ಪಬ್ಲಿಕ್ ಅಲರ್ಟ್ ನ್ಯೂಸ್:-ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಆಧುನಿಕತೆ ಅಲೆಯು ಎಲ್ಲರ ಗಮನ ಸೆಳೆಯುವಂತೆ ಮಾಡಿದೆ
ಮಾನವ ಆನೆ ಸಂಘರ್ಷ ತಡೆಗಟ್ಟುವ ಜೊತೆಗೆ ಕಳ್ಳ ಬೇಟೆ ತಡೆ,ಬೆಂಕಿ ಇಂದ ಅರಣ್ಯ ರಕ್ಷಣೆ,ಇನ್ನೂ ಹಲವು ಕಾರ್ಯಗಳಿಗೆ ಅತ್ಯಾಧುನಿಕತೆಯನ್ನು ಅಳವಡಿಸುವ ಉದ್ದೇಶದಿಂದ ಮಾನ್ಯ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ಆದೇಶದಂತೆ ಬಂಡೀಪುರ CF ಪ್ರಭಾಕರನ್ ಮತ್ತು RNR ಮುಖ್ಯಸ್ಥರಾದ ರಾಜೀವ್ ಅವರ ಮಾರ್ಗದರ್ಶನದಂತೆ ಬಂಡೀಪುರದ ಗೋಪಾಲಸ್ವಾಮಿ ವಲಯದ ಮಹದೇಶ್ವರ ಕ್ಯಾಂಪ್ ನ ಟವರ್ ಮೇಲೆ ಆಧುನಿಕ AI ಥರ್ಮಲ್ ಕ್ಯಾಮರಾ ವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು ,
10Kms ದೂರದವರೆಗೆ ವನ್ಯ ಜೀವಿಗಳ ಮತ್ತು ಆನೆಯ ಚಲನ ವಲನಗಳ ಮೇಲೆ ನಿಗಾವಹಿಸುವುದು ಇದರ ಉದ್ದೇಶವಾಗಿತ್ತು..ಇವಾಗ ಈ ಒಂದು ಕಾರ್ಯ ಯಶಸ್ವಿಯಾಗಿದ್ದು..
ಅರಣ್ಯ ಸಿಬ್ಬಂದಿಗಳು ಕ್ಷೇತ್ರ ನಿರ್ದೇಶಕರ ಕಚೇರಿ ಇಂದ ನೇರವಾಗಿ ಕಾಡಂಚಿನ ಪ್ರದೇಶಗಳಲ್ಲಿ ಆನೆಗಳು ಮತ್ತು ಹುಲಿಗಳ ಚಲನವಲನ ಗಳನು ನೋಡಬಹುದು ..ಮುಖ್ಯವಾಗಿ ಆನೆಗಳು ರೈತರ ಬೆಳೆಗಳ ಮೇಲೆ ಹಾನಿ ಮಾಡುವುದನ್ನು ತಪ್ಪಿಸುವುದು,ಹುಲಿಗಳು ಮತ್ತು ಇತರ ವನ್ಯಜೀವಿಗಳು ಜನವಸತಿ ಮತ್ತು ರೈತರ ಜಮೀನುಗಳಿಗೆ ಬರುವದನ್ನು ಕಚೇರಿ ಯಲ್ಲೇ ಕುಳಿತು ವೀಕ್ಷಿಸುವುದು..ಕಳ್ಳ ಬೇಟೆ ತಡೆಯುವುದು..ಬೆಂಕಿ ಇಂದ ಅರಣ್ಯವನ್ನು ತಪ್ಪಿಸುವುದಕ್ಕೆ ಈ ಒಂದು ವೈಜ್ಞಾನಿಕತೆ ಸಹಕಾರಿಯಾಗಲಿದ್ದು..
ಸಧ್ಯಕ್ಕೆ ಬಂಡೀಪುರ ವಲಯದಲ್ಲಿ ಯಶಸ್ವಿಯಾಗಿದ್ದು..
ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಕಾರ್ಯರೂಪಕ್ಕೆ ಬಂದು
ಉಪಯುಕ್ತ ವಾಗಲಿದೆ..
ಈ ಒಂದು ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..
