ಶೇಷಾದ್ರಿಪುರಂನ ಇಸ್ಕಾನ್ ದೇವಾಲಯದಲ್ಲಿ ಅದ್ದೂರಿ ಶ್ರೀ ಕೃಷ್ಣ ಜನ್ಮಾಷ್ಠಮಿ.

admin
1 Min Read


-ವರದಿ : ವಿ ಲತಾ.-
ಬೆಂಗಳೂರು ಆಗಸ್ಟ್ 18;  ಶೇಷಾದ್ರಿ ಪುರಂನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಮೂರು ದಿನಗಳ ಕಾಲ ಶ್ರೀ ಕೃಷ್ಣಾ ಜನ್ಮಾಷ್ಠಮಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.
ಮೂರನೇ ದಿನದ ಭಾನುವಾರ ಇಸ್ಕಾನ್ ಸಂಸ್ಥಾಪಕ ಪ್ರಭುಪಾದ ದಾಸ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಸಾವಿರಾರು ಭಕ್ತರು ಪ್ರಭುದಾಸ್ ಅವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ತಿಂಡಿ ತಿನಿಸು ಆಹಾರ ಪದಾರ್ಥಗಳನ್ನು ನೈವೇದ್ಯ  ಮಾಡಿದರು.
ವಿಶೇಷ ಭಜನಾ ಕಾರ್ಯಕ್ರಮಗಳು ನಡೆದವು. ಶೇಷಾದ್ರಿ ಪುರಂನ ಇಸ್ಕಾನ್ ದೇವಾಲಯದ ಮುಖ್ಯಸ್ಥರಾದ ಅಂಕುಶ್ ಕಾಶನ್ ದಾಸ್,ಉಪಾಧ್ಯಕ್ಷ ಮಧುಸೂಧನ್ ಹರಿದಾಸ್,ಕಾರ್ಯದರ್ಶಿ ರಾಕಲ್ ಕೃಷ್ಣದಾಸ್,ಖಚಾಂಚಿ ಶ್ರೀವಾಸ್ ಕೃಷ್ಣದಾಸ್ ಮತ್ತಿತರರು ಭಾಗ ವಹಿಸಿದ್ದರು.

Share This Article
Leave a Comment