ಯುವರಾಜನಿಂದ ಯುವಸಂಭ್ರಮಕ್ಕೆ ಅದ್ಧೂರಿ ಚಾಲನೆ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಾಡಹಬ್ಬದ ಸಂಭ್ರಮಕ್ಕೆ ದಿನಗಣನೇ ಶುರುವಾದ ಬೆನ್ನಲ್ಲೇ ಬುಧವಾರ ಗಂಗೋತ್ರಿ ಆವರಣದಲ್ಲಿ ಸಾವಿರಾರು ಯುವ ಮನಸ್ಸುಗಳನ್ನು ತಮ್ಮ ಡೈಲಾಗ್‌ ನಿಂದ ಸೆಳೆದ ಯುವ ರಾಜಕುಮಾರ್‌ ಅವರಿಂದ ಯುವಸಂಭ್ರಮಕ್ಕೆ ಅದ್ಧೂರಿ ಚಾಲನೆ ದೊರೆಯಿತು. 
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಏಳು ದಿನಗಳ ಕಾಲ ನಡೆಯುವ ಮೈಸೂರು ದಸರಾ ಮಹೋತ್ಸವ -೨೦೨೫ರ ಯುವ ಸಂಭ್ರಮಕ್ಕೆ ನಟ ಯುವರಾಜಕುಮಾರ್‌, ನಟಿ ಅಮೃತ್‌ ಅಯ್ಯಂಗಾರ್‌, ಸಚಿವ ಕೆ.ವೆಂಕಟೇಶ್‌ ಸೇರಿ ಅನೇಕ ಗಣ್ಯರು ಚಾಲನೆ ನೀಡಿದರು. 
ನಟ ಯುವರಾಜ್ ಮಾತನಾಡಿ ಈ ವೇದಿಕೆ ನಿಮ್ಮದಾಗಿದ್ದು ದಸರಾ ಅರಂಭ ಆಗುತ್ತಿರುವುದೇ ನಿಮ್ಮಿಂದ ನಿಮ್ಮ‌ಲ್ಲಿರುವ ಪ್ರತಿಭೆಗಳಿಂದ ಎಂದು ಸಂತಸ ಹಂಚಿಕೊಂಡರು. ಜತೆಗೆ ಬ್ಯಾಂಗಲು ಬಂಗಾರಿ ಗೀತೆಗೆ ನರ್ತಿಸಿ ಯುವ ಮನಸ್ಸುಗಳು ಸಂಭ್ರಮಿಸುವಂತೆ ಮಾಡಿದರು. 
ನಟಿ ಅಮೃತ ಅಯ್ಯರ್ ಮಾತಾನಾಡಿ ನಮ್ಮೂರಲ್ಲಿ ನಮ್ಮ ವೇದಿಕೆಯಲ್ಲಿ ಭಾಗವಹಿಸಿರುವುದು ಸಂತೋಷವಾಗುತ್ತಿದೆ ನಾನು ಕೂಡ ಕಾಲೇಜಿನ ದಿನಗಳಲ್ಲಿ ಯುವ ಸಂಭ್ರಮವನ್ನು ನೋಡಲು ಬರುತ್ತಿದ್ದದ್ದು ನೆನಪಾಗುತ್ತಿದೆ. ಮುಖ್ಯವಾಗಿ ಕಲಾವಿದರ ಮೇಲೆ ಇನ್ನು ಹೆಚ್ಚು ನಿಮ್ಮ ಸಹಕಾರ ಬೇಕು ಎಂದು ಹೇಳಿದರು.

ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಮಾತನಾಡಿ ಇವತ್ತೀನ ಯುವ ದಸರಾವನ್ನು ಎಲ್ಲಾ ಸರ್ಕಾರವು  ನಡೆಸಿಕೊಂಡು ಬಂದಿದ್ದು, ಅದರಂತೆ ಕಾಂಗ್ರೆಸ್‌ ಸರ್ಕಾರ ಅದ್ಧೂರಿಯಾಗಿ ಇಂದು ಚಾಲನೆ ನೀಡಿದೆ ಎಂದರು.  ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ ನಮ್ಮ ಸರ್ಕಾರ ಗ್ಯಾರಂಟಿ ಸರ್ಕಾರ ಆಗಿದ್ದು ನಮ್ಮ ಸರ್ಕಾರ ಯುವಕರಿಗೆ ಸಂಭ್ರಮದ ಗ್ಯಾರಂಟಿ ನೀಡಿದೆ. ಎಲ್ಲರೂ ಆನಂದಿಸಿ ಹಾಗೂ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ‌ ಸಾಂಸ್ಕೃತಿಕ ಲೋಕವನ್ನು ಕೊಡುವುದಕ್ಕೆ ಕವಿಗೋಷ್ಟಿ, ಶಾಸ್ತ್ರೀಯ ಸಂಗೀತ ಕರ್ನಾಟಕ ಸಂಗೀತಕ್ಕೆ ಆದ್ಯತೆ ನೀಡುವುದರ ಜೊತಗೆ ಯುವಕರನ್ನು ಸಂತೋಷವನ್ನಾಗಿಸಲು ಯುವ ದಸರಾ ಅಯೋಜನೆ ಮಾಡಲಾಗಿದೆ. ನಿಮ್ಮ ಪಾಲುದಾರಿಕೆ ಹಾಗೂ ಪ್ರತಿಭೆಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು
ಶಾಸಕ ಜಿ.ಟಿ.ದೇವೆಗೌಡ ಮಾತನಾಡಿ ನಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿಭಾವಂತರಾಗಿದ್ದು ನಮ್ಮ ದೇಶದ ಆಸ್ತಿ ಅವರಾಗಿದ್ದಾರೆ. ಜೊತೆಗೆ ಯಾವುದೇ ಅನಾಹುತಕ್ಕೆ ಅವಕಾಶ ನೀಡಬಾರದು. ಹೊರ ರಾಜ್ಯದಿಂದ ಬಂದವರಿಗೆ ಯಾವ ಸಮಸ್ಯೆ ಕೂಡ ಆಗಬಾರದ ರೀತಿ ಸೌಜನ್ಯದಿಂದ ವರ್ತನೆ ಮಾಡುವುದಕ್ಕೆ ನೀವು ಸಹಕಾರ ನೀಡಬೇಕು. ಜೊತೆಗೆ ಯುವ ಸಂಭ್ರಮದಲ್ಲಿ ಹುಚ್ಚಾಟ ಬಿಟ್ಟು ಇತರರಿಗೆ ತೊಂದರೆ ಆಗದಂತೆ ನಡೆದುಕೊಳ್ಳಿ ಎಂದು ತಿಳಿಸಿದರು. ಬಳಿಕ ಮೊದಲ ದಿನ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳು ನಡೆದವು. ವಿಧಾನ ಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತ ರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment