ಇಂದೇ ಮತ್ಸ್ಯಮೇಳ ಕೊನೆ: ಕಣ್ಮನ ಸೆಳೆಯುತಿದೆ ಅಲಿಗೇಟರ್ ಘಾರ್ ಮೀನು

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು : ತೀರ ಅಪರೂಪದ ಅಲಿಗೇಟರ್ ಘಾರ್ ಮೀನು ಮತ್ಸ್ಯಮೇಳದಲ್ಲಿ ಆಕರ್ಷಣಿಯಾಗಿ ಜನರನ್ನ ತನ್ನತ್ತ ಸೆಳೆಯುತ್ತಿದೆ.
ಮೈಸೂರು ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಉಪ ಸಮಿತಿಯ ವತಿಯಿಂದ ಜೆ.ಕೆ.ಮೈದಾನದಲ್ಲಿ ಅಯೋಜಿಸಿರುವ  ಮೀನುಗಾರಿಕೆ ಇಲಾಖೆ ವಸ್ತು ಪ್ರದರ್ಶನ ಮಳಿಗೆ ಮತ್ತು ಅಕ್ವೇರಿಯಂ ಗ್ಯಾಲರಿ (ಮತ್ಸ್ಯಮೇಳ)ಯಲ್ಲಿ ವಾಸ್ತು, ಅಪಾಯಕಾರಿ ಮೀನು, ಸುಂದರ ಮೀನುಗಳು  ನೋಡಬಹುದಾಗಿದೆ. ಅರೋವನ, ಡೆವಿಲ್ ಮೀನು, ಸಕ್ಕರ್ ಕ್ಯಾಟ್ ಫಿಶ್, ಟೈಗರ್ ಶಾರ್ಕ್,ಟೈಗರ್ ಬಾರ್ಬ್, ಟಾಕಿಂಗ್ ಕ್ಯಾಟ್ ಫಿಶ್, ಗಿಳಿ ಮೀನು, ಆಸ್ಕರ್ ಮೀನು, ಒರಾಂಡ ಗೋಲ್ಡ್ ಫಿಶ್, ಪುಕ್ಕಿನ್ ಗೋಲ್ಡ್  ಫಿಶ್, ಕಾಟ್ಲ, ಸಾಮಾನ್ಯಗೆಂಡೆ, ಬೆಳ್ಳಿ ಗೆಂಡೆ, ಮೃಗಾಲ್, ಹುಲ್ಲು ಗೆಂಡೆ ಮೀನುಗಳು ಆಕರ್ಷಣೆಯಾಗಿ ಕಾಣುತ್ತಿವೆ.
ಅಲಿಗೇಟರ್ ಘಾರ್ : ಈ ಮೀನು ನೋಡಲು ಮೊಸಳೆ ಮರಿಯಂತೆ ಇರುವುದರಿಂದ, ಅಲಿಗೇಟರ್ ಘಾರ್ ಎಂದು ಕರೆಯಲಾಗುತ್ತದೆ. ಇದು ಪರಭಕ್ಷಕವಾಗಿದ್ದು, ಕೆರೆ ಇತರೆ ಪ್ರದೇಶದ ನೀರಿನಲ್ಲಿ ಇದ್ದರೆ, ಮೀನಿನ ಸಂತತಿಯನ್ನೇ ನಾಶ ಮಾಡುತ್ತೆ. ಈ ಹಿನ್ನೆಲೆಯಲ್ಲಿ ಇಂತಹ ಮೀನುಗಳು ಸಿಕ್ಕರೆ ಮೀನುಗಾರಿಕೆ ಇಲಾಖೆಗೆ ಒಪ್ಪಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಅರೋವನ :ಮನೆ, ಹೊಸ ಕಟ್ಟಡ ಕಟ್ಟಿ ವಾಸ್ತುವಿನ ಪ್ರಕಾರ ಮೀನುಗಳನ್ನು ಸಾಕಲಾಗುತ್ತದೆ. ಅದರಲ್ಲಿ ಪ್ರಮುಖವಾದ ಅರೋವನ ವಾಸ್ತು ಮೀನು ಕೂಡ ಪ್ರದರ್ಶನಕ್ಕೆ ಇಡಲಾಗಿದೆ. ಗ್ಯಾಂಬೂಸಿಯಾ ಅಫಿನಿಸ್ ಈ  ಮೀನುಗಳನ್ನು ಸಾಮಾನ್ಯವಾಗಿ ಸೊಳ್ಳೆ ಮೀನು ಎಂದು  ಕರೆಯಲಾಗುತ್ತದೆ. ಈ ಮೀನನ್ನು ಪ್ರಥಮ ಬಾರಿಗೆ 1928ರಲ್ಲಿ  ಇಟಲಿಯಿಂದ ಬೆಂಗಳೂರಿಗೆ ಪರಿಚಯಿಸಲಾಯಿತು. ಈ ಮೀನು ಗಾತ್ರದಲ್ಲಿ ಚಿಕ್ಕದಾಗಿದುದ, ಸೊಳ್ಳೆಗಳ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಇವುಗಳು ಕೊಳ, ಕೆರೆ, ಕಟ್ಟೆಘಿ, ಹಾಗೂ ಹೊಂಡಗಳಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳ ಲಾರ್ವಗಳನ್ನು  ತಿಂದು ಹಾಕುತ್ತವೆ ಎನ್ನುವುದರ ಮಾಹಿತಿಯೊಂದಿಗೆ ಮೀನುಗಳ ಪ್ರದರ್ಶನ ಮಾಡಲಾಗಿದೆ.
