ಮೂವರಿಗೆ ಸಹಕಾರ ಮಿತ್ರ ಪ್ರಶಸ್ತಿ ಪ್ರಧಾನ 

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಹಿರಿಯ ಹೋಟೆಲ್ ಉದ್ಯಮಿಗಳಾದ ಬಿ.ವಿಜಯಲಕ್ಷ್ಮಿ ಹಯವದನ ಆಚಾರ್, ಬಿ.ಬಾಲಕೃಷ್ಣಭಟ್ ಹಾಗೂ ಡಿ.ಚಂದ್ರಶೇಖರ್ ಶೆಟ್ಟಿ  ಅವರಿಗೆ ಸಹಕಾರ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೈಸೂರಿನ ಬಿ.ಎನ್.ರಸ್ತೆಯ ಪೈ ವಿಸ್ತಾ ಹೋಟೆಲ್ ಹೋಟೆಲ್ ಮಾಲೀಕರ ಪತ್ತಿನ  ಸಹಕಾರ ಸಂಘದ ೩೦ನೇ ವಾರ್ಷಿಕೋತ್ಸವ ಹಾಗೂ ಹಿರಿಯ ಹೋಟೆಲ್ ಉದ್ಯಮಿಗಳಿಗೆ ಸಹಕಾರ ಮಿತ್ರ ಪ್ರಶಸ್ತಿ ಪ್ರದಾನ ಮಾಡಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ಶ್ರೀ ನಿಶ್ಚಲಾನಂದ ನಾಥ ಸ್ವಾಮೀಜಿ ಅವರು ಮಾತನಾಡಿದರು.
ಪ್ರತಿ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಲು ಹೋಟೇಲ್‌ಗಳ ಪಾತ್ರ ಬಹಳ ದೊಡ್ಡದು ಎಂದು ತಿಳಿಸಿದರು.
ಹೋಟೇಲ್ ಮಾಲೀಕರು ದಸರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಅತ್ಯುತ್ತಮ ಆತಿಥ್ಯ ನೀಡುವ ಮೂಲಕ ದಸರಾ ಯಶಸ್ಸಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದಾರೆ. ದಸರಾದ ಯಾವುದೇ ಕಾರ್ಯಕ್ರಮ ನೋಡಿಕೊಂಡು ಬರುವವರಿಗೆ ತಡರಾತ್ರಿವರೆಗೂ ರುಚಿ, ಶುಚಿತ್ವದ ಆಹಾರ ನೀಡುವ ಮೂಲಕ ಮೈಸೂರು ಆತಿಥ್ಯ ಪ್ರಪಂಚದಾದ್ಯಂತ ಹೆಸರು ವಾಸಿಯಾಗಿದೆ. ದಸರಾ ಮಾತ್ರವಲ್ಲದೇ ಇಂದು ಹೋಟೇಲ್ ಮಾಲೀಕರು ಗುಣಮಟ್ಟದ ಆಹಾರ ನೀಡುವ ಮೂಲಕ  ಭಾರತದ ಆರೋಗ್ಯ ಸ್ಥಿತಿಗೆ ಕೊಡಗುಗೆ ನೀಡುತ್ತಿದ್ದಾರೆ. ಆತಿಥ್ಯ  ಶಿಸ್ತಿನಿಂದ ಕೂಡಿದರೆ, ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಹೋಟೆಲ್ ಒಂದು ದಿನ ಬಂದ್ ಮಾಡಿದರೆ, ಸರ್ಕಾರ ಊಟ ನೀಡಲು ಸಾಧ್ಯವಿಲ್ಲ. ಸರ್ಕಾರದ ಬದಲು ಹೋಟೇಲ್ ಮಾಲೀಕರು ಆ  ಪಾಲುದಾರಿಕೆ ವಹಿಸಿಕೊಂಡಿದ್ದಾರೆ. ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ.  ಹೊಟೇಲ್ ಮಾಲೀಕರ ಸಂಘದ ಉತ್ತಮ ಕೆಲಸವನ್ನು ಗುರುತಿಸಬೇಕು ಎಂದರು.
ಹೋಟೇಲ್ ಮಾಲೀಕರು ತಮ್ಮ ಕೆಲಸ ನಡುವೇ ಸಮಾಜ ಸೇವೆಯಲ್ಲಿಯೀ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ   ಇಂದು ಮೂವರು ಹಿರಿಯರನ್ನು ಆಯ್ಕೆ ಮಾಡಿರುವವರು ನೀಡಿದರೆ,  ಸ್ಫೂರ್ತಿ ತುಂಬುವ ವ್ಯಕ್ತಿಗಳಾಗಿದ್ದಾರೆ. ಅವರ ಸೇವೆ ಹೀಗೆ ನಿರಂತರವಾಗಿ ಮುಂದುವರೆಯಲ್ಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನಾರಾಯಣ ವಿ.ಹೆಗಡೆ ಹಾಗೂ ಉಪಾಧ್ಯಕ್ಷ ಆನಂದ ಎಂ.ಶೆಟ್ಟಿ, ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment