿ ಉಗಮವಾದವರು ಈ ಶಿವಶರಣರು. ಡೋಹರ ಕಕ್ಕಯ್ಯನವರು ಮಹಾರಾಷ್ಟ್ರದರವರು ಕಕ್ಕ ಅಂದರೆ ಚಿಕ್ಕಪ್ಪ ಅಲ್ಲಿ ಎಲ್ಲರು ಚಿಕ್ಕಪ್ಪ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಪರಿಷತ್ತಿನ ಶಾಸಕರಾದ ಸಿ ಎನ್ ಮಂಚೇಗೌಡ ಶಿವ ಶರಣರ ಹರಳಯ್ಯ ಮಹಾಸಂಸ್ಥಾನ ಮಠದ ಶ್ರೀ ಶ್ರೀ ರುದ್ರಪ್ಪ ಹರಳಯ್ಯ ಸ್ವಾಮೀಜಿ, ಕನ್ನಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಎಡತೋರ ನಿಂಗರಾಜು ಪಾಳ್ಯ ರಾಜಪ್ಪ, ಕೆ. ಆರ್ ನಗರದ ಮಹದೇವ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment