ಜೆಎಸ್‌ಎಸ್‌ ನಲ್ಲಿ ಆರೋಗ್ಯ ಕ್ಷೇತ್ರ ಕುರಿತು ಅಂತರಾಷ್ಟ್ರೀಯ ಕಾರ್ಯಾಗಾರ

admin
1 Min Read


ಪಬ್ಲಿಕ್‌ ಅಲರ್ಟ್‌ ನ್ಯೂಸ್.
ವರದಿ : ವಿ ಲತಾ.
ಮೈಸೂರು: ಜೆಎಸ್‌ಎಸ್ ಎಹೆಚ್‌ಇಆರ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ “ಡಿಜಿಟಲ್ ಆರೋಗ್ಯ ತಂತ್ರಗಳನ್ನು ನೀಡುವುದು: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ & ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ” ಎಂಬ ಅಂತರರಾಷ್ಟ್ರೀಯ ಕಾರ್ಯಾಗಾರವನ್ನು ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು “ಜೆಎಸ್‌ಎಸ್ ಎಹೆಚ್‌ಇಆರ್- ವೊಲ್ವರ್‌ಹ್ಯಾಂಪ್ಟನ್ ಫ್ಯೂಚರ್ ಹೆಲ್ತ್‌ಕೇರ್ ಮತ್ತು ಪಾಲಿಸಿ ಇನ್ನೋವೇಶನ್ ಕೇಂದ್ರದ ಡಾ.ವಿಕ್ರಮ್ ಪಾಟೀಲ್ ಮತ್ತು ಪ್ರೊಫೆಸರ್ ಸುರೇಶ್ ರೇಣುಕಪ್ಪ ಸಂಘಟಿಸಿದ್ದರು. ಯು.ಕೆ.ವುಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯ ಪ್ರೊ.ಸುಬಾಶಿನಿ ಸುರೇಶ್, ಹನೂರು ತಾಲೂಕು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ವುಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯ ಮತ್ತು ರಾಯಲ್ ವುಲ್ವರ್‌ಹ್ಯಾಂಪ್ಟನ್ ಎನ್‌ಎಚ್‌ಎಸ್ ಟ್ರಸ್ಟ್ ಪ್ರೊಫೆಸರ್ ಸುರೇಶ್ ರೇಣುಕಪ್ಪ, ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ ಪ್ರೊಫೆಸರ್ ಉತ್ಪಲ್ ಟಾಟು, ಜೆಎಸ್‌ಎಸ್ ಎಹೆಚ್‌ಇಆರ್ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಉಪಡೀನ್ (ಸಂಶೋಧನೆ) ಡಾ.ವಿಕ್ರಮ್ ಪಾಟೀಲ್, ಡೀನ್ (ಸಂಶೋಧನೆ) ಡಾ.ಪ್ರಶಾಂತ್ ವಿಶ್ವನಾಥ್, ಜೆಎಸ್‌ಎಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ನಾರಾಯಣಪ್ಪ, ಉಪಡೀನ್ (ಸಂಶೋಧನೆ) ಡಾ.ಎಸ್‌.ಚಂದನ್, ಬೆಂಗಳೂರು ಟೆರಿ ನಾಗರಾಜು ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಆರೋಗ್ಯ ಸೇವೆ ಒದಗಿಸುವವರು, ಸರ್ಕಾರದ ಎಬಿಡಿಎಂ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ  ಕರ್ನಾಟಕವನ್ನು ಅಳವಡಿಸಿಕೊಳ್ಳುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವುದು, ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಪರಿಶೀಲಿಸುವುದಾಗಿತ್ತು. ಈ ಅಂತರರಾಷ್ಟ್ರೀಯ ಕಾರ್ಯಾಗಾರದಲ್ಲಿ ಜ್ಞಾನ ವಿನಿಮಯ, ಸಂವಾದ ಮತ್ತು ಸಹಯೋಗಕ್ಕಾಗಿ ಒಂದು ಪ್ರಮುಖ ವೇದಿಕೆಯಾಗಿತ್ತು. ಕರ‍್ಯಕ್ರಮವನ್ನು ಜೆಎಸ್‌ಎಸ್ ಎಹೆಚ್‌ಇಆರ್‌ನ ಕುಲಪತಿ ಡಾ.ಎಚ್.ಬಸವನಗೌಡಪ್ಪ ಉದ್ಘಾಟಿಸಿದರು. ಜೆಎಸ್‌ಎಸ್ ಎಹೆಚ್‌ಇಆರ್‌ನ ಡಾ.ಪಿ.ಸುಷ್ಮಾ ಮತ್ತು ಡಾ.ಎಸ್‌.ಚಂದನ್, ಸುಭಾಷಿಣಿ ಸುರೇಶ್ ಮೊದಲಾದವರಿದ್ದರು.

Share This Article
Leave a Comment