ಪಬ್ಲಿಕ್ ಅಲರ್ಟ್
ಮೈಸೂರು: ಎಲ್ಲಾ ಜಾತಿ, ಜನಾಂಗದ ಆರ್ಥಿಕವಾಗಿ ದುರ್ಬಲ ವರ್ಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಹೊಸಮಠದ ಕಾರ್ಯ ಶ್ಲಾಘನೀಯ. ಯಾವುದೇ ಆಡಂಬರವಿಲ್ಲದೆ ಕೊಡ್ಡ ಕೊಡುಗೆಯನ್ನು ನೀಡುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಶ್ರೀ ನಟರಾಜ ಕಾಲೇಜಿನ ಮುಂಭಾಗ ಶ್ರೀ ಹೊಸಮಠ ಮತ್ತು ಶ್ರೀ ನಟರಾಜ ಪ್ರತಿಷ್ಠಾನ ಸಹಯೋಗದಲ್ಲಿ ಗುರುವಾರ ನಡೆದ ಶ್ರೀ ಚಿದಾನಂದ ಸ್ವಾಮೀಜಿಗಳವರ ಅಮೃತ ಮಹೋತ್ಸವದ ಗುರುವಂದನೆ, ಎಂ.ಬಿ.ರಾಕೇಶ್ ಎಂಬ ವಟುವಿಗೆ ನಿರಂಜನ ಪಟ್ಟಾಧಿಕಾರ ಮಹೋತ್ಸ ಮತ್ತು ಚಿದ್ಬೆಳಕು ಗ್ರಂಥ ಮತ್ತು ಚಿದಾಮೃತ ಚಿತ್ರ ಸಂಪುಟ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸಮಠದ ಶ್ರೀ ಚಿದಾನಂದಸ್ವಾಮೀಜಿಯವರು ೭೫ ವರ್ಷಗಳ ಅವಧಿಯಲ್ಲಿ ೧೬ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇದು ಸುಲಭದ ಕೆಲಸವಲ್ಲ. ಈ ಸಂಸ್ಥೆುಂಲ್ಲಿ ಐದು ಸಾವಿರಕ್ಕೂ ಹೆಚ್ಚು ಮಕ್ಕಳ ವ್ಯಾಸಂಗ ವಾಡುತ್ತಿದ್ದಾರೆ ಎಂದರೆ ಅದು ಅವರ ಶಿವಪೂಜೆುಂ ಫಲ. ಈ ಮಠವನ್ನು ಕಟ್ಟುವುದು ಸುಲಭ. ಆದರೆ ಮುನ್ನಡೆಸಿಕೊಂಡು ಹೋಗುವುದು ತಪ್ಪಿಸನಂತೆ, ಇದೆಲ್ಲವೂ ಶ್ರೀಗಳಿಗೆ ಸಾಧ್ಯ ಆಗಿರುವುದು ಅವರ ಪೂಜೆಯ ಫಲವಾಗಿದೆ. ಶ್ರೀ ತಮ್ಮ ಕಾಯಕ ಮತ್ತು ದೂರದೃಷ್ಟಿಯ ಚಿಂತನೆಯಿಂದ ಶ್ರೀ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಯಾವ ಮಠ ಬಡವರು, ಕಡುಬಡವರು ಹಾಗೂ ಸಾಮಾನ್ಯರಿಗೆ ವಿದ್ಯೆ ಕೊಡುತ್ತದೋದೊ ಅಂತಹ ಮಠಗಳಿಂದ ರಾಷ್ಟ್ರ ಮತ್ತು ನಾಡಿನ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.
ಇದು ಮೋದಿ ಯುಗ. ರೈಲ್ವೆ ಇಲಾಖೆುಂಲ್ಲಿ ಮಹತ್ವದ ಕೆಲಸಗಳು ನಡೆಯುತ್ತಿವೆ. ನಾನು ತುಮಕೂರಿನ ಸಿದ್ಧಗಂಗಾ ಶ್ರೀಗಳ ಋಣ ತೀರಿಸಲು ಅಲ್ಲಿನ ರೈಲ್ವೆ ನಿಲ್ದಾಣಕ್ಕೆ ಶ್ರೀ ಶಿವಕುವಾರಸ್ವಾಮೀಜಿ ಹೆಸರು ಇಡಲಾಗಿದೆ. ಅಲ್ಲದೆ ೧೦೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೊಸ ಮಠಕ್ಕೂ ನಮಗೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಅನೇಕ ಚಿಂತನೆ, ಪ್ರಗತಿಪರ ಕಾಂರ್ುಗಳು ನಡೆುುಂತ್ತವೆ. ಬಡವರ ಮಕ್ಕಳು ಸಂಸ್ಕಾರದಿಂದ ಬದುಕಬಹುದು. ಅವರಿಗೂ ಅರ್ಹತೆ ಇದೆ. ಅದನ್ನು ಮಾಡಲು ಶ್ರೀಗಳು ತೆಗೆದುಕೊಂಡ ದೂರದೃಷ್ಟಿಯ ಚಿಂತನೆ ಒಂದು ರೀತಿಯ ಸಂದೇಶ ನೀಡುತ್ತದೆ. ಅಂತಹ ಶ್ರೀಮಠಕ್ಕೆ ಸಾಂಸ್ಕೃತಿಕ ಹಿನ್ನೆಲೆ ಇದೆ. ನಾನು ಚಿಕ್ಕವನಿದ್ದಾಗ ನಮ್ಮ ಊರಿಗೆ ಯಾವುದೇ ಮೂಲಭೂತ ಸೌಲಭ್ಯ ಇರಲಿಲ್ಲ. ನಿರ್ವಾಣ ಸ್ವಾಮೀಜಿ ಮತ್ತು ಮಹಾಲಿಂಗ ಸ್ವಾಮೀಜಿಗಳ ಬಳಿಗೆ ನನ್ನನ್ನು ಸೇರಿಸಿದರು. ಅಲ್ಲಿ ನಾನು ಓದಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆದರು. ರಾಷ್ಟ್ರದ ಸಂಕಷ್ಟ, ನ್ಯೂನತೆ ಹೇಳುವ ಶಕ್ತಿ ಕೆಲವು ತಪಸ್ವಿಗಳಿಗೆ ಮಾತ್ರ ಇದೆ. ಆ ಸಾಲಿಗೆ ಹೊಸಮಠವೂ ಸೇರಲಿದೆ. ಕಾಯಕ ಮತ್ತು ದಾಸೋಹ ತತ್ವದಿಂದ ಉನ್ನತ ಸಾಧನೆ ಮಾಡಬೇಕು. ಈ ದೇಶ ಮತ್ತು ರಾಜ್ಯದ ಇತಿಹಾಸವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ದೊಡ್ಡ ಪರಂಪರೆ ಇಲ್ಲಿದೆ. ಹೊಸಮಠದ ಇತಿಹಾಸವನ್ನು ನೂರು ಪಟ್ಟು ಹೆಚ್ಚಿಸಿದವರು ಚಿದಾನಂದ ಶ್ರೀಗಳು. ಅವರ ನೇರ ನಡೆ ನುಡಿಯಿಂದ ಅವರು ಗುರುತಿಸಿಕೊಂಡವರೆಂದರು.
