ಸೆ.3 ರಂದು ಜಿಲ್ಲಾಡಳಿತದ ವತಿಯಿಂದ  ದಸರಾ ಉದ್ಘಾಟಕರಿಗೆ ಅಧಿಕೃತ ಆಹ್ವಾನ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು,ಸೆ.2:  ನಾಡಹಬ್ಬ ಮೈಸೂರು ದಸರಾ 2025 ರ ಉದ್ಘಾಟಕರಾದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಸೆ.3 ರಂದು ಜಿಲ್ಲಾಡಳಿತದ ವತಿಯಿಂದ ಆಹ್ವಾನಿಸಲಾಗುತ್ತೆ ಎಂದು ಜಿಲ್ಲಾಧಿಕಾರಿಗಳೂ ಆದ ದಸರಾ ವಿಶೇಷಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.

ಈ ಬಾರಿಯ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರವು ತೀರ್ಮಾನಿಸಿದೆ. ದಸರಾ ಉದ್ಘಾಟನೆಗೆ ಸಾಹಿತಿ, ಹೋರಾಟಗಾರ್ತಿಯಾದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಾಸನದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸದಲ್ಲಿ ಬುಧವಾರ ಸಂಜೆ 4 ಗಂಟೆಗೆ ಸರ್ಕಾರ, ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.


ರಾಷ್ಟ್ರಪತಿಗಳನ್ನು ನಿಮಗೆ ಕನ್ನಡ ಗೊತ್ತಾ ಎಂದು ಕೇಳಿದ ಸಿಎಂ
ಮೈಸೂರು:  ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ  ವಾಕ್ ಮತ್ತು ಶ್ರವಣ ಸಂಸ್ಥೆಯ “ವಜ್ರಮಹೋತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ   ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿಮಗೆ ಕನ್ನಡ ಗೊತ್ತಾ ಎಂದು ಕೇಳಿದ ಘಟನೆ ನಡೆಯಿತು.

ವಜ್ರಮಹೋತ್ಸವ ಕಾರ್ಯಕ್ರದಲ್ಲಿ  ಸೋಮವಾರ  ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕನ್ನಡದಲ್ಲಿ ತಮ್ಮ ಭಾಷಣ ಆರಂಭಿಸಿದರು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಡೆ ತಿರುಗಿ ನಿಮಗೆ ಕನ್ನಡ ಗೊತ್ತಾಗುತ್ತಾ. ಯು ನೋ ಕನ್ನಡ ಎಂದು ಕೇಳಿದ್ದಾರೆ.

ನಂತರ ತಮ್ಮ ಭಾಷಣದಲ್ಲಿ  ಪ್ರತಿಕ್ರಿಯಿಸಿದ ದ್ರೌಪದಿ ಮುರ್ಮು ಅವರು, ನಿಮ್ಮ ಮಾತೃ ಭಾಷೆ ಗೊತ್ತಿಲ್ಲ. ಕರ್ನಾಟಕದ ಭಾಷೆಯಲ್ಲದೇ ಭಾರತದಲ್ಲಿರವ ಬಹುಭಾಷಾ ಸಂಸ್ಕೃತಿ, ಪರಂಪರೆಯನ್ನು ಪ್ರೀತಿಸುವುದು, ಗೌರವಿಸುವುದು ಹಾಗೂ ಸಮ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ. ಶೀಘ್ರದಲ್ಲೇ ಸ್ವಲ್ಪವಾದರು ಕನ್ನಡ ಕಲಿಯುವೆ ಎಂದು ಹೇಳಿ ನಕ್ಕಿದ್ದಾರೆ.

Share This Article
Leave a Comment