ಪಬ್ಲಿಕ್ ಅಲರ್ಟ್
ಮೈಸೂರು: ನಾಡಹಬ್ಬ ದಸರೆ ಅಂಗವಾಗಿ ಸಿಡಿಮದ್ದು ತಾಲೀಮಿಗೆ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣಕ್ಕೆ ಆಗಮಿಸಿದ ಗಜಪಡೆಯನ್ನು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯವಾಗಿ ಸ್ವಾಗತಿಸಿದರು.
ಬಳಿಕ ಮಾತನಾಡಿದ ಅವರು, ದಸರಾಗೆ ಎಲ್ಲಾ ರೀತಿಯಲ್ಲೂ ವಸ್ತುಪ್ರದರ್ಶನವನ್ನು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಎಲ್ಲಾ ಕಾಮಗಾರಿಗಳು ಅಂತಿಮ ಹಂತದಲ್ಲಿ ನಡೆಯುತ್ತಿದೆ. ಇಂದು ಗಜಪಡೆಯ ಸಿಡಿಮದ್ದು ತಾಲೀಮಿಗೆ ಆವರಣಕ್ಕೆ ಆಗಮಿಸಿದ ಆನೆಗಳಿಗೆ ಪುಷ್ಪಾರ್ಚನೆ ಹಾಗೂ ಸಿಹಿ ವಿತರಿಸುವ ಮೂಲಕ ಸಕಲ ರೀತಿಯಲ್ಲೂ ಸ್ವಾಗತಿಸಲಾಗಿದೆ. ಈ ಸಂಧರ್ಭದಲ್ಲಿ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಚಾಮರಾಜ ಕ್ಷೇತ್ರದ ಬ್ಲಾಕ್ ಅಧ್ಯಕ್ಷ ಮಂಚೇಗೌಡನಕೊಪ್ಪಲು ರವಿ, ಮಾಜಿ ಮೇಯರ್ ಎಸ್.ಎಲ್.ಬೈರಪ್ಪ, ಪುಷ್ಪಲತಾ ಚಿಕ್ಕಣ್ಣ, ದಿ ಮೈಸೂರು ಕೋ ಅಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ರಾಜೇಶ್ವರಿ ಇನ್ನಿತರರು ಉಪಸ್ಥಿತರಿದ್ದರು.
