ಮೈಸೂರು: ಎಸ್.ಎ.ಎ. ಸಂಸ್ಥೆಯ ಜಾಗತಿಕ ರ್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿನ 100 ಅತ್ಯುತ್ತಮ ಮೌಲ್ಯವುಳ್ಳ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ 8 ನೇ ಸ್ಥಾನ ಲಭಿಸಿದೆ.
ಮೈಸೂರು ವಿಶ್ವವಿದ್ಯಾಲಯ (ಯುಒಎಂ) ಔಟ್‌ಲುಕ್ ಐಸಿಎಆರ್ಇ ಶ್ರೇಯಾಂಕಗಳು–2025ರಲ್ಲಿ ದೇಶದ ಅಗ್ರ 75 ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಈ ಮಾನ್ಯತೆ ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆ, ಉದ್ಯಮ ಇಂಟರ್ಫೇಸ್ ಮತ್ತು ಉದ್ಯೋಗ ಸೇರಿದಂತೆ ನಿರ್ಣಾಯಕ ನಿಯತಾಂಕಗಳನ್ನು ಆಧರಿಸಿದೆ. ಕೈಗೆಟಕುವ ವೆಚ್ಚದಲ್ಲಿ ಅತ್ಯುತ್ಕೃಷ್ಟ ಶಿಕ್ಷಣವನ್ನು ಒದಗಿಸುವ ಮೈಸೂರು ವಿಶ್ವವಿದ್ಯಾನಿಲಯದ ಬದ್ಧತೆಗೆ ಈ ಮಾನ್ಯತೆಯು ಸಾಕ್ಷಿಯಾಗಿದೆ. ಈ ಮಾನ್ಯತೆ ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆ, ಉದ್ಯಮ ಇಂಟರ್ಫೇಸ್ ಮತ್ತು ಉದ್ಯೋಗ ಸೇರಿದಂತೆ ನಿರ್ಣಾಯಕ ನಿಯತಾಂಕಗಳನ್ನು ಆಧರಿಸಿದೆ ಎಂದು ಕುಲಪತಿ ಪ್ರೊ.ಎನ್. ಕೆ. ಲೋಕನಾಥ್ ತಿಳಿಸಿದ್ದಾರೆ.
ವಿದೇಶಿ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯವು ಗುಣಮಟ್ಟದ ಶಿಕ್ಷಣ ಒದಗಿಸುವ ನೆಚ್ಚಿನ ಜ್ಞಾನತಾಣವಾಗಿ ಹೊರಹೊಮ್ಮಿದೆ. ಜಾಗತಿಕವಾದ ಕಲಿಕಾ ವಾತಾವರಣವನ್ನು ಕಲ್ಪಿಸುವ ಮೂಲಕ, ಹೊರದೇಶದ ವಿದ್ಯಾರ್ಥಿಗಳಿಗೆ ಹೊಸ ಸಾಧ್ಯತೆಗಳನ್ನು ಹಾಗೂ ಅವಕಾಶಗಳನ್ನು ಸೃಷ್ಟಿಸುತ್ತಿರುವ ವಿಶ್ವವಿದ್ಯಾನಿಲಯದ ಪ್ರಯತ್ನವನ್ನು ಗುರುತಿಸಿ ಈ ಶ್ರೇಯಾಂಕವನ್ನು ನೀಡಲಾಗಿದೆ. ಹಲವು ಇತಿಮಿತಿಗಳ ನಡುವೆಯೂ ಮೈಸೂರು ವಿಶ್ವವಿದ್ಯಾನಿಲಯವು 8 ನೇ ಸ್ಥಾನ ಪಡೆದಿರುವುದು ಅಭಿಮಾನದ ಸಂಗತಿಯಾಗಿದೆ. ಎಸ್.ಎ.ಎ. ಸಂಸ್ಥೆಯ ಮಾರ್ಗಸೂಚಿಯನ್ವಯ ವಿಶ್ವವಿದ್ಯಾನಿಲಯದ ದತ್ತಾಂಶ ಮತ್ತು ದಾಖಲೆಗಳನ್ನು ಸಮರ್ಪಕವಾಗಿ ಬಿಂಬಿಸಿದ ವಿಶ್ವವಿದ್ಯಾನಿಲಯದ ಐ.ಕ್ಯು.ಎ.ಸಿ.ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮವನ್ನು ವಿಶೇಷವಾಗಿ ಶ್ಲಾಘಿಸುತ್ತೇನೆಂದರು.
ಮೈಸೂರು ವಿವಿಗೆ ೮ನೇ ಸ್ಥಾನದ ರ್ಯಾಕಿಂಗ್

Leave a Comment
Leave a Comment