ತಂಬಾಕು ಪರ್ಯಾಯ ಬೆಳೆ ಹಾಗೂ ಜೀವನೋಪಾಯ ಉತ್ತೇಜನಕ್ಕೆ ಒತ್ತಡ ಹೇರಿದ ಸಂಸದರು

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ತಂಬಾಕು ಪರ್ಯಾಯ ಬೆಳೆ ಹಾಗೂ ಜೀವನೋಪಾಯ ಉತ್ತೇಜನಕ್ಕೆ ಒತ್ತಡ ಹೇರಿದ ಸಂಸದರು

ಲೋಕಸಭೆಯಲ್ಲಿ ಕನ್ನಡದಲ್ಲಿಯೇ ವಿಷಯ ಪ್ರಸ್ತಾಪಿಸಿ ಗಮನ ಸೆಳೆದ ಯದುವೀರ್‌ ಒಡೆಯರ್‌

ಮೈಸೂರು, ಮಾ. 17: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತಂಬಾಕು ಬೆಳೆಗೆ ಪರ್ಯಾಯ ರೂಪಿಸುವ ಹಾಗೂ ಬೆಳೆಗಾರರ ಜೀವನೋಪಾಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ತಂಬಾಕು ಬೆಳೆ ವೈವಿಧ್ಯೀಕರಣ ಯೋಜನೆ ಕುರಿತು ಪ್ರಸ್ತಾಪಿಸಿದ ಸಂಸದರು, ಪರಿವರ್ತನೆಯ ಯೋಜನೆಗಳನ್ನು ಹೇಗೆ ರೂಪಿಸಲಾಗಿದೆ ಎಂದು ಸಚಿವರು ಪ್ರಶ್ನಿಸಿದರು.

ಕಳೆದ ಐದು ವರ್ಷಗಳಲ್ಲಿ ನಮ್ಮ ಕ್ಷೇತ್ರದ ಮೈಸೂರು ಜಿಲ್ಲೆಯಲ್ಲಿ ತಂಬಾಕು ಕೃಷಿಯಿಂದ ಪರ್ಯಾಯ ಬೆಳೆಗಳಿಗೆ ಪರಿವರ್ತನೆಯಾಗುತ್ತಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಬೆಳೆಗಾರರಿಗೆ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಗಮನಸೆಳೆದರು.

ಮೈಸೂರು ಸೇರಿದಂತೆ ತಂಬಾಕು ಬೆಳೆಯುವ ಜಿಲ್ಲೆಗಳಿಗೆ, ವಿಶೇಷವಾಗಿ ಮಾರುಕಟ್ಟೆ ಸಂಪರ್ಕ, ಸಂಸ್ಕರಣಾ ಮೂಲಸೌಕರ್ಯ, ರೈತರಿಗೆ ಸುಸ್ಥಿರ ಆದಾಯ ಪರಿವರ್ತನೆಗೆ ಒತ್ತು ನೀಡಲು ಸರ್ಕಾರವು ಪ್ರದೇಶ-ನಿರ್ದಿಷ್ಟ ಬೆಂಬಲ ಕ್ರಮಗಳನ್ನು ಪ್ರಸ್ತಾಪಿಸುತ್ತದೆಯೇ, ಹಾಗಿದ್ದಲ್ಲಿ, ಅದರ ವಿವರಗಳನ್ನು ಬೆಳೆಗಾರರಿಗೆ ತಿಳಿಸಿಕೊಡಬೇಕು ಎಂದು ಸಂಸದ ಯದುವೀರ್‌ ಒಡೆಯರ್‌ ಮನವಿ ಮಾಡಿದರು.

ಇದಕ್ಕೆ ಉತ್ತರ ನೀಡಿದ ಕೇಂದ್ರ ಸಚಿವರು, ಕರ್ನಾಟಕ ಸೇರಿದಂತೆ ಪ್ರಮುಖ ತಂಬಾಕು ಬೆಳೆಯುವ ರಾಜ್ಯಗಳಲ್ಲಿ ರೈತರು ತಂಬಾಕು ಕೃಷಿಯಿಂದ ಪರ್ಯಾಯ ಬೆಳೆಗಳು ಮತ್ತು ಬೆಳೆ ಪದ್ಧತಿಗಳಿಗೆ ಬದಲಾಗುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.

ತಂಬಾಕು ಬೆಳೆಯುವ ರಾಜ್ಯಗಳು, ಯಾವುದೇ ಕೇಂದ್ರ ಪ್ರಾಯೋಜಿತ ಯೋಜನೆ / ರಾಜ್ಯ ಯೋಜನೆಯಡಿಯಲ್ಲಿ ಅನುಮೋದಿಸಲಾದ ವೆಚ್ಚದ ಮಾನದಂಡಗಳಿಗೆ ಅನುಗುಣವಾಗಿ, ತಂಬಾಕನ್ನು ಪರ್ಯಾಯ ಬೆಳೆಗಳು ಅಥವಾ ಬೆಳೆ ಪದ್ಧತಿಗಳೊಂದಿಗೆ ಬದಲಾಯಿಸುವ ಗುರಿಯನ್ನು ಹೊಂದಿರುವ ಸೂಕ್ತ ಚಟುವಟಿಕೆಗಳು ಕೈಗೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಸಂಸದರು ತಿಳಿಸಿದರು.

ಕರ್ನಾಟಕಕ್ಕೆ ಕಳೆದ ವರ್ಷದಲ್ಲಿ ಅಂದರೆ 2021-22ರಲ್ಲಿ 240 ಲಕ್ಷ ರೂ. 2022-23ರಲ್ಲಿ 240, 2023-24ರಲ್ಲಿ 244 , 2024-25ರಲ್ಲಿ 244 , 2025-26ರಲ್ಲಿ 120 ಲಕ್ಷ ರೂ.ಗಳನ್ನು ಬೆಳೆ ಪರಿವರ್ತನೆಗಾಗಿ ಅನುದಾನ ನೀಡಲಾಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಪ್ರದೇಶಕ್ಕೆ ಅನುಗುಣವಾಗಿ ಬಹು ಬೆಳೆ ಅಥವಾ ಅನುಕ್ರಮ ಬೆಳೆ ಆಧಾರಿತ ಪ್ರದರ್ಶನಗಳಾದ ಜೋಳ-ಬೀನ್ಸ್/ ಗೋವಿನಜೋಳ / ರಾಗಿ ಅಥವಾ ರಾಗಿ-ಗೋವಿನಜೋಳ ಬೆಳೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

Share This Article
Leave a Comment