ಪಬ್ಲಿಕ್ ಅಲರ್ಟ್
ಮೈಸೂರು: ಸೌಂಡ್ ಎನ್ ರಿದಂ ಆರ್ಕೆಸ್ಟ್ರಾವತಿಯಿಂದ ಅ.೯ರ ಸಂಜೆ ೫.೩೦ಕ್ಕೆ ನಗರದ ನಂಜುಮಳಿಗೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅವರ ಚಿತ್ರಗೀತೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಂಡದ ಮುಖ್ಯಸ್ಥ ಎ.ಎಸ್. ರವಿಶಂಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ೧೬ ಮಂದಿ ಗಾಯಕರು ಒಟ್ಟು ೨೯ ಗೀತೆಗಳನ್ನು ಹಾಡಲಿದ್ದಾರೆ. ಇದು ಸಂಪೂರ್ಣ ಉಚಿತ ಪ್ರೇಶದ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು. ತಂಡದ ನಾಗೇಂದ್ರ, ಮಂಜುಳಾ, ಕೆ.ಡಿ. ತಿಮ್ಮರಾಜು, ಗಂಗಾಧರ್ ಹಾಜರಿದ್ದರು.
