ವಿಭಾಗೀಯ ಮಟ್ಟದ ಪಾಲುದಾರರ ಸಮಾಲೋಚನ ಕಾರ್ಯಗಾರ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ವಿಭಾಗೀಯ ಮಟ್ಟದ ಪಾಲುದಾರರ ಸಮಾಲೋಚನ ಕಾರ್ಯಗಾರ

ಮೈಸೂರು,ಮಾ.18(ಕರ್ನಾಟಕ ವಾರ್ತೆ):- ಇಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಕರ್ನಾಟಕ ಎಂಎಸ್ಎಂಇ ನೀತಿ 2025ರ ಅಡಿಯಲ್ಲಿ ಮೈಸೂರಿನ ವಿಭಾಗ ಮಟ್ಟದ ಪಾಲುದಾರರ ಸಮಾಲೋಚನ ಕಾರ್ಯಗಾರವನ್ನು ಎಸ್ ಡಿ ಎಮ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಗಾರದಲ್ಲಿ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ 8 ಜಿಲ್ಲೆಗಳ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಹದ್ಯೋಗಿಗಳು ಪಾಲ್ಗೊಂಡಿದ್ದರು. ನಂತರ ಕರ್ನಾಟಕ ಕೈಗಾರಿಕಾ ನೀತಿ 2025ರ ಅಡಿಯಲ್ಲಿ ಎಂ.ಎಸ್.ಎಂ.ಇ ಪ್ರೋತ್ಸಾಹ ಮತ್ತು ಸೌಲಭ್ಯಗಳು, ಹಣಕಾಸು ಸೌಲಭ್ಯ, ತಂತ್ರಜ್ಞಾನ ಬಳಕೆ ಹಾಗೂ ಡಿಜಿಟಲೀಕರಣಕ್ಕೆ ಆಧ್ಯತೆ,
ಮಾರುಕಟ್ಟೆ, ಮೂಲಸೌಕರ್ಯ ಹಾಗೂ ನಿಯಂತ್ರಣಾತ್ಮಕ ನಿಯಮಾವಳಿಗೆ ನೆರವು
ಕೌಶಲ್ಯಾಭಿವೃದ್ಧಿ, ನವೀನತೆ ಮತ್ತು ಹಸಿರು ತಂತ್ರಜ್ಞಾನಗಳ ಪ್ರವೇಶಕ್ಕೆ ಆಧ್ಯತೆಯ ಕುರಿತು ಚರ್ಚಿಸಲಾಯಿತು.

ಕಾರ್ಯಾಗಾರದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್ ಬಿ.ಸಿ, ಮೈಸೂರು ಚೇಂಬರ್ ಆಫ್ ಕಾಮರ್ಸ್ ನ ಪ್ರೆಸಿಡೆಂಟ್ ಲಿಂಗರಾಜು, ಚಾಮರಾಜನಗರ ಚೇಂಬರ್ ಆಫ್ ಕಾಮರ್ಸ್ ನ ಪ್ರೆಸಿಡೆಂಟ್ ಪ್ರಭಾಕರ, ಮಂಡ್ಯ ಚೇಂಬರ್ ಆಫ್ ಕಾಮರ್ಸ್ ನ ಪ್ರೆಸಿಡೆಂಟ್ ಪ್ರಭಾಕರ್, ಎಸ್ ಸಿ- ಎಸ್ ಟಿ ಅಸೋಸಿಯೇಟ್ ನ ಪ್ರೆಸಿಡೆಂಟ್ ವಿಜಯಶಂಕರ್, ಎಸ್.ಡಿ.ಎಂ ಕಾಲೇಜ್ ಫಾರ್
ಮ್ಯಾನೇಜ್ಮೆಂಟ್ ನ ಡೀನ್ ವ ಮೌಸಮಿ ಸೇಮ್ ಗುಪ್ತ, ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಟ್ಸ್ ನ ಸಂತೋಷ್ ಕುಮಾರ್ ಜೈನ್ ಅವರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

Share This Article
Leave a Comment