ತಲುಪಿದ BHIO
ಪಬ್ಲಿಕ್ ಅಲರ್ಟ್ ನ್ಯೂಸ್:-150 ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆಗಳ ಮೈಲಿಗಲ್ಲು ತಲುಪಿದ BHIO
ಮೈಸೂರು: ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಸ್ಥೆಯು (BHIO), ಡಿಸೆಂಬರ್ 2024 ರಲ್ಲಿ ಸುಧಾರಿತ ‘ಡಾ ವಿನ್ಸಿ'(daVinci) ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ,150 ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಸಾಧನೆಯು ಈ ಭಾಗದ ಕ್ಯಾನ್ಸರ್ ಆರೈಕೆ ಮತ್ತು ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ದೊಡ್ಡ ಜಿಗಿತವನ್ನು ಗುರುತಿಸಿದೆ. ಮೈಸೂರಿನಲ್ಲಿ ಮೊಟ್ಟಮೊದಲ ಬಾರಿಗೆ ಈ ಸುಧಾರಿತ ರೋಬೋಟಿಕ್ ತಂತ್ರಜ್ಞಾನವನ್ನು ಪರಿಚಯಿಸಿದ ಹೆಗ್ಗಳಿಕೆ ಈ ಆಸ್ಪತ್ರೆಯದ್ದಾಗಿದೆ.
ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯು ಅತ್ಯಂತ ನಿಖರತೆ ಮತ್ತು ಕನಿಷ್ಠ ಹಾನಿಕಾರಕ ಚಿಕಿತ್ಸೆಯನ್ನು ನೀಡುತ್ತದೆ. ಇದರಿಂದಾಗಿ ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆ ಇರುತ್ತದೆ, ಸೋಂಕಿನ ಅಪಾಯ ಕಡಿಮೆ, ಕಲೆಗಳು ಅತಿ ಸಣ್ಣದಾಗಿರುತ್ತವೆ ಮತ್ತು ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ. ಈ ಸೌಲಭ್ಯಗಳು ವಿಶೇಷವಾಗಿ ಕ್ಯಾನ್ಸರ್ ರೋಗಿಗಳಿಗೆ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿರುವವರಿಗೆ (comorbidities) ಹೆಚ್ಚು ಸಹಕಾರಿಯಾಗಿದೆ. ಮೈಸೂರಿನಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಏಕೈಕ ವಿಶೇಷ ಕ್ಯಾನ್ಸರ್ ಆಸ್ಪತ್ರೆ BHIO ಆಗಿದ್ದು, ಸ್ಥಳೀಯ ರೋಗಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡಿದೆ.
BHIO ನ ಹಿರಿಯ ಸರ್ಜಿಕಲ್ ಆಂಕೊಲಾಜಿಸ್ಟ್ ಮತ್ತು ರೋಬೋಟಿಕ್ ಸರ್ಜನ್ ಆದ ಡಾ. ವಿಜಯಕುಮಾರ್ ಎಂ. ಅವರು ಮಾತನಾಡಿ, ನಗರದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಧಾರಿತ ಶಸ್ತ್ರಚಿಕಿತ್ಸಾ ಪರಿಹಾರಗಳ ಅಗತ್ಯತೆ ಹೆಚ್ಚಿದೆ ಎಂದು ತಿಳಿಸಿದರು.”ರೋಬೋಟಿಕ್ ಪ್ರಕ್ರಿಯೆಗಳಲ್ಲಿ ಅತಿ ಸಣ್ಣದಾದ ಗಾಯಗಳಾಗುವುದರಿಂದ, ಸಾಮಾನ್ಯ ಮುಕ್ತ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ ಚೇತರಿಕೆ ವೇಗವಾಗಿರುತ್ತದೆ. ಮುಕ್ತ ಶಸ್ತ್ರಚಿಕಿತ್ಸೆಯಲ್ಲಿ ಆಹಾರ ಸೇವಿಸಲು 4 ರಿಂದ 5 ದಿನಗಳು ಬೇಕಾದರೆ, ರೋಬೋಟಿಕ್ ಶಸ್ತ್ರಚಿಕಿತ್ಸೆಯ ನಂತರ ಕೇವಲ 24 ಗಂಟೆಗಳಲ್ಲಿ ರೋಗಿಗಳು ಆಹಾರ ಸೇವಿಸಬಹುದು. ವೇಗದ ಚೇತರಿಕೆಯಿಂದಾಗಿ ಕೀಮೋಥೆರಪಿ ಮತ್ತು ರೇಡಿಯೊಥೆರಪಿಯನ್ನು ಬೇಗನೆ ಪ್ರಾರಂಭಿಸಲು ಸಾಧ್ಯವಾಗುತ್ತದೆ, ಇದು ಒಟ್ಟಾರೆ ಚಿಕಿತ್ಸೆಯ ಫಲಿತಾಂಶವನ್ನು ಉತ್ತಮಗೊಳಿಸುತ್ತದೆ,” ಎಂದು ಅವರು ವಿವರಿಸಿದರು.
“ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಮತ್ತು ರೊಬೊಟಿಕ್ ಸರ್ಜನ್ ಆದ ಡಾ. ರಕ್ಷಿತ್ ಶೃಂಗೇರಿ ಆರ್ ಮಾತನಾಡಿ, ಮೈಸೂರು ರೊಬೊಟಿಕ್ ಸರ್ಜರಿಯ ಮೂಲಕ ಕ್ರಾಂತಿಕಾರಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು. ಮೈಸೂರನ್ನು ಜಾಗತಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನಾಗಿ ಮಾಡುವುದು ಅಧ್ಯಕ್ಷರಾದ ಡಾ. ಅಜಯ್‌ಕುಮಾರ್ ಅವರ ದೂರದೃಷ್ಟಿಯಾಗಿದೆ. BHIO ರೊಬೊಟಿಕ್ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಿದ ಮೊದಲ ಸಂಸ್ಥೆಯಾಗಿದೆ. ರೊಬೊಟಿಕ್ ಸರ್ಜರಿಯು ವಿಶ್ವದರ್ಜೆಯ ನಿಖರತೆ, ಕಲೆಯಿಲ್ಲದ ವಿಧಾನಗಳು, ಬೊಜ್ಜು ಹೊಂದಿರುವ ರೋಗಿಗಳಿಗೆ ಸುಲಭ ಕಾರ್ಯಾಚರಣೆ ಮತ್ತು ಶೀಘ್ರ ಚೇತರಿಕೆಗೆ ಸಹಕಾರಿಯಾಗಿದೆ. ರೊಬೊಟಿಕ್ ಸರ್ಜರಿಯೇ ಮುಂದಿನ ಭವಿಷ್ಯ.”
BHIO ನ ಮುಖ್ಯ ಕಾರ್ಯಾಚರಣೆ ಅಧಿಕಾರಿ (COO) ಗೌತಮ್ ಧಮರ್ಲ ಅವರು ಮಾತನಾಡಿ, ಈ ಮೈಲಿಗಲ್ಲು ರೋಬೋಟಿಕ್ ಆಂಕೊಲಾಜಿಯಲ್ಲಿ ಶ್ರೇಷ್ಠತಾ ಕೇಂದ್ರವಾಗುವ ಆಸ್ಪತ್ರೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದರು. ಸುಧಾರಿತ ತಂತ್ರಜ್ಞಾನ ಮತ್ತು ನುರಿತ ವೈದ್ಯರ ಮೇಲಿನ ಹೂಡಿಕೆಯು ಸಮುದಾಯಕ್ಕೆ ನಿಖರವಾದ ಹಾಗೂ ರೋಗಿ ಕೇಂದ್ರಿತ ಕ್ಯಾನ್ಸರ್ ಆರೈಕೆಯನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.
