ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳುವುದು ವಿದ್ಯಭ್ಯಾಸದ ಮುಖ್ಯ ಉದ್ದೇಶ: ಡಾ. ಆವರೆಕಾಡು ವಿಜಯಕುಮಾರ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳುವುದು ವಿದ್ಯಭ್ಯಾಸದ ಮುಖ್ಯ ಉದ್ದೇಶ: ಡಾ. ಆವರೆಕಾಡು ವಿಜಯಕುಮಾರ

ಮೈಸೂರು,ಜ.30 (ಕರ್ನಾಟಕ ವಾರ್ತೆ):-
ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳುವುದು ವಿದ್ಯಭ್ಯಾಸದ ಮುಖ್ಯ ಉದ್ದೇಶವಾಗಬೇಕು ಎಂದು ಮಹಾಯೋಗಿ ವೇಮನರು ವಚನದ ಮೂಲಕ ತಿಳಿಸಿದ್ದಾರೆ ಎಂದು ಸಹಾಯಕ ಭಾಷಾಂತರ ಮತ್ತು ಸಂಯೋಜನಾಧಿಕಾರಿ ಡಾ. ಆವರೆಕಾಡು ವಿಜಯಕುಮಾರ ಅವರು ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ಕಲಾಮಂದಿರ ಕಿರುರಂಗಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದ ‘ಮಹಾಯೋಗಿ ವೇಮನ ಜಯಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಾಯೋಗಿ ವೇಮನರು ಸಮಾಜದ ಅಂಕು ಡೊಂಕುಗಳನ್ನು ವಚನಗಳ ಮೂಲಕ ತಿದ್ದಿ ಶ್ರೀ ಸಾಮಾನ್ಯರಿಗೆ ಬೇರೆಯವರಿಗೆ ದಾರಿ ದೀಪವಾಗಿದ್ದರು, ವೇಮನ ವಚನಗಳು ಜನಸಾಮಾನ್ಯರಿಗೆ ಹಾಗೂ ಮುಂದಿನ ಭವಿಷ್ಯದ ಮಕ್ಕಳಿಗೆ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿದ್ದ ಹರಿಹರ ಎರೆಹೊಸಹಳ್ಳಿಯ ಶ್ರೀ ವೇಮಾನಂದ ಸ್ವಾಮಿಗಳು ಅವರು ಮಾತನಾಡಿ ಉತ್ತಮ ವ್ಯಕ್ತಿತ್ವದಿಂದ ಗಳಿಸುವ ಹೆಸರು ಚಿರಸ್ಮರಣೀಯ. ವ್ಯಕ್ತಿತ್ವ ರೂಪಿಸಿಕೊಳ್ಳಲು ಯಾವುದೇ ಪದವಿ ಅಥವಾ ಸ್ಥಾನಮಾನ ಬೇಕಿಲ್ಲ. ನಾವು ರೂಡಿಸಿಕೊಳ್ಳುವ ಮೌಲ್ಯ ಹಾಗೂ ಬದುಕುವ ಶೈಲಿ ಮುಖ್ಯ. ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಮಹಾನ್ ಪುರುಷರ ಸಾಲಿನಲ್ಲಿ ಮಹಾಯೋಗಿ ವೇಮನ ಕೂಡ ಒಬ್ಬರು. ಮಹಾಯೋಗಿ ವೇಮನರ ಆದರ್ಶಗಳನ್ನು ರೂಪಿಸಿಕೊಳ್ಳಬೇಕು, ಹಾಗೂ ಅವರ ಮಹತ್ವದ ಬೆಳಕಿನಲ್ಲಿ ಬದುಕು ಕಟ್ಟಿಕೊಳ ಬೇಕು ಎಂದು ಹೇಳಿದರು.

ಎಲ್ಲಾ ಮಹತ್ಮಾರ ಬೋಧನೆಗಳು ತತ್ವ ಹಾಗೂ ಸಿದ್ದಂತಾದ ಚೌಕಟ್ಟಿನಲ್ಲಿ ಹೇಳಲಾಗಿದೆ. ವೇಮನವರ ವಚನಗಳು ನಮ್ಮಲ್ಲಿರುವ ಮುಡ್ಯತೆಗಳನ್ನು ಹೋಗಲಾಡಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಜನರು ಜೀವನ ನಡೆಸಬೇಕು ಎಂಬುದಾಗಿದೆ. ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಅವರು ಮಾತನಾಡಿ ಮನುಷ್ಯ ಸಮಾಜದ ಒಳಿತಿಗಾಗಿ ಜೀವನ ನಡೆಸಿದರೆ ಜನರಿಗೆ ಶಕ್ತಿಯಾಗಿ ಜನರ ಮನಸ್ಸಿನಲ್ಲಿ ದೈವತ್ವ ಭಾವನೆಯನ್ನು ಬೆಳಸಿಕೊಳ್ಳುತ್ತಾರೆ.ಮಹಾಯೋಗಿ ವೇಮನ ಅವರು ಕೂಡ ಸಮಾಜದಲ್ಲಿ ದೈವತ್ವ ಭಾವನೆಯನ್ನು ಬೆಳಸಿಕೊಂಡಿದ್ದಾರೆ ಎಂದು ಹೇಳಿದರು.

ಶಾಪ ಹಾಗೂ ವರವನ್ನು ದೇವರು ಕೊಡುವುದಿಲ್ಲ.ನಾವು ಮಾಡುವ ಕಾಯಕ‌ ನೀಡುತ್ತದೆ. ಸಮಾಜಕ್ಕೆ ಬೆಳಕಿನ ರೂಪದಲ್ಲಿ ಯಾರು ಮಾದರಿಯಾಗಿ ಬದುಕುತ್ತಾರೆ ಅಂಥವರು ಸಮಾಜಕ್ಕೆ ವರದಾನವಾಗುತ್ತಾರೆ.
ಹೇಮಾರೆಡ್ಡಿ ಮಲ್ಲಮ್ಮ ಅವರು ವೇಮನನಿಗೆ ಅತ್ತಿಗೆಯಾಗಿ ಅವರ ಜೀವನಕ್ಕೆ ದಾರಿ ದೀಪಾವಾಗುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್ ಗಣ್ಯರಾದ ಪ್ರಭಾಕರ್ ರೆಡ್ಡಿ, ಚೆನ್ನಾರೆಡ್ಡಿ, ಶಾಂತರಾಜು, ಸುರೇಶ್, ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment