ವಿಶೇಷ ಚೇತನರು ಬೇರೆಯವರನ್ನು ಅವಲಂಬಿಸದೆ ಸ್ವಾವಲಂಬಿಗಳಾಗಿ – ನಿತೇಶ್ ಪಾಟೀಲ್

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ವಿಶೇಷ ಚೇತನರು ಬೇರೆಯವರನ್ನು ಅವಲಂಬಿಸದೆ ಸ್ವಾವಲಂಬಿಗಳಾಗಿ – ನಿತೇಶ್ ಪಾಟೀಲ್

ಮೈಸೂರು, ಮಾ.06(ಕರ್ನಾಟಕ ವಾರ್ತೆ):-
ವಿಶೇಷ ಚೇತನರು ತಮ್ಮ ಜೀವನ ನಡೆಸಲು ಬೇರೆಯವರನ್ನು ಅವಲಂಬಿಸದೆ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿ ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಮೈಸೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಅವರು ಹೇಳಿದರು.

ಇಂದು ಮೈಸೂರು ಮಹಾನಗರ ಪಾಲಿಕೆ, ಮೈಸೂರು ಹಾಗೂ ಸೆಸ್ಕೋ ಫೌಂಡೇಶನ್, ಬೆಂಗಳೂರು ಇವರುಗಳ ಸಹಯೋಗದೊಂದಿಗೆ ವಿಕಾಸ ಪಥದಲ್ಲಿ ವಿಶೇಷಚೇತನರ ಹಾಗೂ ಮಹಿಳೆಯರ ಹೆಜ್ಜೆ ಸೌರ ಬೆಂಬಲಿತ ಕಾರ್ಯಾಗಾರ ಹಾಗೂ ಜೀವನೋಪಾಯ ಪರಿಹಾರಗಳ ಪ್ರದರ್ಶನವನ್ನು ಶ್ರೀ ರಂಗಚಾರ್ಲು ಪುರಭವನ, ಮೈಸೂರು (ಟೌನ್ ಹಾಲ್) ನಲ್ಲಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಸೌರ ಚಾಲಿತ ಯಂತ್ರಗಳಿಂದ ವಿವಿಧ ವಸ್ತುಗಳ ತಯಾರಿಕೆ ಮಾಡಬಹುದು ವಿಶೇಷ ಚೇತನರು ಕೌಶಲ್ಯಾಧರಿತ ತರಬೇತಿ ಪಡೆದು ಜೀವನೋಪಾಯ ಹಾಗೂ ಸ್ವಯಂ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು ಎಂದರು ಹೇಳಿದರು.

ವಿಶೇಷ ಚೇತನರಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ನೀಡಲಾಗಿದೆ. ಮಹಾನಗರ ಪಾಲಿಕೆ ಹಾಗೂ ವಿಕಲಚೇತನ ಕಲ್ಯಾಣ ಇಲಾಖೆಯ ವತಿಯಿಂದ ವಿಶೇಷ ಚೇತನರು ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಿ ಎಂದರು.

ವಿಶೇಷ ಚೇತನರಿಗೆ ಆಹಾರ ಸಂಶೋಧನೆ ಘಟಕವನ್ನು ಪ್ರಾರಂಭಿಸಲು ಸರ್ಕಾರದಿಂದ 50% ಸಬ್ಸಿಡಿಯನ್ನು ಪಡೆಯಬಹುದು. ಇದರಿಂದ ಅವರಯ ಉದ್ಯಮಿಗಳಾಗಿ ಬೇರೆಯವರಿಗೆ ಉದ್ಯೋಗ ನೀಡುವುದರೊಂದಿಗೆ ಆರ್ಥಿಕವಾಗಿ ಜೂವನಮಟ್ಟ ಸುಧಾರಿಸಿಕೊಳ್ಳಬಹುದು ಎಂದರು.

ಮಹಾನರ ಪಾಲಿಕೆಯಲ್ಲಿ ಶೇ 5 ರಷ್ಟು ಅನುದಾನವನ್ನು ವಿಶೇಷ ಚೇತನರಿಗೆ ಮೀಸಲಿಡಲಾಗಿದೆ . ವಿಶೇಷ ಚೇತನರು ಸರ್ಕಾರದ ಯೋಜನೆಗಳನ್ನು ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಿಶೇಷ ಚೇತನರು ಸೌರ ಚಾಲಿತ ಯಂತ್ರಗಳನ್ನು ಬಳಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಸ್ವತ: ಉದ್ಯೋಗವನ್ನು ಸೃಷ್ಟಿಸಿಕೊಂಡು ಸಮಾಜದಲ್ಲಿ ಆರ್ಥಿಕವಾಗಿ ಸಬಲೀಕರಣವಾಗಿ ಸಮಾಜದಲ್ಲಿ ಮಾದರಿಯಾಗಿ ಬದುಕುತಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರು ಮಾತನಾಡಿ ವಿಶೇಷ ಚೇತನರಿಗೆ ಸರ್ಕಾರದ ಯೋಜನೆಗಳು ಮತ್ತು ಯಂತ್ರೋಪಕರಣಗಳನ್ನು ಹೇಗೆ ಬಳಸಬೇಕು ಎಂದು ಮಹಾನಗರ ಪಾಲಿಕೆ ಹಾಗೂ ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ನಡೆಸುತ್ತಿರುವ ಈ ಕಾರ್ಯಗಾರದಲ್ಲಿ ವಿಶೇಷ ಚೇತನರು ಅನುಕೂಲಗಳನ್ನು ಪಡೆದುಕೊಳ್ಳಿ ಎಂದರು.

ಈ ವರ್ಷದ ಬಜೆಟ್ ನಲ್ಲಿ ಮಹಾನಗರ ಪಾಲಿಕೆಯಿಂದ ವಿಶೇಷ ಚೇತನರಿಗೆ 5% ಅನುದಾನವನ್ನು ವಿಶೇಷ ಚೇತನರಿಗೆ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳಿಗೆ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತಸ್ವೀ‌ರ್ ಆಶಿಫ್,ಮೈಸೂರು ಮಹಾನಗರ ಪಾಲಿಕೆ ಉಪಾಯುಕ್ತೆ ವೀಣಾ,ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿಗಳು ರಾಘವೇಂದ್ರ, ಬೆಂಗಳೂರು ಸೆಲ್ಕೋ ಇಂಡಿಯಾ ಫೌಂಡೇಶನ್ ರುಚ ಲಿಮಯೆ, ಏರಿಯಾ ಮ್ಯಾನೇಜ‌ರ್, ಸುಕುಮಾರ್ ಕೆ, ಸಂಯೋಜಕರು ಫಣೀಂದ್ರ ಸಿಂಗ್, ಸಿ.ಸಿ ಎಸ್.ಟಿ ಯೋಜನೆ ನಿರ್ದೇಶಕ ಕೆ.ಆರ್.ಶಂಕರ, ಡಿ.ಡಿ.ಎ.ಎಸ್.ಸಿ ರಾಜ್ಯ ಸಂಯೋಜಕ ನರಸಿಂಹಮೂರ್ತಿ,
ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment