ನಾಳೆ ಮಲೆಮಹದೇಶ್ವರಸ್ವಾಮಿ ಮಹೋತ್ಸವ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಗರಡಿ ಕೇರಿ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ೪೮ ನೇ ವರ್ಷದ ಕಾರ್ತಿಕ ಮಾಸದ ಪೂಜಾ ಮಹೋತ್ಸವ ಅ. ೨೭ ರಿಂದ ನ. ೧೧ ರವರೆಗೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಅ. ೨೭ ರ ಬೆಳಗ್ಗೆ ಗಂಗಾ ಪೂಜೆಯೊಂದಿಗೆ ಕಳಶ ತರಲಾಗುವುದು. ಸಂಜೆ ೬.೩೦ಕ್ಕೆ ದೀಪೋತ್ಸವ ಜರುಗಲಿದೆ. ೩೧ ರಂದು ಬೆಳಗ್ಗೆ ೧೦ಕ್ಕೆ ಉಚಿತ ಆರೋಗ್ಯ ತಪಾಸಣೆ, ನ. ೧ ರಂದು ಸಂಜೆ ಭಜನಾ ಕಾರ್ಯಕ್ರಮ, ನ. ೧೦ ರಂದು ಬೆಳಗ್ಗೆ ಮಹಾ ರುದ್ರಾಭಿಷೇಕ, ನ. ೧೭ ರಂದು ಸ್ವಾಮಿಯ ಸುವರ್ಣ ಕೊಳಗದ ಮೆರವಣಿಗೆ ನಡೆಯಲಿದೆ ಎಂದರು.
ಮಹದೇಶ್ವರ ಸ್ವಾಮಿ ಟ್ರಸ್ಟ್ ಅಧ್ಯಕ್ಷರಾದ ಗುಡ್ಡಪ್ಪ ರವಿಕುಮಾರ್, ರಾಚಯ್ಯ, ರಾಜೇಂದ್ರ, ಕುಮಾರ್, ಜಿ. ಪ್ರಕಾಶ್, ಎಂ.ಎಸ್. ಮಹದೇವು ಇದ್ದರು.

Share This Article
Leave a Comment