ಪಬ್ಲಿಕ್ ಅಲರ್ಟ್
ಮೈಸೂರು: ನಗರದ ಕಲ್ಯಾಣಿ ಮೋಟಾರ್ಸ್ ಶೋ ರೂಮ್‌ನಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಆಲ್ ನ್ಯೂ ವಿಕ್ಟೋರಿಸ್ ವಾಹನವನ್ನು ರಂಗಕರ್ಮಿ ಮಂಡ್ಯ ರಮೇಶ್ ಅನಾವರಣಗೊಳಿಸಿದರು.
ಸಂಜೆ ನಡೆದ ಸಮಾರಂಭದಲ್ಲಿ ನೂತನ ಕಾರನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಕಾರು ನಮಗೆ ಅತ್ಯವಶ್ಯಕ ವಸ್ತುಗಳಲ್ಲಿ ಬಹುಮುಖ್ಯವಾಗಿದೆ. ಅದರಲ್ಲೂ ಮನೆ ಹಾಗೂ ಕುಟುಂಬದ ಒಬ್ಬ ಸದಸ್ಯನಂತಾಗಿದೆ. ಮಾರುತಿ ಕಂಪನಿಯ ಕಾರನ್ನು ನಾನು ಬಳಕೆ ಮಾಡುತ್ತಿದ್ದೇನೆ. ಸದರಿ ಕಂಪನಿಯ ಕಾರನ್ನು ಮಾರಾಟ ಮಾಡುತ್ತಿರುವ ಕಲ್ಯಾಣ ಶೋರೂಮ್ ಅನ್ನು ಬಹಳ ಕಾಲದಿಂದ ನೋಡುತ್ತಿದ್ದೇನೆ. ಇದರ ಸೇವೆ ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿ. ಅದರಲ್ಲೂ ವಿಕ್ಟರ್ ಹೆಸರಿನ ಕಾರನ್ನು ಅನಾವರಣ ಮಾಡುತ್ತಿದ್ದು, ಅದು ಗೆಲುವಿನ ಸಂಕೇತ ಹೀಗಾಗಿ ನೂತನ ಕಾರು ಸಹ ಗೆಲುವಿನ ಹಾದಿಯಲ್ಲಿ ಸಾಗಲಿ ಎಂದು ಆಶಿಸಿದರು.


ನಟ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಬಂದಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ ಬಳಿಕವೂ ಆತನಿಗೆ ಪ್ರಶಸ್ತಿ ಸಿಕ್ಕಿದೆ ಎಂದರೆ ಆತನ ಅಭಿಮಾನ ಎಷ್ಟು ದೊಡ್ಡದು. ಹೀಗೆ ಮಾರುತಿ ಕಂಪನಿ ಹಾಗೂ ಕಲ್ಯಾಣಿ ಕಂಪನಿಗಳು ಜನಮಾನಸದಲ್ಲಿ ನೆಲೆಸಿರುವ ಕಂಪನಿಗಳಾಗಿವೆ. ನೂತನ ಕಾರಿನ ಬೆಲೆ ಇನ್ನೂ ನಿಗಧಿಯಾಗಿಲ್ಲ. ಬಡ ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ನಿಗಧಿಯಾಗಲಿ ಎಂದು ಆಶಿಸಿದರು.
