ಕ್ಷಯ ರೋಗ ನಿರ್ಮೊಲನೆಯ ಬಗ್ಗೆ ಅರಿವು ಮೂಡಿಸಲು ಜಾಥಾ.

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಕ್ಷಯ ರೋಗ ನಿರ್ಮೊಲನೆಯ ಬಗ್ಗೆ ಅರಿವು ಮೂಡಿಸಲು ಜಾಥಾ.
ಮೈಸೂರು, ಮಾ.24(ಕರ್ನಾಟಕ ವಾರ್ತೆ):-
ವಿಶ್ವ ಕ್ಷಯ ರೋಗ ದಿನಾಚರಣೆಯ ಪ್ರಯುಕ್ತ ಮೈಸೂರು ಮೆಡಿಕಲ್ ಕಾಲೇಜು ಮೆಡಿಸಿನ್ ಡಿಪಾರ್ಟ್ಮೆಂಟ್ ರವರ ಮತ್ತು IMA ರವರ ಸಹಬಾಗಿತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಜಾಥಾ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಸಹ ನಿರ್ದೇಶಕ ಡಾ ಪ್ರಕಾಶ್ ಪುರಾಣಿಕ್ ರವರು ಚಾಲನೆ ನೀಡಿದರು.

ಸದರಿ ಜಾಥಾವು ಎಸ್ ಪಿ ಸರ್ಕಲ್ ನಿಂದ ಡಿ ಹೆಚ್ ಓ ಕಚೇರಿಯ ವ್ಯೆದ್ಯರ ಭವನದ ವರೆಗೆ ಸಂಚರಿಸಿತು. ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ವ್ಯೆದ್ಯರ ಭವನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಅಪರ ನಿರ್ದೇಶಕ ಡಾ ಮಲ್ಲಿಕಾ ಅವರು ನೆರವೇರಿಸಿದರು.
WHO consultant ಡಾ ರಾಜೀವ್ ರವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಕುಮಾರ್ ಸ್ವಾಮಿ,, ಜೆ ಎಸ್ ಎಸ್ ಮೆಡಿಕಲ್ ಕಾಲೇಜ್ ನ ಡಾ.ನಯನ ಹಾಗೂ ಜಿಲ್ಲೆಯಲ್ಲಿನ FAME ಮೆಡಿಕಲ್ ಕಾಲೇಜ್ ನ ಮೆಡಿಸಿನ್ HOD ಡಾ ಸುಧರ್ಶನ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆ ಹೆಚ್ ಪಿ ಟಿ ಯವರ ಸಹಬಾಗಿತ್ವದಲ್ಲಿ ಕ್ಷಯಮುಕ್ತ ಗ್ರಾಮ ಪಂಚಾಯತ್ ಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.

SVYM ರವರ ಸಹಬಾಗಿತ್ವದಲ್ಲಿ ಕ್ಷಯ ಸೊಂಕಿತ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು ಹಾಗೂ ಈ ವರ್ಷದ ಘೋಷಣೆ “ಹೌದು, ಭಾರತದ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು ” ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು..

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ: ಮಹಮ್ಮದ್ ಸಿರಾಜ್ ಅಹಮದ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment