ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಮಾಧ್ಯಮದವರಿಗೆ ಪ್ರವೇಶವಿಲ್ಲ- ಮೊದಲು ಹೀಗಿರಲಿಲ್ಲ!.

Chethan
1 Min Read

ಕೃಪೆ: ಶ್ರೀ ಅಂಶಿಪ್ರಸನ್ನಕುಮಾರ್( ಹಿರಿಯ ಪತ್ರಕರ್ತರ ಸಾಮಾಜಿಕ ಜಾಲತಾಣ ಸಂಗ್ರಹ)

ಮೈಸೂರು/ಬೆಂಗಳೂರು: ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಮಾಧ್ಯಮದವರಿಗೆ ಪ್ರವೇಶವಿಲ್ಲ- ಮೊದಲು ಹೀಗಿರಲಿಲ್ಲ!. ರಾಷ್ಟ್ರಪತಿ ದ್ರೌಪದಿ ‌ಮುರ್ಮು ಅವರು ಸೆ.1 ರಂದು ಮೈಸೂರಿನಲ್ಲಿ ಭಾಗವಹಿಸುವ ಕಾರ್ಯಕ್ರಮಕ್ಕೆ ‌ಮಾಧ್ಯಮದವರಿಗೆ ಪ್ರವೇಶ ‌ಇಲ್ಲವಂತೆ!

ಮೊದಲೆಲ್ಲಾ ಹೀಗಿರಲಿಲ್ಲ. ರಾಷ್ಟ್ರಪತಿ, ಪ್ರಧಾನಿ ಬಂದಾಗ ಮಾಧ್ಯಮದವರನ್ನು ಭೇಟಿ ಮಾಡುತ್ತಿದ್ದರು. ಸಾಮಾನ್ಯವಾಗಿ ‌ಲಲಿತಮಹಲ್ ಪ್ಯಾಲೇಸ್‌ ನಲ್ಲಿ ವಾಸ್ತವ್ಯ. ಮಾಧ್ಯಮದವರ ಜೊತೆಗೆ ‌ಉಪಾಹಾರ ಕೂಟ, ಸಮೂಹ ಭಾವಚಿತ್ರ ‌ಕೂಡ ಇರುತ್ತಿತ್ತು.

ಕಳೆದ ನಾಲ್ಕು ದಶಕಗಳಿಂದ ರಾಷ್ಟ್ರಪತಿಗಳಾದ ಆರ್. ವೆಂಕಟರಾಮನ್, ಶಂಕರದಯಾಳ್ ಶರ್ಮ, ಕೆ.ಆರ್. ನಾರಾಯಣನ್, ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ, ದ್ರೌಪದಿ ‌ಮುರ್ಮು ಭೇಟಿ ‌ನೀಡಿದ್ದಾರೆ. ಮುರ್ಮು ಅವರು ಎರಡು ವರ್ಷಗಳ ಹಿಂದೆ ‌ದಸರಾ ಉದ್ಘಾಟನೆಗೂ ಬಂದಿದ್ದರು. ಆಗ ಯಾವುದೇ ‌ನಿರ್ಬಂಧ ಇರಲಿಲ್ಲ. ಅದೇ ರೀತಿ ‌ಪ್ರಧಾನಿಗಳಾದ ರಾಜೀವ್ ಗಾಂಧಿ, ವಿ.ಪಿ.ಸಿಂಗ್, ಚಂದ್ರಶೇಖರ್, ಅಟಲ್‌ ಬಿಹಾರಿ ವಾಜಪೇಯಿ, ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್, ಮನಮೋಹನ್ ಸಿಂಗ್, ನರೇಂದ್ರ ಮೋದಿ ‌ಅವರು ಭೇಟಿ ‌ನೀಡಿದಾಗಲೂ ಯಾವುದೇ ‌ನಿರ್ಬಂಧ‌ ಇರಲಿಲ್ಲ. ಚಂದ್ರಶೇಖರ್ ಅವರಂತೂ ಬೆಮೆಲ್‌ ಉದ್ಘಾಟನೆಗೆ ಬಂದಾಗ ಅಲ್ಲಿನ ಹೆಲಿಪ್ಯಾಡ್ ನಲ್ಲಿ ಮುಕ್ತವಾಗಿ ಮಾತನಾಡಿದ್ದರು. ಅದೇ ರೀತಿ ಕಲಾಂ ಅವರು ಬಂದಾಗಲೆಲ್ಲಾ ಮಾಧ್ಯಮ, ವಿದ್ಯಾರ್ಥಿಗಳ ಜೊತೆಗೆ ‌ ಸಂವಾದ ಇರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ‌ಭದ್ರತೆಯ ದೃಷ್ಟಿಯಿಂದ ಮೊದಲಿನಂತೆ ಮುಕ್ತ ಭೇಟಿ ಇಲ್ಲವಾದರೂ ‌ಅತಿಗಣ್ಯರ ಕಾರ್ಯಕ್ರಮಗಳಿಗೆ‌ ಮಾಧ್ಯಮದವರು ಭಾಗವಹಿಸಲು ನಿರ್ಬಂಧ ‌ಇರಲಿಲ್ಲ.

Share This Article
Leave a Comment