ಉದ್ಘಾಟಿಸಿದ ಕಾರನ್ನೇ ಕೊಂಡ ಮಂಡ್ಯ ರಮೇಶ್‌

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಇತ್ತೀಚೆಗೆ ಮೈಸೂರಿನ ಕಲ್ಯಾಣಿ ಮೋಟಾರ್ಸ್‌ ಶೋರೂಮ್‌ನಲ್ಲಿ ವಿಕ್ಟೋರಿಯಸ್‌ ಕಾರವೊಂದನ್ನು ಅನಾವರಣ ಮಾಡಿದ್ದ ನಟ ಮಂಡ್ಯ ರಮೇಶ್‌ ಇದೀಗ ಅದೇ ಕಾರನ್ನು ಇಷ್ಟಪಟ್ಟುಕೊಂಡು ಕೊಂಡಿದ್ದಾರೆ.
ಈ ಕುರಿತು ಕಲ್ಯಾಣಿ ಮೋಟಾರ್ಸ್ ಮೈಸೂರು ಶೋ ರೂಮ್ ನ ವ್ಯವಸ್ಥಾಪಕ ಕೆ.ಎನ್.ಯೋಗೇಶ್ ಮಾತನಾಡಿ, ಕಳೆದ ತಿಂಗಳಷ್ಟೇ ರಂಗಭೂಮಿ ಕಲಾವಿದ ಹಾಗೂ ಹಿರಿಯ ನಟರಾದ ಮಂಡ್ಯ ರಮೇಶ್‌ ಅವರು ವಿಕ್ಟೋರಿಯಸ್‌ ಕಾರನ್ನು ಮಾರುಕಟ್ಟೆಗೆ ಅನಾವರಣ ಮಾಡಿದ್ದರು. ಆದರೆ, ವಿಶೇಷ ಅಂದರೆ ಅದರ ಜನ ಸ್ನೇಹಿಯ ಉಪಯೋಗಗಳನ್ನು ತಿಳಿದು ಅದೇ ಕಾರನ್ನು ಅವರೇ ಬುಕ್‌ ಮಾಡಿ ಪಡೆದುಕೊಂಡಿದ್ದಾರೆ. ನಮ್ಮ ಕಲ್ಯಾಣಿ ಮೋಟಾರ್ಸ್‌ ಸದಾ ಜನಸ್ನೇಹಿ ವಾಹನಗಳನ್ನು ನೀಡುತ್ತಾ ಬಂದಿದೆ. ಮುಂದೆಯೂ ನೀಡುತ್ತದೆ. ನಮ್ಮ ಸಂಸ್ಥೆಯ ಸಾಧನೆಗೆ ಸಂಸ್ಥೆಯ ಸಿಬ್ಬಂದಿಯ ಶ್ರಮ ಹಾಗೂ ಸಂಸ್ಥೆ ಮುಖ್ಯಸ್ಥರ ಸಹಕಾರವೇ ಕಾರಣ ಎಂದು ತಿಳಿಸಿದರು.

Share This Article
Leave a Comment