ಸಂತ ಫಿಲೋಮಿನಾ ಕಾಲೇಜಿ‌ನಲ್ಲಿ ಟೆಕ್ನೋ ಎಕ್ಸ್ಪೋ

Chethan
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಸಿ.ಎ. ಪದವಿ ಮತ್ತು ಎಂ.ಸಿ.ಎ. ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಯುಕ್ತವಾಗಿ ಆಯೋಜಿಸಿರುವ ಎರಡು ದಿನಗಳ ಟೆಕ್ನೋ ಎಕ್ಸ್‌ಪೋ-೩.೦ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರದರ್ಶನವನ್ನು ಎಲ್ ಅಂಡ್ ಟಿ ಟೆಕ್ನಾಲಜೀಸ್ ಸರ್ವಿಸ್ ಲಿಮಿಟೆಡ್‌ನ ಡೆಲಿವರಿ ಹೆಡ್ ಪ್ರಭು ವಿಜಯಕುಮಾರ್ ಟೇಪ್ ಕತ್ತರಿಸುವ ಮೂಲಕ ಪ್ರದರ್ಶನವನ್ನು ಉದ್ಘಾಟಿಸಿದರು.
ಪ್ರದರ್ಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹೊಚ್ಚ ಹೊಸ
ತಂತ್ರಜ್ಞಾನಗಳ ಮಾದರಿಗಳನ್ನು ಪ್ರದರ್ಶಿಸಿದರು. ವಿಶೇಷವಾಗಿ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ, ವಿವಿಧ ರೋಬೋಟ್‌ಗಳು, ವಿಶೇಷವಾದ ಸ್ಟ್ರೀಟ್ ಲೈಟ್, ಬೆರಳಿನ ಸನ್ನೆಯಲ್ಲಿ ಚಲಿಸುವ ವಾಹನಗಳ ಮಾದರಿಗಳು, ರಿಮೋಟ್ ಆಧಾರಿತ ಚಲಿಸುವ ವಾಹನ ಸೇರಿದಂತೆ ವಿವಿಧ ಮಾದರಿಗಳು ಪ್ರದರ್ಶನಗೊಂಡು ಸಭಿಕರ ಮತ್ತು ಗಣ್ಯ ಅತಿಥಿಗಳ ಗಮನ ಸೆಳೆದವು.
ಎರಡು ದಿನಗಳ ಈ ಕಾರ್ಯಕ್ರಮವು ಬಿ.ಸಿ.ಎ. ಮತ್ತು
ಎಂ.ಸಿ.ಎ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯವನ್ನು ಪುದರ್ಶಿಸಲು ಮತ್ತು ಪ್ರೋತ್ಸಾಹ ಪಡೆಯಲು ಉತ್ತಮ ವೇದಿಕೆಯಾಗಿತ್ತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ರವಿ ಜೆ.ಡಿ.ಸಲ್ಡಾನ ಅವರು ಮಾತನಾಡಿ, ಕಾಲೇಜಿನ ಬಿಸಿಎ ಮತ್ತು ಎಂಸಿಎ ವಿದ್ಯಾರ್ಥಿಗಳು ತಮ್ಮ ಸ್ವಂತ ಪರಿಶ್ರಮ ಮತ್ತು ವಿವೇಚನೆಯಿಂದ ಎಮರ್ಜಿಂಗ್ ಟೆಕ್ನಾಲಜಿ ಆಧಾರಿತ ಅನೇಕ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಅನೇಕ ರೀರಿಯ ಸೆನ್ಸಾರ್‌ಗಳು, ರಿಮೋಟ್‌ಗಳು ಚಿಪ್‌ಗಳನ್ನು ಬಳಸಿಕೊಂಡಿದ್ದಾರೆ. ಇದಕ್ಕೆ ಬಿಸಿಎ ಮತ್ತು ಎಂಸಿಎ ವಿಭಾಗದ ಅಧ್ಯಾಪಕರು ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಬಿ.ಸಿ.ಎ. ವಿಭಾಗದ ಮುಖ್ಯಸ್ಥರಾದ ಗ್ಲೋರಿಯ ಪ್ರಿಯದರ್ಶಿನಿ ಅವರು ಮಾತನಾಡಿ, ನಮ್ಮ ವಿದ್ಯಾರ್ಥಿಗಳು ನವ ನವೀನ ತಂತ್ರಜ್ಞಾನ ಬಳಸಿಕೊಂಡು ಸೈಬರ್ ಸೆಕ್ಯೂರಿಟಿ, ವುಮೆನ್ ಸೇಫ್ಟಿ, ಆಂಟಿ ಸ್ಲೀಪಿಂಗ್ ಡಿವೈಸ್‌ಗಳನ್ನು ಪ್ರದರ್ಶನ ಮಾಡಿದ್ದು ವಿಶೇಷವಾಗಿದೆ. ಇದರಲ್ಲಿ ವಾಯ್ಸ್ ಕಂಟ್ರೋಲ್ ರೋಬೋಟ್ ವ್ಯವಸಾಯದಲ್ಲಿ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಬಳಕೆ ಸ್ಟ್ರೀಟ್ ಲೈಟ್ ಪ್ರಮುಖವಾದವು ಎಂದರು.

ಕಾರ್ಯಕ್ರಮದಲ್ಲಿ ರೆಕ್ಟರ್ ರೆವರೆಂಡ್ ಡಾ.ಲೂರ್ದು ಪ್ರಸಾದ್, ಕ್ಯಾಂಪಸ್ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಜ್ಞಾನ ಪ್ರಕಾಸಂ, ಅಸಿಸ್ಟೆಂಟ್ ಟು ರೆಕ್ಟರ್ ರೆವರೆಂಡ್ ಫಾದರ್ ಡೇವಿಡ್ ಸಗಾಯರಾಜ್ ಎಸ್., ಪ್ರಿನ್ಸಿಪಲ್ ಡಾ.ರವಿ ಜೆ.ಡಿ.ಸಲ್ಡಾನ, ವೈಸ್ ಪ್ರಿನ್ಸಿಪಲ್(ಆಡಳಿತ) ರೋನಾಲ್ಡ್ ಪ್ರಕಾಶ್ ಕಿಟಿನ್ಹ, ಐಕ್ಯೂಎಸಿ ಕೋ ಆರ್ಡಿನೇಟರ್ ಎ.ಥಾಮಸ್ ಗುಣಸೀಲನ್, ಅಕಾಡೆಮಿಕ್ ಅಫೈರ‍್ಸ್ ಡೀನ್ ಆನಂದ್ ಸಿ. ಕಾರ್ಯಕ್ರಮದ ಸಂಯೋಜಕರು ಮತ್ತು ಬಿ.ಸಿ.ಎ. ವಿಭಾಗದ ಮುಖ್ಯಸ್ಥರಾದ ಗ್ಲೋರಿಯ ಪ್ರಿಯದರ್ಶಿನಿ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment