ಪಬ್ಲಿಕ್ ಅಲರ್ಟ್ ಸುದ್ದಿ
ವರದಿ : ರಾಕೇಶ್ ಎಂಪಿ
ಬೆಂಗಳೂರು: ಖ್ಯಾತ ಉದ್ಯಮಿ ಮತ್ತು ಅಫ್ನಾನ್ ಕನ್ಸ್ಟ್ರಕ್ಷನ್ ಮುಖ್ಯಸ್ಥ ಕೆಜಿಎಫ್ ಬಾಬು ಅವರು, ತಮ್ಮ ವೈಯಕ್ತಿಕ ಸಂಪಾದನೆಯಿಂದ 400 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ವಿನಿಯೋಗಿಸಿ, ಚಿಕ್ಕಪೇಟೆ ಕ್ಷೇತ್ರದ 10,000 ನಿರ್ಗತಿಕ ಕುಟುಂಬಗಳಿಗೆ ಸೂರು ಕಲ್ಪಿಸುವ ಬೃಹತ್ ಲೋಕೋಪಕಾರಿ ಯೋಜನೆಗೆ ಮುಂದಾಗಿರುವುದಾಗಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಕೇವಲ ವಸತಿ ಯೋಜನೆಯಲ್ಲ, ಬದಲಿಗೆ ತಮ್ಮ ದಿವಂಗತ ತಾಯಿಯವರ ಕನಸಿಗೆ ಮಗನೊಬ್ಬನು ಸಲ್ಲಿಸುತ್ತಿರುವ ಶ್ರೇಷ್ಠ ನಮನವಾಗಿದೆ. “ಕಷ್ಟಪಟ್ಟು ಸಂಪಾದಿಸಿದ ಸಂಪತ್ತಿಗೆ ನಿಜವಾದ ಅರ್ಥ ಸಿಗುವುದು ಅದು ಸಮಾಜದ ಬಡವರ ಸೇವೆಗೆ ಬಳಕೆಯಾದಾಗ ಮಾತ್ರ ಎಂದು ಹೇಳಿದರು.
ಈಗಾಗಲೇ ಐದು ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗಿದೆ,ಈ ಹಿಂದೆ ಹೇಳಿದಂತೆ 200ಮನೆಗಳನ್ನು ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಟ್ಟಿಕೊಡಲಾಗಿದೆ ಉಳಿದ ಏಳು ಮನೆಗಳು ಪೂರ್ಣಗೊಂಡಿಲ್ಲ.ಇದ್ದನ್ನೆ ಆರ್.ವಿ.ದೇವರಾಜ್ ಅವರ ಪುತ್ರ ಯುವರಾಜ್ ನೆಪವಾಗಿಟ್ಟುಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ.ಆರ್.ವಿ.ಯುವರಾಜ್ ಇನ್ನೂ ರಾಜಕೀಯದಲ್ಲಿ ಇಮ್ಯೂಚರ್ ಪೊಲಿಟಿಷಿಯನ್ ಆದರೆ ಇದೇ ಏಳು ನಮ್ಮ ಬೆಂಬಲಿಗರು ತಮ್ಮ ಸ್ವಂತ ಖರ್ಚಿನಿಂದ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಒಂದು ಮನೆ ನಿರ್ಮಾಣಕ್ಕೆ ನಾಲ್ಕು ಲಕ್ಷ ರೂಪಾಯಿ ಖರ್ಚು ತಗುಲಲಿದೆ.ಇತ್ತೀಚೆಗಷ್ಟೇ ಮನೆಗಳನ್ನು ನಿರ್ಮಾಣ ಮಾಡಿಲ್ಲ ಎಂದು ಅಲ್ಲಿಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. 400 ಕೋಟಿ ವೆಚ್ಚದಲ್ಲಿ ಮನೆಗಳನ್ನ ಕಟ್ಟಿ ನೀಡಲು ತಯಾರಿ ನಡೆದಿದೆ. ಇದಕ್ಕಾಗಿ ನೀರು ಪೂರೈಕೆ, ವಿದ್ಯುತ್ ಸಂಪರ್ಕಕ್ಕೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ,ಮನೆಗಳಿಗೆ ನೀರು, ವಿದ್ಯುತ್ ಪೂರೈಕೆ ಮಾಡುವುದಾಗಿ ತಿಳಿಸಿದರು.
ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಒಂದೇ ಒಂದು ಜೋಪಡಿ ಇರಬಾರದು. ಸ್ಲಂನಲ್ಲಿ ಜನರಿಗೆ ಮನೆಗಳನ್ನ ಕಟ್ಟಬೇಕು ಅಂದುಕೊಂಡಿದ್ದೇನೆ. ಈಗ ಮನೆಗಳನ್ನ ನಿರ್ಮಾಣ ಮಾಡಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ವೈಯಕ್ತಿಕ ಹಿತಾಸಕ್ತಿ ಇಲ್ಲ
ಎಲ್ಲ ಶ್ರೀಮಂತರೂ ಇಲ್ಲದವರ ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದರು.
ತಾಯಿಯ ಕನಸು: ಕೆಜಿಎಫ್ ಬಾಬುರಿಂದ 400 ಕೋಟಿ ರೂ. ಸೂರಿಗೆ ಸಿದ್ದತೆ

Leave a Comment
Leave a Comment