ಕಿರಿಯ ಪವರ್‌ಮ್ಯಾನ್‌ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Pratheek
0 Min Read

ಪಬ್ಲಿಕ್ ಅಲರ್ಟ್

ಮೈಸೂರು: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ದ ಕಿರಿಯ ಪವರ್‌ ಮ್ಯಾನ್‌(ಎನ್‌ಕೆಕೆ) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಚಾವಿಸನಿನಿ ಅಂತರ್ಜಾಲ(ವೆಬ್‌ ಸೈಟ್‌)ದಲ್ಲಿ ಪ್ರಕಟಿಸಲಾಗಿದೆ.

2024ರ ಅ.14ರಂದು ಉದ್ಯೋಗ ಪ್ರಕಟಣೆಗೆ ಅನುಗುಣವಾಗಿ ಎಸ್‌.ಎಸ್‌.ಎಲ್‌.ಸಿ(10ನೇ ತರಗತಿ)ಯಲ್ಲಿ ಗಳಿಸಿರುವ ಅಂಕಗಳ ಜೇಷ್ಠತೆಯ ಆಧಾರದ ಮೇರೆಗೆ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿ, ಕಿರಿಯ ಪವರ್‌ ಮ್ಯಾನ್‌(ಎನ್‌ಕೆಕೆ) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಕಟ್‌ ಆಫ್‌ ಅಂಕಗಳೊಂದಿಗೆ ಚಾವಿಸಾನಿನಿ ಅಂತರ್ಜಾಲ https://cescmysore.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ಚಾವಿಸನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ತಿಳಿಸಿದ್ದಾರೆ.

Share This Article
Leave a Comment