ಭವಿಷ್ಯದಲ್ಲಿ ಭಾರತದ ಆರ್ಥಿಕ ಪ್ರಗತಿ ಸಾಧಿಸಲಿದೆ ಉದ್ಯಮಿ  ಉಲ್ಲಾಸ್ ಕಾಮತ್ ವಿಶ್ವಾಸ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗಿಂತಲೂ ಉತ್ತಮ ಪ್ರಗತಿ ಸಾಧಿಸಬೇಕಿದ್ದು, ಖಂಡಿತವಾಗಿ ಪ್ರಗತಿ ಸಾಧಿಸಲಿದೆ ಎಂದು ಬೆಂಗಳೂರಿನ ಸಾಮಿ-ಸಬಿನ್ಸಾ ಗ್ರೂಪ್ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ವಿಪ್ರ ಪ್ರೊಫೆಷನಲ್‌ ಫೋರಂ ವತಿಯಿಂದ ವಿಜಯನಗರದ ಜೆಸಿಎಸಿ ಸಭಾಂಗಣದಲ್ಲಿಆಯೋ ಜಿಸಿದ್ದ ವಿಪಿಎಫ್‌ ಬಿಸಿನೆಸ್‌ ಕಾನ್‌ಕ್ಲೇವ್‌ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದ ಒಟ್ಟು ಜಿಡಿಪಿ ಅಂದಾಜು 100 ಥ್ರಿಲಿಯನ್‌ಗಳಿದ್ದು, ವಿಶ್ವದ ಹಿರಿಯಣ್ಣ ಎಂದು ಕರೆಯಲ್ಪಡುವ ಅಮೆರಿಕಾದ ಜಿಡಿಪಿ ೩೦ ಥ್ರಿಲಿಯನ್‌ ಇದೆ. ಆ ಮೂಲಕ ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗ ಅಮೆರಿಕಾ ಹೊಂದಿದೆ. ಭಾರತದ ಜನಸಂಖ್ಯೆಯ ಶೇ.25ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಅಮೆರಿಕಾದ ಆರ್ಥಿಕತೆ ಭಾರತಕ್ಕಿಂತ ಅತ್ಯಂತ ಉತ್ತಮವಾಗಿದೆ ಎಂದರು.
ಪತ್ರಕರ್ತ ರವಿ ಹೆಗ್ಗಡೆ ಮಾತನಾಡಿ, ಕೃತಕ ಬುದ್ದಿಮತ್ತೆ(ಎಐ)ನಿಂದ ದೊಡ್ಡಮಟ್ಟದ ಪರಿಣಾಮ ಬೀರಲಿದ್ದು, ಇಡೀ ವಿಶ್ವವನ್ನೇ ಬದಲಿಸಲಿದೆ. ಪ್ರಮುಖವಾಗಿ ಎಐನಿಂದ ಬ್ರಾಹ್ಮಣ ಸಮುದಾಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗಲಿದೆ. ಬ್ರಾಹ್ಮಣರು ಮಾಡುವ ಕೆಲಸವನ್ನು ಎಐ ತಾನೇ ಮಾಡುತ್ತಿದೆ. ಉದಾಹರಣೆಗೆ ಬ್ರಾಹ್ಮಣರು ಹೇಳುವ ಮಂತ್ರವನ್ನು ಇಂದು ಎಐ ಹೇಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ವಿಪಿಎಫ್  ಅಧ್ಯಕ್ಷ ಹಾಗೂ ಜಿಎಸ್‌ಎಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ  ಡಿ.