ಸಿಎಂ ತವರಲ್ಲೇ ಸಮೀಕ್ಷೆಗೆ ಗೈರು: 8 ಸಹ ಶಿಕ್ಷಕರು ಅಮಾನತು

Chethan
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಜಿಲ್ಲೆಯಲ್ಲಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷಾ ಗಣತಿ ಕಾರ್ಯಕ್ಕೆ ಹಾಜರಾಗದೇ ಅಧಿಕಾರಿಗಳ ದೂರವಾಣಿ ಕೆರೆಯನ್ನು ಸ್ವೀಕರಿಸದೇ ಬೇಜವಾಬ್ದಾರಿ ಹಾಗೂ ಅತೀವ ನಿರ್ಲಕ್ಷ್ಯ ತೋರಿದ 8 ಸಹ ಶಿಕ್ಷಕರನ್ನು ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಆದೇಶದ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಉತ್ತರ ವಲಯದ ರಾಜೇಂದ್ರ ನಗರದ ಕೆಸರೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆ, ದಕ್ಷಿಣ ವಲಯ ಜಾಕಿ ಕ್ವಾಟ್ರಸ್
ಆದರ್ಶ ವಿದ್ಯಾಲಯ, ಹುಣಸೂರು ಕರಿಗೌಡರ ಬೀದಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ದಕ್ಚಿಣ ವಲಯ ಬಿಬಿ ಗಾರ್ಡನ್ ನ ಶ್ರೀ ಶಾರದಾ ಪ್ರೌಢಶಾಲೆ, ಹುಣಸೂರು ತಾಲ್ಲೂಕಿನ ಮರುಳಯ್ಯನಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಿಮುದ್ದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುರುಪುರ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯ ಸಹ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಆದೇಶಿಸಿದ್ದಾರೆ.

Share This Article
Leave a Comment