ಇದೇ ಸಂದರ್ಭದಲ್ಲಿ ಶ್ರೀ ಸುರ್ಯಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀ ಹೊಸಮಠದ ನೂತನ ಲಾಂಚನವನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಚಿದ್ಬೆಳಕು ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಬೇಬಿಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಹೆಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಂಸದ ಪ್ರತಾಪ್ ಸಿಂಹ, ಶ್ರೀ ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಜೆ.ಎಸ್.ಎಸ್.ಮಹಾವಿದ್ಯಾಪೀಠದ ಎಸ್.ಪಿ.ಮಂಜುನಾಥ್ ಸೇರಿ ಇತರರು ಹಾಜರಿದ್ದರು.
ಜಿಎಸ್‌ಟಿ ಬಂಬರ್ ಕೊಡುಗೆ
ದೇಶದ ಪ್ರಧಾನಿ ಮಂತ್ರಿಗಳು ದೇಶದ ಜನರಿಗೆ ಜಿಎಸ್‌ಟಿ ಮೂಲಕ ದಸರಾ ಹಾಗೂ ದೀಪಾವಳಿುಂ ಉಡುಗೊರೆುಂನ್ನು ನೀಡಿದ್ದಾರೆ. ಸಾವಾನ್ಯ ಜನರಿಗೆ ಬೇಕಾಗಿದ್ದಂತಹ ಜನೌಷಧ ಕೆಂದ್ರಗಳು, ಬಡವರು ಉಪೋಂಗಿಸುವಂತಹ ವಸ್ತುಗಳು ಹಾಗೂ ಸಾವಾನ್ಯರಿಗೆ ಬೇಕಾದಂತಹ ೩೫೦ಕ್ಕೂ ಹೆಚ್ಚಿನ ಅನೇಕ ವಸ್ತುಗಳ ಮೇಲಿನ ತೆರಿಗೆುಂನ್ನು ತುಂಬಾ ಕಡಿಮೆ ವಾಡಿ ಹಾಗೂ ಅತ್ಯಂತ ಕಡಿಮೆ ದರವನ್ನು ನಿಗದಿ ವಾಡಿದ್ದಾರೆ.
– ವಿ.ಸೋಮಣ್ಣ, ರಾಜ್ಯ ಸಚಿವ, ಕೇಂದ್ರ ರೈಲ್ವೆ ಖಾತೆ.
ಬಸವಣ್ಣ ಪರಿಕಲ್ಪನೆಯನ್ನು ಜಾರಿಯನ್ನು ಅನುಷ್ಠಾನಕ್ಕೆ ತಂದಿರುವ ಮಠ-ಮಾನ್ಯಗಳು ದೇಶ ಸಂಪತ್ತಾಗಿವೆ. ಪ್ರತಿೊಂಂದು ಮಠವೂ ಜಾತಿ ಬೇದ ಮರೆತು ಶಿಕ್ಷಣ, ದಾಸೋಹ, ಆರೋಗ್ಯವನ್ನು ಕೊಡುತ್ತಿವೆ. ಶ್ರೀ ಚಿದಾನಂದ ಸ್ವಾಮೀಜಿ ಕಾುಂಕ ವಾದರಿಯಾದದ್ದು. ಾಂವುದೇ ಮೂಲದಿಂದ ಆದಾುಂ ಇಲ್ಲದೆ ಶಿಕ್ಷಣ ಕೊಡುತ್ತಿರುವ ಕಾಯಕಯೋಗಿ. ಕಡಿಮೆ ಪ್ರವೇಶ ಶುಲ್ಕದಲ್ಲಿ ಶಿಕ್ಷಣ ನೀಡಿ ಮಹಿಳಾ ಸಬಲೀಕರಕ್ಕೆ ಮುಂದಾಗಿದ್ದು, ಶ್ರೀಗಳ ಸವಾಜಮುಖಿ ಕಾಂರ್ುಗಳು ಮುಂದುವರಿಬೇಕು. ನೂರು ವರ್ಷಗಳ ಕಾಲ ಜೀವನ ನಡೆಸಬೇಕು.
– ಜಿ.ಟಿ.ದೇವೇಗೌಡ, ಶಾಸಕ.