ಕಲ್ಯಾಣಿ ಮೋಟಾರ್ಸ್ ಉಪಾಧ್ಯಕ್ಷ ಎಸ್.ಎನ್.ಶೆಟ್ಟಿ ಮಾತನಾಡಿ, ವಿಕ್ಟೋರಿಸ್ ಕಾರು ರಾಜ್ಯದಲ್ಲಿ ಎಲ್ಲಿಯೂ ಹೆಚ್ಚು ಅನಾವರಣ ಆಗಿಲ್ಲ. ಕಲ್ಯಾಣಿ ಮೋಟಾರ್ಸ್ ಮಾತ್ರ ಇದನ್ನು ಮಾರುಕಟ್ಟೆಗೆ ತಂದಿದೆ. ಕಲ್ಯಾಣಿ ಮೋಟಾರ್ಸ್‌ನ ಮಾಲೀಕರಾದ ಮೋಹನ್ ರಾಜ್ ಅವರು ಡೆವಲಪರ್ಸ್ ಕಂಪನಿಯಾಗಿದೆ. ಮೈಸೂರಿನಲ್ಲಿ ಶಾಖೆ ತೆರೆದು ೨ವರ್ಷವಷ್ಟೇ ಆಗಿದೆ. ೭ಸಾವಿರ ಕಾರುಗಳನ್ನು ಸೇಲ್ ಮಾಡಿದ್ದೇವೆ. ಮಂಡ್ಯ, ಪಾಂಡವಪುರ, ಬೆಳ್ಳೂರು ಕ್ರಾಸ್, ಮೈಸೂರಿನ ಎಲ್ಲಾ ತಾಲ್ಲೂಕುಗಳಲ್ಲಿಯೂ ನಮ್ಮ ಶೋರೂಮ್ ಶಾಖೆ ತೆರೆಯುತ್ತಿದ್ದೇವೆ. ಎರಡು ವರ್ಷದಲ್ಲಿ ಆಲ್ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದವರಾಗಿದ್ದೇವೆ ಎಂದರು.
ಕಾರಿನ ವಿಶೇಷತೆ: ಪೆಟ್ರೋಲ್ ಅಂಡ್ ಸಿಎನ್‌ಜಿ ಸೌಲಭ್ಯವಿದ್ದು, ಸಿವಿಟಿ, ಆಟೋಮೆಟಿಕ್‌ನಲ್ಲಿ ಅಡಾಸ್ ಫ್ಯೂಚರ್ ಇದೆ. ಐದು ಆಸನಗಳನ್ನು ಒಳಗೊಂಡಿದ್ದು, ಮದ್ಯಮ ವರ್ಗದ ಮಂದಿಯೂ ಹೈಟೆಕ್ ಅನುಭವವುಳ್ಳ ಕಾರಿನ ಸೌಲಭ್ಯವನ್ನು ಇದರ ಮೂಲಕ ಪಡೆಯಬಹುದಾಗಿದೆ. ಎಸ್‌ಯು ಸೌಲಭ್ಯ ಹೊಂದಿದ್ದು ಥಿಯೇಟರ್ ಆನ್ ವೀಲ್ಸ್, ಡುಯಲ್ ಪೇನ್ ಪ್ಯಾನೊರಾಮಿಕ್ ಸನ್‌ರೂಫ್, ೬೪ ಬಣ್ಣಗಳ ಆಂಬಿಯಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ ೮ವೇ ಎಲೆಕ್ಟ್ರಿಕ್ ಅಡ್ಜಸ್ಟೆಬಲ್ ಡ್ರೈವರ್ ಸೀಟ್, ಆಲ್‌ಗ್ರಿಪ್ ಆಲ್ ವೀಲ್ ಡ್ರೈವ್ ಸೇರಿ ನಾನಾ ಸೌಲಭ್ಯಗಳನ್ನು ಒಳಗೊಂಡಿದೆ.
ಥ್ರೂವ್ಯಾಲಿ ಸಿನಿಯರ್ ಮ್ಯಾನೇಜರ್ ಸರೋವಣ, ಸರ್ವೀಸ್ ವಿಭಾಗ ಜನರ ಮ್ಯಾನೇಜರ್ ಸಂಕುಲ್, ಜನರಲ್ ಮ್ಯಾನೇಜರ್ ಅಕೌಂಟ್ ವಿಭಾಗ ಮಲ್ಲಿಕಾರ್ಜುನ, ಸೇಲ್ಸ್ ವಿಭಾಗ ಜನರಲ್ ಮ್ಯಾನೇಜರ್ ಯೋಗೇಶ್, ಕಲ್ಯಾಣಿ ಮೋಟಾರ್ಸ್ ಕಸ್ಟಮರ್ ಕೇರ್ ಜನರಲ್ ಮ್ಯಾನೇಜರ್ ಸುಧಾ ಇನ್ನಿತರರು ಭಾಗವಹಿಸಿದ್ದರು.
