ಕನಕಗಿರಿ ಸರ್ಕಾರಿ ಪ್ರೌಢಶಾಲೆಗೆ ಕಂಪ್ಯೂಟರ್ ಗಳನ್ನು ವಿತರಿಸಿದ ಸಂಸದ ಯದುವೀರ್ ಕೃಷ್ಣ ಚಾಮರಾಜ ಒಡೆಯರ್

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಸರ್ಕಾರಿ ಶಾಲೆಗೆ ಕಂಪ್ಯೂಟರ್ ವಿತರಣೆ

ಕನಕಗಿರಿ ಸರ್ಕಾರಿ ಪ್ರೌಢಶಾಲೆಗೆ ಕಂಪ್ಯೂಟರ್ ಗಳನ್ನು ವಿತರಿಸಿದ ಸಂಸದ ಯದುವೀರ್ ಕೃಷ್ಣ ಚಾಮರಾಜ ಒಡೆಯರ್

ಮೂರು ಶಾಲೆಗಳಿಗೆ ಕಂಪ್ಯೂಟರ್ ವಿತರಣೆ: ಸರ್ಕಾರಿ ಪ್ರೌಢಶಾಲೆ ಕನಕಗಿರಿ, ಸರ್ಕಾರಿ ಪ್ರೌಢಶಾಲೆ ವಿನಾಯಕ ನಗರ, ಆದರ್ಶಪ್ರೌಢಶಾಲೆ ಮೈಸೂರು

2024/25 ನೇ ಸಾಲಿನ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ
ಮೂರು ಶಾಲೆಗಳಿಗೆ ಕಂಪ್ಯೂಟರ್ ವಿವರಣೆ ಮಾಡಲಾಯಿತು,

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಶಾಸಕ ಶ್ರಿವತ್ಸಾ ಅವರು ನೆರವೇರಿಸಿದರು ,

ನಂತರ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಪ್ರಯೋಜನವನ್ನು ಸರ್ಕಾರಿ ಶಾಲಾ ಮಕ್ಕಳು ಬಳಸಿಕೊಳ್ಳಬೇಕು , ಇದರ ಸಲುವಾಗಿ 2024/25 ನೇ ಸಾಲಿನ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ
ಮೂರು ಶಾಲೆಗಳಿಗೆ ಮೂವತ್ತು ಕಂಪ್ಯೂಟರ್ ವಿವರಣೆಗಳನ್ನು ನೀಡಲಾಗುತ್ತಿದೆ , ಇದರಿಂದ ನಿಮ್ಮ ವ್ಯಾಸಂಗಕ್ಕೆ ಅನುಕೂಲ ವಾಗುವ ರೀತಿಯಲ್ಲಿ ಕಂಪ್ಯೂಟರ್ ಗಳನ್ನು ಬಳಸಿಕೊಳ್ಳಬೇಕು , ಇವತ್ತಿನ ಎಐ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ವಿಧ್ಯಾರ್ಥಿಯೂ ಸೃಜನಶೀಲರಾಗ ಬೇಕು,

ಈ ಕಂಪ್ಯೂಟರ್ ಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಅದಕ್ಕೆ ಶಿಕ್ಷಕರು ಸಹ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು , ಮುಂದೆ ಇದರಿಂದ ನೀವು ಉತ್ತಮ ಭವಿಷ್ಯ ರೂಪಿಸಿಕೊಂಡರೆ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಇದೆ ಸಂಧರ್ಭದಲ್ಲಿ
ಉದಯ್ ಕುಮಾರ್ ಉಪನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೃಷ್ಣ ಕ್ಷೇತ್ರಶಿಕ್ಷಣಾಧಿಕಾರಿಗಳು ಮೈಸೂರು ದಕ್ಷಿಣ ವಲಯ,ಮೂರು ಶಾಲೆಯ ಶಿಕ್ಷಕ ವೃಂದದವರು , ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment