ಪಬ್ಲಿಕ್ ಅಲರ್ಟ್
ಮೈಸೂರು:ಅಡವಿಟ್ಟ ಚಿನ್ನ ಖರೀದಿಸಿ ಬಾಕಿ ಹಣ ಕೊಡುತ್ತೇವೆ ಎಂದು ನಂಬಿಸಿ ವಂಚನೆ ಮಾಡುವವರು ಈಚಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಹೀಗಾಗಿ ಅಂತಹವರು ಎಚ್ಚರಿಕೆ ವಹಿಸಬೇಕು ಎಂದು ಸ್ಕಂದ ಗೋಲ್ಡ್ ಕಂಪನಿ ಸ್ಥಾಪಕ ಸಹದೇವ್ ಸಲಹೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಅಡವಿಟ್ಟ ಚಿನ್ನ ಬಿಡಿಸಿಕೊಂಡ ಬಳಿಕ ಅದನ್ನು ಖರೀದಿಸುವುದಾಗಿ ಹೇಳುವ ವೇಳೆ ಗ್ರಾಹಕರು ಚಿನ್ನ ಕರಗಿಸುವುದು ಬೇಡ, ಇರುವ ಚಿನ್ನಕ್ಕೇ ದರ ನಿಗದಿ ಮಾಡಿ ಎಂದ ಒತ್ತಾಯಿಸಬೇಕು. ಏಕೆಂದರೆ ಕರಗಿಸುವ ವೇಳೆ ಅದಕ್ಕೆ ತಾಮ್ರ ಸೇರಿಸಿ, ವೇಸ್ಟೇಜ್ ಎಂದು ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡುವುದು ನಡೆದಿದೆ. ಇಂತಹ ಸಂದರ್ಭದಲ್ಲಿ ಕಂಪ್ಯೂಟರೈಸ್ಡ್ ಗೋಲ್ಡ್ ಟೆಸ್ಟಿಂಗ್ ಮಾಡಿಸಿ ಅದರ ಶುದ್ಧತೆ ಪ್ರಮಾಣಪತ್ರದೊಂದಿಗೆ ಮಾರಾಟಕ್ಕೆ ಮುಂದಾಗಬೇಕು ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇರವಾಗಿ ಗಿರವಿ ಅಂಗಡಿಗೆ ಹೋಗಿ ಮಾರಾಟ ಮಾಡುವುದು ಉತ್ತಮವಲ್ಲ. ಇದರಿಂದ ಸೂಕ್ತ ಮೌಲ್ಯ ಸಿಗದೆ ಮೋಸ ಹೋಗಬಹುದು. ಆದ್ದರಿಂದ ಪರಿಶುದ್ಧತೆ ಪ್ರಮಾಣಪತ್ರ ಪಡೆದೇ ಮಾರಾಟ ಮಾಡಬೇಕು. ಇದಕ್ಕೆ ಹೆಚ್ಚಿನ ವೆಚ್ಚವೂ ಅಗುವುದಿಲ್ಲ ಎಂದು ಮಾಹಿತಿ ನೀಡಿದರು. ಸಂಸ್ಥೆ ಸಿಬ್ಬಂದಿ ಸಂಜಯ ಇದ್ದರು.