ಬಯೋಫ್ಲಾಕ್ ಮೀನು ಕೃಷಿ : ಬಯೋಫ್ಲಾಕ್ ಮೀನು ಕೃಷಿಯು, ಜಲಕೃಷಿ ವ್ಯವಸ್ಥೆಯಾಗಿದ್ದುಘಿ, ಜಲಚರ ಜೀವಿಗಳು ಹೊರಹಾಕುವ ತ್ಯಾಜ್ಯವನ್ನು ಬಳಸಿಕೊಂಡು ಬಯೋಫ್ಲಾಕ್ ಬೆಳೆಯುವಂತೆ ಮಾಡಿ, ಅದನ್ನು ಮೀನು,ಸೀಗಡಿಗಳು ಆಹಾರವಾಗಿ ಬಳಕೆಯಾಗುವಂತೆ ಮಾಡುವ ತಂತ್ರಗಾರಿಕೆ ಇದಾಗಿದೆ. ಈ ತರಹದ ಮೀನು ಕೃಷಿ ಮಾಡುವ ವಿಧಾನವನ್ನು ಸಂಪೂರ್ಣವಾಗಿ ತೋರಿಸಲಾಗುತ್ತಿದೆ.
ತಿಲಾಪಿಯಾ, ಮರಲ್ ಮೀನುಗಳನ್ನು ವರ್ಷಕ್ಕೆ ಎರಡು ಬಾರಿ ಬೆಳೆ ಪಡೆಯಬಹುದಾದ ವಿಧಾನಗಳ ಮಾಹಿತಿ ನೀಡಲಾಗುತ್ತಿದೆ. ಮೀನುಗಾರಿಕೆ ಮಾಡಲು, ಕೆರೆ,ನದಿಗಳಲ್ಲಿ ಮೀನುಗಳನ್ನು ಹಿಡಿಯಲು ಬಳಸುವ ಪರಿಕರಗಳನ್ನು ಪ್ರದರ್ಶನ ಮಾಡಲಾಗಿದೆ.
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ, ರಾಜ್ಯ ಸರಕಾರದ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ, ಬಾವಿ ಮತ್ತು ನೀರಾವರಿ ಹೊಂಡಗಳಲ್ಲಿ ಮೀನು ಕೃಷಿಗೆ ಸಹಾಯ ಧನ ಮಾಹಿತಿ, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಿಗುವ ಯೋಜನೆಗಳು ಮಾಹಿತಿಯನ್ನು ನೀಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಮೈಸೂರಿನ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್  ಅವರು, ಅಲಿಗೇಟರ್ ಘಾರ್  ಮೀನನ್ನು ಯಾಕೆ ನಿರ್ಬಂಧಿಸಲಾಗಿದೆ ಎಂಬುವುದರ ಕುರಿತು ಮೀನಿನೊಂದಿಗೆ ಮಾಹಿತಿ ಹಾಕಲಾಗಿದೆ. ಅಲ್ಲದೇ,  ಬಣ್ಣಬಣ್ಣದ , ಅಲಂಕಾರಿಕ ಮೀನುಗಳನ್ನು ನೋಡಲು ಬರುತ್ತಿದ್ದಾರೆ ಎಂದಿದ್ದಾರೆ.

Share This Article
Leave a Comment