ಜಾತಿ, ಮತ ಮೀರಿ ದಸರೆ ಯಶಸ್ವಿ: ಅಧ್ಯಕ್ಷ ಕೆ.ವಿ.ಮಲ್ಲೇಶ್‌

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಯಾರೇ ಬಂದೂ ಪ್ರಾರ್ಥಿಸಿದರೂ ಜಾತಿ ಧರ್ಮ ನೋಡದೇ ತಾಯಿ ಚಾಮುಂಡೇಶ್ವರಿ ಯಶಸ್ವಿಗೊಳಿಸುತ್ತಾಳೆಂಬುದು ಈ ಬಾರಿ ದಸರೆಯ ಮೂಲಕ ಇತಿಹಾಸದಲ್ಲಿ ದಾಖಲಾಗಿದೆ ಎಂದು ದಸರಾ ಸಾಂಸ್ಕೃತಿಕ ಉಪಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ್‌ ತಿಳಿಸಿದರು. 
ಹೆಬ್ಬಾಳಿನ ಖಾಸಗಿ ಹೋಟೆಲ್‌ ನಲ್ಲಿ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಉಪಸಮಿತಿಯ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಡಲೆಕಾಯಿ ಮಾರಾಟಗಾರನಿಂದ ಎಲ್ಲರಿಗೂ ಇದು ಲಾಭ ತರುವ ವ್ಯಾಪಾರ ಹಾಗೂ ಸಾಂಸ್ಕೃತಿಕ ಹಬ್ಬವಾಗಿ ದಸರೆ ಬೆಳೆದಿದೆ. ಜನರಿಗೆ ಚಾಮುಂಡೇಶ್ವರಿಯ ಮೇಲೆ ಅಪಾರ ಭಕ್ತಿಯಿದ್ದು, ಜಾತಿ, ಮತ ಮೀರಿ ಯಾರೇ ಬಂದೂ ಪೂಜಿಸಿದರು ಆಕೆ ಯಶಸ್ವಿ ಮಾಡುತ್ತಾಳೆಂಬುದಕ್ಕೆ ಈ ಬಾರಿ ದಸರೆಯ ಯಶಸ್ವಿ ಇತಿಹಾಸದಲ್ಲಿ ದಾಖಲಾಗಿದೆ ಎಂದರು. 
ಮೈಸೂರಿಗೆ ಹೆಚ್ಚಿನ ಪ್ರಾತಿನಿಧ್ಯ ಇರುತ್ತಿದ್ದ ದಸರಾ ಸಮಿತಿಯಲ್ಲಿ ಈ ಬಾರಿ ಸಂಸದರು, ಸಚಿವರ ಚಿಂತನೆಯಿಂದ ಚಾಮರಾಜನಗರ ಮಂದಿಯನ್ನು ಯಶಸ್ವಿಯಾಗಿ ಒಳಗೊಂಡಂತೆ ಸಮಿತಿ ರಚಿಸಲಾಯಿತು. ಸಾಂಸ್ಕೃತಿಕ ಸಮಿತಿಗೆ ಬಹುಬೇಗ ಪಾಸ್‌ ಕೊಟ್ಟರೂ ಅನೇಕ ಸದಸ್ಯರೂ ಬರಲೇ ಇಲ್ಲ. ನಾವೆಷ್ಟೇ ಹೇಳಿದರೂ ವ್ಯವಸ್ಥೆಯ ಜತೆಗೆ ಒಂದಾಗಿ ಹೋಗಬೇಕಿದೆ. ಹೀಗಾಗಿ ಮುಂದಿನ ದಸರೆಗಳಲ್ಲಿ ಮತ್ತಷ್ಟು ಅಚ್ಚುಕಟ್ಟಾದ ವ್ಯವಸ್ಥೆಯಿರಲಿ ಎಂದು ಆಶಿಸೋಣ. ಸಿಎಂ, ಡಿಸಿಎಂ ಆದಿಯಾಗಿ ಅನೇಕರು ಈಬಾರಿ ಕಾರ್ಯಕರ್ತರಿಗೆ ಬಹುದೊಡ್ಡ ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸೋಣ. ದಸರಾ ಯಶಸ್ವಿಗೊಳಿಸಿ ಪ್ರಜಾಪ್ರಭುತ್ವದ ಯಶಸ್ವಿಗೆ ನಾವೆಲ್ಲಾ ಕಾರಣರಾಗಿದ್ದೇವೆ. ಆದ ಅನುಭವಗಳನ್ನು ಸರಿಪಡಿಸಿಕೊಂಡು ಮುಂದೆ ನಡೆಯೋಣ ಎಂದರು.
ದಸರಾ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿಯೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಸುದರ್ಶನ್‌, ಉಪಾಧ್ಯಕ್ಷರಾದ ಮಂಜು, ಭರತ್‌, ಹುಸೇನ್‌, ರಾಣಿ, ಎಂ.ನಾಗರಾಜು, ದೀಪಕ್‌ ಇನ್ನಿತರರು ಉಪಸ್ಥಿತರಿದ್ದರು.

ಬಾಕ್ಸ್‌
ಸಿಎಂ ಸಿದ್ದರಾಮಯ್ಯ, ಸಚಿವರಾದ ಮಹದೇವಪ್ಪ ಅವರು ಈ ಬಾರಿ ಕಾರ್ಯಕರ್ತರಿಗೆ ದಸರೆಯ ಸಮಿತಿಯಲ್ಲಿ ಹೆಚ್ಚಿನ ಅವಕಾಶ ನೀಡುವ ಮೂಲಕ ದಸರಾವನ್ನು ಯಶಸ್ವಿಗೊಳಿಸಿದ್ದಾರೆ. ಆ ಮೂಲಕ ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿ ನೀಡಿರುವುದಕ್ಕೆ ಅಭಿನಂದಿಸುವೆ.
-ಎಂ.ನಾಗರಾಜು, ಉಪಸಮಿತಿ ಉಪಾಧ್ಯಕ್ಷ

Share This Article
Leave a Comment