ಮಾಲ್ ಮೇಲಿದ್ದ ಬಿದ್ದು ಒರ್ವ ಸಾವು, ಮತ್ತೋರ್ವ ಗಂಭೀರ ಗಾಯ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು:
ಕೆಲಸದ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಬಿ.ಎಂ. ಹ್ಯಾಬಿಟೇಟ್‌ ಮಾಲ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಎಲೆಕ್ಟ್ರಿಷಿಯನ್‌ ಕೆಲಸಗಾರ ಸುನೀಲ್‌(27) ಸ್ಥಳದಲ್ಲೇ ಮೃತಪಟ್ಟಿದ್ದರೆ, ಈತನ ರಕ್ಷಣೆಗೆ ಮುಂದಾದ ಚಂದ್ರು ಸಹ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ಜಯಲಕ್ಷ್ಮಿಪುರಂನಲ್ಲಿರುವ ಬಿ.ಎಂ. ಹ್ಯಾಬಿಟೇಟ್‌ ಮಾಲ್‌ ಕಟ್ಟಡದ ನಾಲ್ಕನೇ ಹಂತಸ್ತಿನಲ್ಲಿ ಬೋರ್ಡ್ ತೆರವು ಮಾಡುವ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎಲೆಕ್ಟ್ರಿಷಿಯನ್‌ ಸುನೀಲ್‌, ಕಟ್ಟಡದ ಮೇಲೆ ಅಳವಡಿಸಿದ್ದ ಪಿಒಪಿ ಮೇಲೆ ಕಾಲಿಟ್ಟ ಪರಿಣಾಮ ಪಿಒಪಿ ಕುಸಿದಿದೆ. ಈ ವೇಳೆ ಸುನೀಲ್, ರಾಡ್‌ನ ಸಹಾಯದಿಂದ ನೇತಾಡುತ್ತಿದ್ದು, ಸುನೀಲ್ ರಕ್ಷಣೆಗೆ ಮುಂದಾದ ಚಂದ್ರು ಕೂಡ ಪಿಒಪಿ ಮೇಲೆ ಕಾಲಿಟ್ಟಿದ್ದರಿಂದ ನಿಯಂತ್ರಣ ಕಳೆದುಕೊಂಡು ಇಬ್ಬರು ಕೆಳಗೆ ಬಿದ್ದಿದ್ದಾರೆ.

ಘಟನೆಯಲ್ಲಿ ಸುನೀಲ್‌ ಸ್ಥಳದಲ್ಲೇ ಮೃತಪಟ್ಟರೆ, ಚಂದ್ರು ಗಂಭೀರವಾಗಿ  ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ, ಮುಂದಿನ‌ ಕ್ರಮಕೈಗೊಂಡಿದ್ದಾರೆ.

Share This Article
Leave a Comment