ಶ್ರೀಹರಿ ಮಾತನಾಡಿ, ಬಡ ಬ್ರಾಹ್ಮಣ, ಬಡ ಪೂಜಾರಿ ಎಂಬ ಪದಗಳನ್ನು ತೆಗೆಯು ವ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ವಿಪಿಎಫ್‌ ಮೈಸೂರಿನಲ್ಲಿ ತನ್ನ ವಿಂಗ್ ಆರಂಭಿಸಿದೆ. ನಾವು ಎರಡು ಕಾರಣಗಳಿಂದ ಒಂದಾಗುತ್ತಿದ್ದು, ಯಾರಿಗಾದರೂ ತೊಂದರೆ ಎದುರಾದರೆ ನೆರವಿಗೆ ಧಾವಿ ಸುತ್ತೇವೆ. ಮಾಧ್ಯಮ ಕ್ಷೇತ್ರದಲ್ಲಿರುವವರು ನಮ್ಮ ಸಂಪರ್ಕದಲ್ಲಿದ್ದು, ದೊಡ್ಡವರು ಚಿಕ್ಕವರೆಂಬ ತಾರ ತಮ್ಯ ಇಲ್ಲದೆ, ಎಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದೇವೆ. ವಿಪಿಎಫ್‌ ಪ್ರಸ್ತುತ ಮೈಸೂರಿನಲ್ಲಿ ಆರಂಭಿಸಿ ದ್ದು ಮುಂದೆ ಮೈಸೂರಿನ ಅಕ್ಕಪಕ್ಕದ ನಾಲ್ಕು ಜಿಲ್ಲೆಗಳಲ್ಲೂ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ನಂತರದ ದಿನಗಳಲ್ಲಿ ವಿಪಿಎಫ್‌ ಕಾರ್ಯವ್ಯಾಪ್ತಿಯನ್ನು ರಾಜ್ಯಾಧ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಚೇರ್ಮೇನ್ ಸಮಾರ್ಥ್ ವಿದ್ಯಾ ಮಾತನಾಡಿ ವಿಫಿಎಫ್ ಘಟಕ ಸ್ಥಾಪನೆ ಮೂಲಕ ಸಮು ದಾಯದ ಜನರನ್ನು ಒಗ್ಗೂಡಿಸಿ ಸಂಕಷ್ಟದಲ್ಲಿರುವವರ ನೆರವುಗೆ ನಿಲ್ಲುವ ಪ್ರಯತ್ನ ಮೊದಲ ಬಾರಿಗೆ ಯಶಸ್ಸಯ ಕಂಡಿದ್ದೇವೆ. ಎಲ್ಲರ ಸಹಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಉದ್ಯಮಿಗಳಾದ ಕೇಶವ್, ಜಿ.ಎಸ್.ಎಸ್.ಎಸ್ ಭರತ್, ಜಯಸಿಂಹ, ವೆಂಕಟೇಶ್,ಭಾಷ್ಯಂ ಎಸ್,ಶ್ರೀನಿವಾಸ್ ವರದರಾಜನ್, ಅನಂತನಾಗರಾಜ್, ರಾಧಕೃಷ್ಣ ಎಸ್ ಹಾಗೂ  ವಿಪಿಎಫ್  ಸಮಿತಿ ಉಪಾಧ್ಯಕ್ಷ ಡಾ.ಎಸ್.ಮುರುಳಿ, ಕೆ.ಆರ್. ಸತ್ಯನಾರಾಯಣ್, ಕಾರ್ಯದರ್ಶಿ  ಎ.ಸುಧೀಂದ್ರ, ಜಂಟಿ ಕಾರ್ಯದರ್ಶಿ ಶ್ರೀವತ್ಸ ಮಂಜುನಾಥ್, ಸಮರ್ಥ್, ಖಜಾಂಚಿ  ಸಿ.ಎಸ್.ಸತ್ಯಪ್ರಕಾಶ್, ನಿರ್ದೇಶಕ  ಹೆಚ್.ಎನ್‌ ಚಂದ್ರಶೇಖರ್, ಜಿ.ಎಸ್.ಗಣೇಶ್, ಡಾ.ಕಾರ್ತಿಕ್ ಪಂಡಿತ್, ಶಿವಪ್ರಸಾದ್, ಪಿ.ಎಸ್.ನಾರಾಯಣ್ ಡಿ.,ಪ್ರಭಕಾರ್ ರಾವ್. ಕೆ, ಡಾ.ಎಲ್.ಸವಿತಾ, ಕೆ.ಎಸ್.ಶಿವಶಂಕರ್  ಸೇರಿ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment