ಪಬ್ಲಿಕ್ ಅಲರ್ಟ್
ಮೈಸೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಅನ್ನೋದು ಕಾಂಗ್ರೆಸ್ ಕಾರ್ಯಕರ್ತರ ಬಯಕೆ ಆಗಿದೆ ಎಂದು ಕೆಪಿಸಿಸಿ ವಕ್ತಾರ ಶ್ರಿನಿವಾಸ್ ಹೇಳಿದರು.
ಮುಂದಿನ ನಾಯಕ ಜಾರಕಿಹೋಳಿ ಎಂಬ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಯಿಸಿದ ಅವರು, ಮುಂದಿನ ಸಿಎಂ ಯಾರು ಎಂದು ತಿರ್ಮಾನ ಮಾಡೋದು ಹೈ ಕಮಾಂಡ್ ಹೊರತು ಬೇರೆ ಯಾರು ಅಲ್ಲ. ಯತೀಂದ್ರ ಅವರು ಈ ರೀತಿ ಬಹಿರಂಗ ಹೇಳಿಕೆ ನೀಡಬಾರದು. ಈ ರೀತಿ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು.
ಯತೀಂದ್ರ ನಮ್ಮಂತೆಯೇ ಒಬ್ಬ ಕಾರ್ಯಕರ್ತರಾಗಿದ್ದಾರೆ. ಈ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು.
ಪಕ್ಷಕ್ಕಾಗಿ ಡಿ.ಕೆ.ಶಿವಕುಮಾರ್ ಸೇವೆ ಬಹಳಷ್ಟು ಇದೆ. ಇದು ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರ ಆಶಯವಾಗಿದೆ. ಹೀಗಿರುವಾಗ ಯತೀಂದ್ರ ಅವರ ಇಂತಹಾ ಹೇಳಿಕೆಯಿಂದ ವಿರೋಧ ಪಕ್ಷಗಳಿಗೆ ನಾವೇ ಅಹಾರ ಕೊಟ್ಟಂತಾಗುತ್ತದೆ ಎಂದರು.
ಡಿಕೆಶಿ ಸಿಎಂ ಆಗಬೇಕು: ಕಾರ್ಯಕರ್ತರ ಬಯಕೆ

Leave a Comment
Leave a Comment